ಬುಕ್ಕಿಂಗ್‌ನಲ್ಲಿ ಸುಂಟರಗಾಳಿ: ಈ ಚೀನಾ ಮೂಲದ ಕಾರಿನ ಖರೀದಿಗಾಗಿ ಮುಗಿಬಿದ್ದ ಜನ!

ಜನಪ್ರಿಯ ಬಿವೈಡಿ (BYD) ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದೆ. ಗ್ರಾಹಕರ ಸ್ಪಂದನೆಗೆ ತಕ್ಕಂತೆ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಹೊಸ ಶೋರೂಂಗಳನ್ನು ತೆರೆಯುತ್ತಿದೆ. ಇತ್ತೀಚೆಗೆ ಬಿವೈಡಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಬಹುನಿರೀಕ್ಷಿತ ಹೊಸ ಬಿವೈಡಿ ಸೀಲ್ (BYD Seal) ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿತು.

ಹೊಸ ಬಿವೈಡಿ ಸೀಲ್ ಎಲೆಕ್ಟ್ರಿಕ್ ಕಾರು ಖರೀದಿಗಾಗಿ ಬುಕಿಂಗ್ ಅನ್ನು ಮಾರ್ಚ್ 6 ರಂದು ಪ್ರಾರಂಭಿಸಿತು. ಈ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತವನ್ನು ರೂ 1 ಲಕ್ಷವನ್ನು ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು. ಇದೀಗ ಬಿವೈಡಿ ಸೀಲ್ ದೇಶದಲ್ಲಿ 500-ಯೂನಿಟ್ ಬುಕಿಂಗ್ ಮೈಲಿಗಲ್ಲನ್ನು ಸಾಧಿಸಿದೆ. ಕಡಿಮೆ ಅವಧಿಯಲ್ಲಿ ಈ ಪ್ರೀಮಿಯಂ ಕಾರು ಭರ್ಜರಿ ಬುಕ್ಕಿಂಗ್ ಪಡೆದುಕೊಂಡಿದೆ.

BYD Seal

ಹೊಸ ಬಿವೈಡಿ ಎಲೆಕ್ಟ್ರಿಕ್ ಕಾರು ಡೈನಾಮಿಕ್, ಪ್ರೀಮಿಯಂ ಮತ್ತು ಪರ್ಫಾರ್ಮೆನ್ಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಬಿವೈಡಿ ಸೀಲ್ ಎಲೆಕ್ಟ್ರಿಕ್ ಸೆಡಾನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.41.00 ಲಕ್ಷದಿಂದ ರೂ 53.00 ಲಕ್ಷವಾಗಿದೆ. Atto 3 ಎಸ್‍ಯುವಿಯಂತೆಯೇ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಸೆಡಾನ್ 4,800 ಎಂಎಂ ಉದ್ದ, 1,875 ಎಂಎಂ ಅಗಲ ಮತ್ತು 1,460 ಎಂಎಂ ಎತ್ತರವನ್ನು ಹೊಂದಿದೆ.

ಇನ್ನು ಇದು 2,920 ಎಂಎಂ ವೀಲ್‌ಬೇಸ್ ಹೊಂದಿದೆ. ಈ ಹೊಸ ಬಿವೈಡಿ ಸೀಲ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಓಷನ್ ಎಕ್ಸ್ ಕಾನ್ಸೆಪ್ಟ್ ಮಾದರಿಯಿಂದ ಸ್ಫೂರ್ತಿ ಪಡೆದಿದೆ. ಈ ಎಲೆಕ್ಟ್ರಿಕ್ ಮಾದರಿಯು ಕೂಪ್ ತರಹದ ಗ್ಲಾಸ್ ರೂಫ್, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ನಾಲ್ಕು ಬೂಮರಾಂಗ್-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು, ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸ ಮತ್ತು ಹಿಂಭಾಗದಲ್ಲಿ ಪೂರ್ಣ-ಅಗಲದ ಎಲ್ಇಡಿ ಲೈಟ್ ಬಾರ್ ಹೊಂದಿದೆ.

BYD Seal

ಈ ಎಲೆಕ್ಟ್ರಿಕ್ ಸೆಡಾನ್ ಡ್ಯಾಶ್‌ಬೋರ್ಡ್‌ನಲ್ಲಿ ಡಿಜಿಟಲ್ ಹೆವಿ ಲೇಔಟ್ ಅನ್ನು ಹೊಂದಿದ್ದು, ಇದು ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಒಂದು ಜೋಡಿ ಫ್ರೀ-ಸ್ಟ್ಯಾಂಡಿಂಗ್ ಸ್ಕ್ರೀನ್‌ಗಳನ್ನು ಹೊಂದಿದೆ. ಈ ಕಾರಿನಲ್ಲಿ ಒಂಬತ್ತು ಏರ್‌ಬ್ಯಾಗ್‌ಗಳು, ಟ್ರಾಕ್ಷನ್ ಕಂಟ್ರೋಲ್, ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 15.6-ಇಂಚಿನ ಟಚ್‌ಸ್ಕ್ರೀನ್‌ನಂತಹ ಸ್ಟ್ಯಾಂಡರ್ಡ್ ಫಿಚರ್ಸ್ ಹೊಂದಿದೆ.

ಈ ಕಾರಿನ ಟಾಪ್ ರೂಪಾಂತರಗಳು ಹೆಡ್ಸ್-ಅಪ್ ಡಿಸ್ಪ್ಲೇ, ಟಾರ್ಕ್ ವೆಕ್ಟರಿಂಗ್ ಸಿಸ್ಟಮ್, ಡೋರ್ ಮಿರರ್‌ಗಳಿಗೆ ಮೆಮೊರಿ ಫಂಕ್ಷನ್, ಡ್ರೈವರ್ ಸೀಟ್ ಮೆಮೊರಿ ಮತ್ತು ವೇಗದ ಚಾರ್ಜಿಂಗ್ ಬೆಂಬಲದಂತಹ ಫಿಚರ್ಸ್ ಪಡೆಯುತ್ತವೆ. ಇದರೊಂದಿಗೆ ADAS ಕಾರ್ಯಗಳಲ್ಲಿ ಲೇನ್ ಡಿಪರ್ಚರ್ ವಾರ್ನಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಅಸಿಸ್ಟ್ ಸೇರಿವೆ.

BYD Seal

ಈ ಎಲೆಕ್ಟ್ರಿಕ್ ಕಾರಿನ ರೇರ್-ವ್ಹೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ರೂಪಾಂತರಗಳಲ್ಲಿ ಲಭ್ಯವಿದೆ. ಸೆಡಾನ್ ಅನ್ನು ಎರಡು-ಹಿಂಭಾಗದ ವೀಲ್ ಡ್ರೈವ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಈ ಕಾರಿನ ಬೇಸ್ ಡೈನಾಮಿಕ್ ರೂಪಾಂತರವು 201 bhp ಮತ್ತು 310 Nm ಟಾರ್ಕ್ ಅನ್ನು ಉತ್ಪಾದಿಸಿದರೆ, ಪ್ರೀಮಿಯಂ ಟ್ರಿಮ್‌ನಲ್ಲಿ ಹೆಚ್ಚು 308 bhp ಪವರ್ ಮತ್ತು 360 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಕಾರಿನ ಟಾಪ್-ಸ್ಪೆಕ್ ಪರ್ಫಾರ್ಮೆನ್ಸ್ ಟ್ರಿಮ್ ಆಲ್-ವೀಲ್ ಡ್ರೈವ್ ಪವರ್‌ಟ್ರೇನ್ ಅನ್ನು ಸಂಯೋಜಿತ 523 bhp ಮತ್ತು 670 Nm ಅನ್ನು ಉತ್ಪಾದಿಸುತ್ತದೆ. ಆಲ್-ವೀಲ್ ಡ್ರೈವ್ ಮಾದರಿಯು ಅಡಾಪ್ಟಿವ್ ಡ್ಯಾಂಪರ್‌ಗಳಲ್ಲಿ ಪ್ಯಾಕ್ ಮಾಡುತ್ತದೆ. ಸ್ಟ್ಯಾಂಡರ್ಡ್ ರೂಪಾಂತರದ 61.44 kWh ಬ್ಯಾಟರಿ ಪ್ಯಾಕ್‌ನಲ್ಲಿ ಪ್ಯಾಕ್ ಅನ್ನು ಹೊಂದಿದ್ದು, ಇದು 510 ಕಿಮೀ ರೇಂಜ್ ಅನ್ನು ನೀಡುತ್ತದೆ.

BYD Seal

ಟಾಪ್ ಪರ್ಫಾಮೆನ್ಸ್ ರೂಪಾಂತರ ಮತ್ತು AWD ಮಾದರಿಗಳು ದೊಡ್ಡ 82.56 kWh ಬ್ಯಾಟರಿಯಲ್ಲಿ ಪ್ಯಾಕ್ ಅನ್ನು ಹೊಂದಿದೆ. ಇದು RWD ನಲ್ಲಿ 650 ಕಿಮೀ ಮತ್ತು AWD ಮಾದರಿಯು 580 ಕಿ.ಮೀ ರೇಂಜ್ ಅನು ನೀಡುತ್ತದೆ. ಚಾರ್ಜಿಂಗ್‌ಗೆ ಬರುವುದಾದರೆ, ಎಲ್ಲಾ ರೂಪಾಂತರಗಳು 7 kW AC ಫಾಸ್ಟ್ ಚಾರ್ಜಿಂಗ್ ಅನ್ನು ಹೊಂದಿದೆ. ಮತ್ತು ಮೂಲ ರೂಪಾಂತರಗಳೊಂದಿಗೆ 110 kW DC ಫಾಸ್ಟ್ ಚಾರ್ಜಿಂಗ್ ಸೆಟಪ್ ಆಗಿದೆ.

More from DriveSpark

Article Published On: Thursday, March 21, 2024, 11:25 [IST]
English summary
New byd seal receives 500 units booking detals
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+