Honda: ಮಾರುತಿ ಡಿಜೈರ್ ಪ್ರತಿಸ್ಪರ್ಧಿ.. ನೂತನ ಅಮೇಜ್ ಶೋರೂಂಗೆ ಬಂದೇ ಬಿಡ್ತು, ಬೆಲೆ ಎಷ್ಟು, ವಿಶೇಷತೆಗಳೇನು?
ಹೋಂಡಾ ಕಾರ್ಸ್ ಇಂಡಿಯಾ (Honda Cars India), ಬುಧವಾರ ಹೊಸ ತಲೆಮಾರಿನ ಅಮೇಜ್ (Amaze) ಸೆಡಾನ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಈ ಕಾರು ಕೈಗೆಟುಕುವ ಬೆಲೆಗೆ ಮಾರಾಟಕ್ಕೆ ಬಂದಿದ್ದು, ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸದ್ಯ, ದೇಶಾದ್ಯಂತ ವಿವಿಧ ಡೀಲರ್‌ಶಿಪ್‌ಗಳಿಗೆ ಹೊಚ್ಚ ಹೊಸ 'ಹೋಂಡಾ ಅಮೇಜ್' ಸೆಡಾನ್‌ನ್ನು ಕಂಪನಿಯು ತಲುಪಿಸುವುದಕ್ಕೆ ಶುರು ಮಾಡಿದ್ದು, ಬುಕ್ಕಿಂಗ್ ಕೂಡ ತೆರೆಯಲಾಗಿದೆ ಎಂದು ವರದಿಯಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ಕಾರಿನ ವಿತರಣೆಗಳು ಅತಿ ಶೀಘ್ರದಲ್ಲಿ ಆರಂಭವಾಗಲಿದೆ.
ದೇಶೀಯ ಗ್ರಾಹಕರು ನೂತನ ಹೋಂಡಾ ಅಮೇಜ್ (Honda Amaze) ಸೆಡಾನ್‌ನ್ನು ಸುಲಭವಾಗಿ ಖರೀದಿ ಮಾಡಬಹುದು. ಇದು ಕನಿಷ್ಠ ರೂ.7.99 ಲಕ್ಷ ಮತ್ತು ಗರಿಷ್ಠ ರೂ.10.90 ಲಕ್ಷ (ಎಕ್ಸ್ ಶೋರೂಂ) ದರವನ್ನು ಒಳಗೊಂಡಿದೆ. ವಿ, ವಿಎಕ್ಸ್ ಹಾಗೂ ಝಡ್ಎಕ್ಸ್ ಎಂಬ ಮೂರು ಅತ್ಯಾಧುನಿಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ.

ಈ ಕಾರು ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಪಡೆದಿದೆ. ಇದರಲ್ಲಿ 5 ಜನರು ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು 416 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ರೇಡಿಯಂಟ್ ರೆಡ್ ಮೆಟಾಲಿಕ್, ಅಬ್ಸಿಡಿಯನ್ ಬ್ಲೂ ಪರ್ಲ್, ಗೋಲ್ಡನ್ ಬ್ರೌನ್ ಮೆಟಾಲಿಕ್ ಮತ್ತು ಮೆಟಿರೊಯ್ಡ್ ಗ್ರೇ ಮೆಟಾಲಿಕ್ ಎಂಬ 6 ಬಣ್ಣಗಳೊಂದಿಗೂ ಸಿಗುತ್ತದೆ.
ಹೊಚ್ಚ ಹೊಸ ಹೋಂಡಾ ಅಮೇಜ್ ಸೆಡಾನ್, ಶಕ್ತಿಯುತವಾದ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 6,000 ಆರ್‌ಪಿಎಂನಲ್ಲಿ 89 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 4,800 ಆರ್‌ಪಿಎಂನಲ್ಲಿ 110 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್
ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್/ ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. 19.46 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ.

ಈ ಕಾರು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, 6-ಸ್ಪೀಕರ್ ಸೌಂಡ್ ಸಿಸ್ಟಮ್, 3-ಸ್ಪೋಕ್ ಸ್ಟೀರಿಂಗ್ ವೀಲ್ ಹಾಗೂ ಪ್ಯಾಡಲ್ ಶಿಫ್ಟರ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ನೂತನ ಹೋಂಡಾ ಅಮೇಜ್ ಸೆಡಾನ್ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಎಡಿಎಸ್ಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಾಗೂ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಹೊಂದಿದೆ.
ಇನ್ನು, ಹೋಂಡಾ ಅಮೇಜ್ ಸೆಡಾನ್‌ಗೆ ಮಾರುತಿ ಸುಜುಕಿ ಡಿಜೈರ್ ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಜೊತೆಗೆ ಹ್ಯುಂಡೈ ಔರಾ ಹಾಗೂ ಟಾಟಾ ಟಿಗೂರ್ ಕಾರುಗಳು ಸಹ ನೇರ ಎದುರಾಳಿಯಾಗಿವೆ. ನೂತನ ಅಮೇಜ್ ಸೆಡಾನ್ ವಿತರಣೆಗಳು ಶುರುವಾದ ಮೇಲೆ ದೇಶೀಯ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Image Source: Carwale


Click it and Unblock the Notifications








