ದೀಪಾವಳಿ ಹಬ್ಬಕ್ಕೆ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹೊಸ ಹೋಂಡಾ ಕಾರು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ 2024ರ ಹೋಂಡಾ ಅಮೇಜ್ ಸಬ್-4 ಮೀಟರ್ ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಎರಡನೇ ಜನರೇಷನ್ ಹೋಂಡಾ ಅಮೇಜ್ 2018 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಈಗಾಗಲೇ ಒಂದೆರಡು ಬದಲಾವಣೆಗಳನ್ನು ಪಡೆದುಕೊಂಡಿದೆ.
ಹೊಸ ಹೋಂಡಾ ಅಮೇಜ್ (Honda Amaze) ಕಾರು ಈ ವರ್ಷದ ದೀಪಾವಳಿ ಹಬ್ಬದ ಅವಧಿಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಹೋಂಡಾ ಅಮೇಜ್ ಅನ್ನು ಸಿಟಿ ಮತ್ತು ಎಲಿವೇಟ್ ಮಿಡ್ ಸೈಜ್ ಎಸ್‍ಯುವಿಗೆ ಆಧಾರವಾಗಿರುವ ಅದೇ ಫ್ಲಾಟ್ ಫಾರ್ಮ್ ನಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಈ ಪ್ಲಾಟ್‌ಫಾರ್ಮ್ ಅನ್ನು ಸಬ್ -4 ಮೀಟರ್ ಕಾರಿಗೆ ಅಳವಡಿಸಲು ಮಾರ್ಪಡಿಸಲಾಗುತ್ತದೆ. ಹೊಸ ಅಮೇಜ್ ಮಾದರಿಯು ಸಿಟಿ ಸೆಡಾನ್ ಗಿಂತ 2600mm ಕಡಿಮೆ ವೀಲ್‌ಬೇಸ್ ಅನ್ನು ಹೊಂದಿರುತ್ತದೆ.

ಪ್ರಸ್ತುತ ಅಮೇಜ್ ಮಾದರಿಯು 2,470mm ವ್ಹೀಲ್‌ಬೇಸ್ ಅನ್ನು ಹೊಂದಿದ್ದು ಅದು ಸಿಟಿ ಸೆಡಾನ್‌ಗಿಂತ 130mm ಚಿಕ್ಕದಾಗಿದೆ. ಹೊಸ ಮಾದರಿಯು ಇದೇ ರೀತಿಯ ವ್ಹೀಲ್‌ಬೇಸ್ ಮತ್ತು ಆಯಾಮಗಳನ್ನು ಮುಂದುವರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಹೊಸ ಹೋಂಡಾ ಅಮೇಜ್ ಕಾರು ಸ್ಟೈಲಿಶ್ ವಿನ್ಯಾಸವು ಮತ್ತಷ್ಟು ಆಕರ್ಷಕವಾಗಿರುತ್ತದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿರುವ ದೊಡ್ಡ ಹೋಂಡಾ ಸೆಡಾನ್‌ಗಳಿಂದ ಸ್ಫೂರ್ತಿ ಪಡೆಯುತ್ತದೆ.
ಎರಡನೇ ತಲೆಮಾರಿನ ಅಮೇಜ್ ಸ್ಟೈಲಿಂಗ್ ಅಕಾರ್ಡ್ ಸೆಡಾನ್‌ನಿಂದ ಪ್ರೇರಿತವಾಗಿದೆ. ಥರ್ಡ್-ಜೆನರೇಷನ್ ಅಮೇಜ್ ಪ್ರಸ್ತುತ ಜನರೇಷನ್ ಅಕಾರ್ಡ್‌ನಿಂದ ಸ್ಟೈಲಿಂಗ್ ಸೂಚನೆಗಳನ್ನು ಹಂಚಿಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಹೊಸ ಅಮೇಜ್‌ನ ಕ್ಯಾಬಿನ್ ಎಲಿವೇಟ್ ಮಧ್ಯಮ ಗಾತ್ರದ ಸೆಡಾನ್‌ನಿಂದ ಲೇಔಟ್ ಮತ್ತು ವೈಶಿಷ್ಟ್ಯಗಳನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ.

ಈ ಕಾರಿನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಅನ್ನು ಪಡೆಯಬಹುದು. ಸೆಡಾನ್ ಹೊಸ ಸಿಟಿ ಮತ್ತು ಎಲಿವೇಟ್‌ನಿಂದ ಹಲವಾರು ಆಂತರಿಕ ಘಟಕಗಳನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ. ಇನ್ನು ವರದಿಗಳ ಪ್ರಕಾರ ಹೊಸ ಜನರೇಷನ್ ಅಮೇಜ್ ಹೋಂಡಾ ಸೆನ್ಸಿಂಗ್ ಸೂಟ್ ಅನ್ನು ಸಹ ಪಡೆಯಬಹುದು.
ಹೊಸ ಕಾರು ಅಶ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ - ADAS ತಂತ್ರಜ್ಞಾನವು ಲೇನ್ ಕೀಪ್ ಅಸಿಸ್ಟ್, ಲೇನ್ ಕಿಪಿಂಗ್ ಅಸಿಸ್ಟ್, ಕೊಲಿಷನ್ ಬ್ರೇಕಿಂಗ್ ಸಿಸ್ಟಮ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಹೈ ಬೀಮ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.

ಈ ಹೊಸ ಹೋಂಡಾ ಅಮೇಜ್ ಕಾರಿನಲ್ಲಿ ಅದೇ 1.2-ಲೀಟರ್ 4-ಸಿಲಿಂಡರ್, ನ್ಯ್ಯಾಚುರಲ್ ಆಕಾಂಕ್ಷೆಯ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡುವುದನ್ನು ಮುಂದುವರಿಸಲಾಗುತ್ತದೆ. ಈ ಎಂಜಿನ್ 90bhp ಮತ್ತು 110Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ತ್ತು CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.
ಇನ್ನು ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಎಲಿವೇಟ್ ಅನ್ನು ಈಗ ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್ (CSD) ಮೂಲಕ ಮಾರಾಟ ಮಾಡಲಾಗುವುದು ಎಂದು ಘೋಷಿಸಿದೆ . ಇದನ್ನು ಸಶಸ್ತ್ರ ಪಡೆಗಳ ಸಿಬ್ಬಂದಿ, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ವಿಶೇಷ ಬೆಲೆಯಲ್ಲಿ ನೀಡಲಾಗುವುದು. ಇಲ್ಲಿಯವರೆಗೆ, ಸಿಎಸ್‌ಡಿಯಲ್ಲಿ ಅಮೇಜ್ ಮತ್ತು ಸಿಟಿ ಮಾತ್ರ ನೀಡಲಾಗುತ್ತಿತ್ತು. ಈಗ, ಎಲಿವೇಟ್ ಎಸ್‌ಯುವಿ ಲಭ್ಯತೆಯೊಂದಿಗೆ, ಹೋಂಡಾದ ಪೋರ್ಟ್‌ಫೋಲಿಯೊದ ಕಾರುಗಳನ್ನು ಸಿಎಸ್‌ಡಿ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








