ಬ್ಲ್ಯಾಕ್ ಬ್ಯೂಟಿ: ಸ್ಟೈಲಿಷ್ ಲುಕ್‌ನಲ್ಲಿ ಹ್ಯುಂಡೈ ಕ್ರೆಟಾ ನೈಟ್ ಎಡಿಷನ್ ಬಿಡುಗಡೆ: ಏನಿದರ ವಿಶೇಷತೆ?

ಹ್ಯುಂಡೈ ಕ್ರೆಟಾ (Hyundai Creta) ಹ್ಯುಂಡೈ ಕಂಪನಿಯ ಭರ್ಜರಿ ಬೇಡಿಕೆ ಹೊಂದಿರುವ ಕಾರ್ ಆಗಿದೆ. ಈ ವರ್ಷದ ಆರಂಭದಲ್ಲಿ ಹ್ಯುಂಡೈ ಫೇಸ್‌ಲಿಫ್ಟೆಡ್ ಕ್ರೆಟಾ ಎಸ್‌ಯುವಿಯನ್ನು ಬಿಡುಗಡೆ ಮಾಡಿತು. ಬಳಿಕ ಕೆಲವೇ ಅವಧಿ ಬಳಿಕ ಹ್ಯುಂಡೈ ಕಂಪನಿಯು ಕ್ರೆಟಾ ಎಸ್‍ಯುವಿಯ ಸ್ಪೋರ್ಟಿಯರ್ ಮಾದರಿಯಾದ ಕ್ರೆಟಾ ಎನ್ ಲೈನ್ ಮಾದರಿಯನ್ನು ಬಿಡುಗಡೆಗೊಳಿಸಿತು. ಹುಂಡೈ ಕ್ರೆಟಾ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಹಲವಾರು ವರ್ಷಗಳಿಂದ ಮಾರಾಟವಾಗಿದ್ದರೂ, ಇದು ಭಾರತೀಯ ಖರೀದಿದಾರರನ್ನು ಆಕರ್ಷಿಸುತ್ತಲೇ ಇದೆ. ಇದೀಗ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಹೊಸ ಕ್ರೆಟಾ ನೈಟ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.

ಹ್ಯುಂಡೈ ಕ್ರೆಟಾ ನೈಟ್ ಎಡಿಷನ್ (Hyundai Creta Knight Edition) ಸಂಪೂರ್ಣ ಬ್ಲ್ಯಾಕ್ ಬಣ್ಣದಲ್ಲಿದ್ದು, ಇದು ಈ ವರ್ಷದ ಆರಂಭದಲ್ಲಿ ಬಂದ ಫೇಸ್‌ಲಿಫ್ಟೆಡ್ ಮಾಡೆಲ್ ಅನ್ನು ಆಧರಿಸಿದೆ. ಹೊಸ ಹ್ಯುಂಡೈ ಕ್ರೆಟಾ ನೈಟ್ ಎಡಿಷನ್ ಮಾದರಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.14.51 ಲಕ್ಷದಿಂದ ರೂ.20.15 ಲಕ್ಷವಾಗಿದೆ. ಹೊಸ ಕ್ರೆಟಾ ನೈಟ್ ಬಾಹ್ಯ ಮತ್ತು ಒಳಭಾಗಕ್ಕೆ 21 ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಕಪ್ಪು ಬಣ್ಣದ ಸ್ಕೀಮ್ ಅನ್ನು ಪಡೆಯುತ್ತದೆ.

Hyundai Creta Knight Edition

2024ರ ಹ್ಯುಂಡೈ ಕ್ರೆಟಾ ನೈಟ್ ಎಡಿಷನ್ ಹೊರಭಾಗವು ಪ್ರಬಲವಾದ ಬ್ಲ್ಯಾಕ್ ಮುಂಭಾಗದ ರೇಡಿಯೇಟರ್ ಗ್ರಿಲ್, ಮ್ಯಾಟ್ ಬ್ಲ್ಯಾಕ್ ಹ್ಯುಂಡೈ ಲೋಗೊಗಳು, ರೆಡ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ 17-ಇಂಚಿನ ಬ್ಲ್ಯಾಕ್ ಅಲಾಯ್ ವ್ಹೀಲ್ ಗಳು ಮತ್ತು ವಿಶಿಷ್ಟವಾದ ನೈಟ್ ಲೋಗವನ್ನು ಪ್ರದರ್ಶಿಸುತ್ತದೆ. ಹೆಚ್ಚುವರಿ ಬ್ಲ್ಯಾಕ್ ಅಸ್ಸೆಂಟ್ ಗಳಲ್ಲಿ ಸ್ಕಿಡ್ ಪ್ಲೇಟ್‌ಗಳು, ರೂಫ್ ರೈಲ್‌ಗಳು, ORVM ಗಳು ಮತ್ತು ಸ್ಪಾಯ್ಲರ್ ಸೇರಿವೆ.

ಹ್ಯುಂಡೈ ಕ್ರೆಟಾ ನೈಟ್ ಎಡಿಷನ್ ಒಳಭಾಗದಲ್ಲಿ ವಿಶೇಷವಾದ ಬ್ಲ್ಯಾಕ್ ಲೆದರ್ ಸೀಟ್ ಅಪ್ಹೋಲ್ಸ್ಟರಿ ಮತ್ತು ಸ್ಪೋರ್ಟಿ ಮೆಟಲ್ ಪೆಡಲ್ಗಳಂತಹ ಪ್ರೀಮಿಯಂ ಸ್ಪರ್ಶಗಳೊಂದಿಗೆ ಎಲ್ಲಾ-ಕಪ್ಪು ಥೀಮ್ ಅನ್ನು ಅನುಸರಿಸುತ್ತದೆ. ಇನ್ನು ಸ್ಟೀರಿಂಗ್ ವ್ಹೀಲ್ ಮತ್ತು ಗೇರ್ ಬೂಟ್ ಅನ್ನು ಲೆದರ್ ಹೊಲಿಗೆಯೊಂದಿಗೆ ಒಳಭಾಗದ ಒಟ್ಟಾರೆ ಸೌಂದರ್ಯವನ್ನು ಹೆಚ್ಚಿಸುತ್ತದೆ.

Hyundai Creta Knight Edition

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ತರುಣ್ ಗಾರ್ಗ್ ಅವರು ಮಾತನಾಡಿ, ಕ್ರೆಟಾ ನೈಟ್ ಕೇವಲ ಎಸ್‌ಯುವಿಗಿಂತ ಹೆಚ್ಚು - ಇದು ಕಮಾಂಡಿಂಗ್ ರಸ್ತೆ ಉಪಸ್ಥಿತಿ, ದಪ್ಪ ವಿನ್ಯಾಸ ಮತ್ತು ವಿಶೇಷವಾದ ಬ್ಲ್ಯಾಕ್ ಬಣ್ಣವನ್ನು ಪ್ರತಿಪಾದಿಸುವ ಹೇಳಿಕೆಯಾಗಿದೆ. -ಕ್ರೆಟಾ ನೈಟ್ ವೈಶಿಷ್ಟ್ಯಗಳು. ಸ್ಟೈಲ್‌ನಲ್ಲಿ ಚಾಲನೆ ಮಾಡುವುದು ಎಂದರೆ ಏನು ಎಂಬುದನ್ನು ಮರುವ್ಯಾಖ್ಯಾನಿಸುತ್ತಾ, ಎಸ್‍ಯುವಿಯ ಬ್ಲ್ಯಾಕ್ ಬಣ್ಣದ ಆಕರ್ಷಣೆಯು ಗ್ರಾಹಕರಿಗೆ ಡೈನಾಮಿಕ್ ಡ್ರೈವಿಂಗ್ ಅನುಭವವನ್ನು ನೀಡುತ್ತದೆ ಎಂದರು.

ಮಾತನ್ನು ಮುಂದುವರೆಸಿ, ಜನಪ್ರಿಯ ಕ್ರೆಟಾ ಬ್ರ್ಯಾಂಡ್ ಅನ್ನು ಬಲಪಡಿಸುತ್ತದೆ. ಪವರ್, ಐಷಾರಾಮಿ ಮತ್ತು ಸಾಟಿಯಿಲ್ಲದ ರಸ್ತೆ ಉಪಸ್ಥಿತಿಯನ್ನು ಒಟ್ಟುಗೂಡಿಸಿ, ಗ್ರಾಹಕರ ಆಕಾಂಕ್ಷೆಯ ಪೂರೈಸಿ ಕ್ರೆಟಾ ನೈಟ್ ನಮ್ಮ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲನ್ನು ಗುರುತಿಸುತ್ತದೆ ಎಂದು ಹೇಳಿದರು. ಇನ್ನ್ ಈ ಹೊಸ ಹ್ಯುಂಡೈ ಕ್ರೆಟಾ ನೈಟ್ ಎಡಿಷನ್ ಮಾದರಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.

Hyundai Creta Knight Edition

ಈ ಹೊಸ ಹ್ಯುಂಡೈ ಕ್ರೆಟಾ ನೈಟ್ ಎಡಿಷನ್ ಮಾದರಿಯು 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ 6-ಸ್ಪೀಡ್ ಮ್ಯಾನುವಲ್ ಮತ್ತು IVT (CVT) ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಇದು 1.5-ಲೀಟರ್ ಡೀಸೆಲ್ ಜೊತೆಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ನೊಂದಿಗೆ ನೀಡಲಾಗುತ್ತದೆ. ಇನ್ನು ಕ್ರೆಟಾ ನೈಟ್ ಆವೃತ್ತಿಯು ನಿರ್ದಿಷ್ಟವಾಗಿ S (O) ಮತ್ತು SX (O) ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, September 4, 2024, 16:40 [IST]
English summary
New hyundai creta knight edition launched price details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+