ಕಿಯಾದಿಂದ ಹೊಸ ಕಾರು... ಅತ್ಯಾಧುನಿಕ ಫೀಚರ್ಸ್... 600 ಕಿ.ಮೀ ರೇಂಜ್... ಬಿಡುಗಡೆ ಯಾವಾಗ?
ಇತ್ತೀಚೆಗೆ ಅನಾವರಣಗೊಂಡ ಕಿಯಾ ಇವಿ 3 (Kia EV3) ಆಟೋಮೋಟಿವ್ ಉದ್ಯಮದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸುತ್ತಿದೆ. ಇದೇ ಉತ್ಸಾಹವನ್ನು ಉಳಿಸಿಕೊಳ್ಳಲು ಕಂಪನಿಯು ಇದೀಗ ಕಾರಿನ ಮೊದಲ ಅಧಿಕೃತ ಜಾಹೀರಾತನ್ನು ಪ್ರಸಾರ ಮಾಡಿದೆ. ಭಾರತವು EV3 ಕಾರಿಗೆ ಸಂಭಾವ್ಯ ಮಾರುಕಟ್ಟೆಯಾಗಿದ್ದು, ಇತರ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಕಿಯಾ' ತನ್ನ ಜಾಗತಿಕ ಎಲೆಕ್ಟ್ರಿಕ್ ವಾಹನಗಳನ್ನು ವಿಸ್ತರಿಸುವ ಪ್ರಯತ್ನವಾಗಿ, ಇವಿ 6 ಮತ್ತು ಇತ್ತೀಚೆಗೆ ಬಿಡುಗಡೆಯಾದ ಇವಿ 9 ನಿಂದ ಪ್ರಾರಂಭಿಸಿ, ಕಿಯಾ ಜಾಗತಿಕವಾಗಿ ತನ್ನ ಪ್ರಗತಿಯನ್ನು ಪ್ರಾರಂಭಿಸಿದೆ. ಎಲ್ಲಾ ರೀತಿಯ ಗ್ರಾಹಕರನ್ನು ಸೆಳೆಯಬೇಕಾದರೇ ಕಂಪನಿಗೆ ಸಣ್ಣ ಮತ್ತು ಹೆಚ್ಚು ಅಗ್ಗದ ಬೆಲೆಯ ಮಾದರಿಗಳ ಅಗತ್ಯವೂ ಇದೆ. ಅಂದರೆ ಕಿಯಾ ಇವಿ ಕಾರುಗಳು 3-ಸೀಟರ್ ಮತ್ತು 5-ಸೀಟರ್ ಕೂಡ ಇರಬೇಕು. ಈ ನಿಟ್ಟಿನಲ್ಲಿ Kia Ev6 ಮತ್ತು ev9 ನಂತಹ ದೈತ್ಯ ಕಾರುಗಳೊಂದಿಗೆ ಇದು ಸಾಧ್ಯವಾಗದ ಕಾರಣ, ಹೊಸ Kia EV3 ನೊಂದಿಗೆ ಆ ಜಾಗವನ್ನು ತುಂಬಬಹುದು.

ಕಂಪನಿಯು ಪ್ರಪಂಚದಾದ್ಯಂತ ಸುಮಾರು 2,00,000 ಕಿಯಾ EV3 ಕಾರುಗಳನ್ನು ಮಾತ್ರ ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಈ ಕಿಯಾ ಎಲೆಕ್ಟ್ರಿಕ್ ಕಾರಿನ ಬೆಲೆಗಳು USD 35,000 - 50,000 (ಅಂದಾಜು ರೂ. 30 ಲಕ್ಷ - ರೂ. 42 ಲಕ್ಷ) ಇರಬಹುದು. ಈ ಹೊಸ ಕಿಯಾ EV3 ಎಲೆಕ್ಟ್ರಿಕ್ ಕಾರು ಮೊದಲು ದಕ್ಷಿಣ ಕೊರಿಯಾ ಮಾರುಕಟ್ಟೆಯಲ್ಲಿ 2024ರ ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.
ಯುರೋಪ್‌ನಲ್ಲಿ 2024ರ ಕೊನೆಯಲ್ಲಿ ಮತ್ತು ಭಾರತ ಸೇರಿದಂತೆ ಏಷ್ಯ ಮಾರುಕಟ್ಟೆಗಳಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. ಆದರೆ ಈ ಬಗ್ಗೆ ಕಂಪನಿಯಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ವಿಷಯಕ್ಕೆ ಬಂದರೆ ದಕ್ಷಿಣ ಕೊರಿಯಾ ವಾಹನ ತಯಾರಕರ ಹೊಸ ಕಿಯಾ EV3 ಎಲೆಕ್ಟ್ರಿಕ್ ಕಾರಿನ ಜಾಹಿರಾತಿನ ಪ್ರಕಾರ ಅದರ ವಿಶೇಷತೆಗಳನ್ನು ನೋಡೋಣ.

ಒಳಭಾಗ ಮತ್ತು ಫೀಚರ್ಸ್: ಈ ಎಲೆಕ್ಟ್ರಿಕ್ ಕಾರಿನ ಒಳಭಾಗದಲ್ಲಿ, ಕಿಯಾದ EV9ನಂತಹ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ 30-ಇಂಚಿನ ವೈಡ್‌ಸ್ಕ್ರೀನ್ ಸೆಟಪ್ ಮತ್ತು ಅದರ ಸಾಫ್ಟ್‌ವೇರ್ ಸೇರಿದೆ. ಈ ಕಿಯಾ EV3 ಡ್ಯುಯಲ್ 12.3-ಇಂಚಿನ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ಗನೊಂದಿಗೆ, Ac ವೆಂಟ್‌ಗಳು ಮತ್ತು ಅವುಗಳ ಕೆಳಗೆ ಹ್ಯಾಪ್ಟಿಕ್ ಬಟನ್‌ಗಳನ್ನು ನೀಡಲಾಗಿದೆ. ಮೌಂಟೆಡ್ ಮೀಡಿಯಾ ಮತ್ತು ನ್ಯಾವಿಗೇಷನ್ ಕಂಟ್ರೋಲ್‌ಗಳೊಂದಿಗೆ ಎರಡು-ಸ್ಪೋಕ್ ಸ್ಟೀರಿಂಗ್ ವೀಲ್, ಹಿಂತೆಗೆದುಕೊಳ್ಳುವ ಟೇಬಲ್‌ನೊಂದಿಗೆ ಮುಂಭಾಗದ ಆರ್ಮ್‌ರೆಸ್ಟ್ ಇದೆ, ಸೀಟ್ ಸೌಕರ್ಯಕ್ಕಾಗಿ 'ರಿಲ್ಯಾಕ್ಸೇಶನ್ ಮೋಡ್' ಅನ್ನು ಸಹ ನೀಡಲಾಗಿದೆ.
ಹೆಚ್ಚುವರಿ ಫೀಚರ್‌ಗಳು: ಈ ಕಿಯಾ EV3 ಒಳಭಾಗದಲ್ಲಿ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಕಾನ್ಫಿಗರ್ ಮಾಡಬಹುದಾದ ಆಂಬಿಯೆಂಟ್ ಲೈಟಿಂಗ್ ಮತ್ತು ಡಿಜಿಟಲ್ ಡಿಸ್ಪ್ಲೇಗಳು, ADAS ಸೂಟ್, 12-ಇಂಚಿನ HUD ಮತ್ತು ಹೆಚ್ಚಿನವುಗಳಂತಹ ಇತರ ಸೌಕರ್ಯಗಳ ಜೊತೆಗೆ ವೈಯಕ್ತಿಕ AI ನೊಂದಿಗೆ ಬಂದ ಮೊದಲ ಎಲೆಕ್ಟ್ರಿಕ್ ಕಾರ್ ಆಗಿದೆ. ಈ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‍ಯುವಿ 460 ಲೀಟರ್ ಬೂಟ್ ಸ್ಪೇಸ್ ಜೊತೆಗೆ 25 ಲೀಟರ್ ಹೆಚ್ಚುವರಿ ಸ್ಟೋರೇಜ್ ಸ್ಪೇಸ್ ಅನ್ನು ಫ್ರಂಕ್‌ನಲ್ಲಿ ಒದಗಿಸುತ್ತದೆ.

ಬ್ಯಾಟರಿ ಮತ್ತು ಮೋಟಾರ್: ಈ ಎಲೆಕ್ಟ್ರಿಕ್ ಕಾರು 58.3kWh (ಸ್ಟ್ಯಾಂಡರ್ಡ್) ಮತ್ತು 81.4kWh (ಲಾಂಗ್-ರೇಂಜ್) ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರಲಿದೆ. ಈ ಎಲೆಕ್ಟ್ರಿಕ್ ಕಾರಿನ ಮುಂಭಾಗದ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಎರಡೂ ಆವೃತ್ತಿಗಳೊಂದಿಗೆ ಬರುತ್ತದೆ. ಇದು 201bhp ಮತ್ತು 283Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಿಯಾ EV3 ಎಲೆಕ್ಟ್ರಿಕ್ ಕಾರು 7.5 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ಕಾರು 170 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ.
ರೇಂಜ್: ಕಿಯಾ EV3 ಎಲೆಕ್ಟ್ರಿಕ್ ಕಾರಿನ ಲಾಂಗ್ ರೇಂಜ್ ಆವೃತ್ತಿಯು ಸಿಂಗಲ್ ಚಾರ್ಜ್‌ನಲ್ಲಿ WLTP ಸೈಕಲ್‌ನಲ್ಲಿ 600 ಕಿ.ಮೀವರೆಗೆ ನೀಡುತ್ತದೆ. 400V ಆರ್ಕಿಟೆಕ್ಚರ್‌ನೊಂದಿಗೆ, ಅದರ ಬ್ಯಾಟರಿಯು ಶೇ10 ರಿಂದ 80 ರಷ್ಟು ಚಾರ್ಜ್ ಮಾಡಲು 31 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಹೊಸ ಕಿಯಾ EV3 ರೀಜೆನ್ ಬ್ರೇಕಿಂಗ್‌ಗಾಗಿ ಪ್ಯಾಡಲ್ ಶಿಫ್ಟರ್‌ಗಳ ಜೊತೆಗೆ V2L ಸಾಮರ್ಥ್ಯಗಳೊಂದಿಗೆ ಬರುತ್ತದೆ.


Click it and Unblock the Notifications








