ಕಿಯಾ ಸೆಲ್ಟೋಸ್ ಹೊಸ ಡೀಸೆಲ್ ವೇರಿಯೆಂಟ್‌ಗೆ ಭರ್ಜರಿ ಬೇಡಿಕೆ! 20.7 ಕಿ.ಮೀ ಮೈಲೇಜ್, ಬೆಲೆ ಎಷ್ಟು?

ಕೊರಿಯನ್ ಕಾರು ತಯಾರಕರಾದ ಕಿಯಾ, ಕಳೆದ ವರ್ಷ ಜುಲೈನಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ಫೇಸ್‌ಲಿಫ್ಟೆಡ್ ಸೆಲ್ಟೋಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಈ ಹಿಂದೆ ಡೀಸೆಲ್ ಎಂಜಿನ್‌ನಿಂದ ಮ್ಯಾನುವಲ್ ಆಯ್ಕೆ ತೆಗೆದುಹಾಕಿತ್ತು. ಇತ್ತೀಚೆಗೆ ಹುಂಡೈ, ಡೀಸೆಲ್ ಮ್ಯಾನುವಲ್ ಕ್ರೆಟಾ ಬಿಡುಗಡೆಯಾದ ನಂತರ, ಕಿಯಾ ಕೂಡ ಮರು-ಪರಿಚಯಿಸಿದೆ.

ಕಿಯಾ ತನ್ನ ಸೆಲ್ಟೋಸ್ ಫೇಸ್‌ಲಿಫ್ಟ್ ಟೆಕ್ ಲೈನ್ ಗ್ರೇಡ್‌ನಲ್ಲಿ 5 ಹೊಸ ರೂಪಾಂತರಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ HTE, HTK, HTK+, HTX, HTX+ ಟ್ರಿಮ್‌ಗಳು ಸೇರಿವೆ. ಇವೆಲ್ಲವೂ ಡೀಸೆಲ್ ಎಂಜಿನ್ ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಹೊಂದಿವೆ. ಈ ಎಂಜಿನ್‌ನೊಂದಿಗೆ ಕಾರು 20.7kmpl ಪ್ರಮಾಣೀಕೃತ ಮೈಲೇಜ್ ನೀಡುತ್ತದೆ. ಹೊಸ ಟ್ರಿಮ್‌ಗಳ ಸೇರ್ಪಡೆಯೊಂದಿಗೆ, ಕಿಯಾ ಸೆಲ್ಟೋಸ್ ಈಗ 24 ರೂಪಾಂತರಗಳನ್ನು ಹೊಂದಿದೆ.

new-kia-seltos-diesel-manual-variant-price-and-features

ಹೊಸ ಕಿಯಾ ಸೆಲ್ಟೋಸ್: ಕಂಪನಿಯು ಡೀಸೆಲ್ ಮ್ಯಾನುವಲ್ ರೂಪಾಂತರಗಳ ಬೆಲೆಯನ್ನು ಆರಂಭಿಕವಾಗಿ ರೂ. 12 ಲಕ್ಷದಿಂದ ಇದರ ಟಾಪ್-ಸ್ಪೆಕ್ ಟ್ರಿಮ್ ಬೆಲೆ ರೂ. 18.28 ಲಕ್ಷವರೆಗೆ ನಿಗಧಿಪಡಿಸಿದೆ (ಇವು ಎಕ್ಸ್‌ ಶೋರೂಂ ಬೆಲೆಗಳು). ಇದು ಟಾಪ್-ಸ್ಪೆಕ್ ಕ್ರೆಟಾ ಡೀಸೆಲ್-ಮ್ಯಾನ್ಯುವಲ್‌ಗಿಂತ ಸ್ವಲ್ಪ ಕಡಿಮೆ, ಕ್ರೆಟಾ ಡೀಸಲ್ ಬೆಲೆ ರೂ. 18.74 ಲಕ್ಷವಿದೆ (ಎಕ್ಸ್‌ ಶೋರೂಂ).

ಕಿಯಾ ಸೆಲ್ಟೋಸ್ ಡೀಸೆಲ್ ಮ್ಯಾನುವಲ್ ಬುಕಿಂಗ್‌ಗಳು ಈಗಾಗಲೇ ತೆರೆದಿವೆ. ಖರೀದಿದಾರರು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು ಅಥವಾ ಅವರ ಹತ್ತಿರದ ಕಿಯಾ ಡೀಲರ್‌ಶಿಪ್‌ನಿಂದ ಆಫ್‌ಲೈನ್‌ನಲ್ಲಿ ರೂ. 25,000 ಟೋಕನ್ ಹಣ ಪಾವತಿಸುವ ಮೂಲಕ ಕಾರನ್ನು ಬುಕ್ ಮಾಡಬಹುದು. ಮುಂದಿನ ತಿಂಗಳು ವಿತರಣೆಗಳು ಪ್ರಾರಂಭವಾಗುತ್ತವೆ.

new-kia-seltos-diesel-manual-variant-price-and-features

ಹೊಸತೇನಿದೆ: ಹೊಸ ಸೆಲ್ಟೋಸ್ ವಾಯಿಸ್ ಕಮಾಂಡ್ ಸನ್‌ರೂಫ್‌ನೊಂದಿಗೆ ಬರುತ್ತದೆ, ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಲೆವೆಲ್-2(ADAS-2), 32ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕಲಿ-ಅಡ್ಜಸ್ಟಬಲ್ ವೆಂಟಿಲೇಟೆಡ್ ಸೀಟ್‌ಗಳು, ವೈರ್‌ಲೆಸ್ ಚಾರ್ಜಿಂಗ್, ಏರ್ ಪ್ಯೂರಿಫೈಯರ್, 8-ಸ್ಪೀಕರ್ ಪ್ರೀಮಿಯಂ ಬೋಸ್ ಆಡಿಯೊ ಸಿಸ್ಟಮ್, 8- ಇಂಚಿನ ಹೆಡ್-ಅಪ್ ಡಿಸ್ಪ್ಲೇ, 360-ಡಿಗ್ರಿ ಕ್ಯಾಮೆರಾ, ರೈನ್-ಸೆನ್ಸಾರ್ ವೈಪರ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಇತ್ಯಾದಿಗಳನ್ನು ಹೊಂದಿದೆ.

2023 ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ 10.25 - ಇಂಚಿನ ಡ್ಯುಯಲ್ ಡಿಸ್ಪ್ಲೇಯನ್ನು ಪಡೆಯುತ್ತದೆ. ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಂಟರ್ ಕನ್ಸೋಲ್‌ನಲ್ಲಿ ಸಂಪೂರ್ಣ ಡಿಜಿಟಲ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಈ ಮೂಲಕ ಕಾರು ಇಂಟೀರಿಯರ್ ಅನ್ನು ಪ್ರೀಮಿಯಂ ಆಗಿ ಕಾಣುವಂತೆ ಮಾಡುತ್ತದೆ.

new-kia-seltos-diesel-manual-variant-price-and-features

ಎಂಜಿನ್ ಆಯ್ಕೆಗಳು: ಸೆಲ್ಟೋಸ್ ಈಗ ಮೂರು ಎಂಜಿನ್‌ಗಳೊಂದಿಗೆ 6 ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿದೆ. ಇದು ಹೊಸ 1.5 ಲೀಟರ್ 4 ಸಿಲಿಂಡರ್ ಟರ್ಬೊ ಜಿಡಿಐ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 160 PS ಪವರ್ ಮತ್ತು 253 NM ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟ್ರಾನ್ಸ್‌ಮಿಷನ್ ಬಗ್ಗೆ ಮಾತನಾಡಿದ್ರೆ, ಈ ಎಂಜಿನ್‌ನೊಂದಿಗೆ 6 ಸ್ಪೀಡ್ ಐಎಂಟಿ, 7 ಸ್ಪೀಡ್ ಡಿಸಿಟಿ ಆಯ್ಕೆ ಲಭ್ಯವಿದೆ.

1.5 ಲೀಟರ್ 4 ಸಿಲಿಂಡರ್ ಸುಧಾರಿತ ಸ್ಮಾರ್ಟ್‌ಸ್ಟ್ರೀಮ್ ನ್ಯಾಚುರಲ್ಲಿ ಪೆಟ್ರೋಲ್ ಎಂಜಿನ್ ಅನ್ನು ಸಹ ಕಾರಿನೊಂದಿಗೆ ನೀಡಲಾಗುತ್ತದೆ. ಇದು 115 PS ಪವರ್ ಮತ್ತು 144 NM ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ (6MT) ಮತ್ತು IVT ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಎಂಬ ಎರಡು ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಟ್ಯೂನ್ ಮಾಡಲಾಗಿದೆ.

new-kia-seltos-diesel-manual-variant-price-and-features

ಇದಲ್ಲದೆ, 1.5 ಲೀಟರ್ 4 ಸಿಲಿಂಡರ್ ಸಂಸ್ಕರಿಸಿದ CRDi VGT ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ನೀಡಲಾಗುತ್ತದೆ. ಈ ಎಂಜಿನ್ 116 ಪಿಎಸ್ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 6MT (ಹೊಸ), 6iMT, 6AT ಗೇರ್‌ಬಾಕ್ಸ್‌ಗಳೊಂದಿಗೆ ಟ್ಯೂನ್ ಮಾಡಲಾಗಿದೆ.

More from DriveSpark

Article Published On: Wednesday, January 24, 2024, 12:05 [IST]
English summary
New kia seltos diesel manual variant price and features
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+