ಪ್ರೀಮಿಯಂ ಎಸ್‌ಯುವಿ ಸೆಲ್ಟೋಸ್‌ ಸುಲಭವಾಗಿ ಖರೀದಿಸಿ: ಇಎಂಐ, ಡೌನ್‌ಪೇಮೆಂಟ್‌ ಸಂಪೂರ್ಣ ಮಾಹಿತಿ!

ಸಾಕಷ್ಟು ಪೀಚರ್‌ಗಳ ಜೊತೆಗೆ ಒಂದು ಪ್ರೀಮಿಯಂ ಎಸ್‌ಯುವಿ ಬೇಕು ಎಂದುಕೊಳ್ಳುವವರಿಗೆ ಸದ್ಯಕ್ಕೆ ಭಾರತೀಯ ಕಾರು ಮಾರುಕಟ್ಟೆಯಲ್ಲಿರುವ ಆಯ್ಕೆಯಲ್ಲಿ ಕಿಯಾ ಕಂಪನಿಯ ಸೆಲ್ಟೋಸ್‌ ಉತ್ತಮ ಆಯ್ಕೆ. ಇಂದಿನ ಈ ಲೇಖನದಲ್ಲಿ ಕಿಯಾ ಸೆಲ್ಟೋಸ್ ಕಾರಿನ ಡೌನ್‌ ಪೇಮೆಂಟ್, ಇಎಂಐ ಮತ್ತು ಇತರ ವಿವರಗಳನ್ನು ನೋಡೋಣ ಬನ್ನಿ.

ಮೊದಲಿಗೆ ಕಿಯಾ ಸೆಲ್ಟೋಸ್‌‌ ಕಾರಿನ ಎಕ್ಸ್‌ ಶೋರೂಮ್‌ ಬೆಲೆ ನೋಡುವುದಾದರೆ ಸುಮಾರು 10,89,900 ಲಕ್ಷ ರೂಪಾಯಿಗಳು. ಇದಕ್ಕೆ ಕರ್ನಾಟಕದ ಆರ್‌ಟಿಒ ಟ್ಯಾಕ್ಸ್‌ ನೋಡುವುದಾದರೆ ಅದು ಸುಮಾರು 2,05,664 ರೂಪಾಯಿಗಳಷ್ಟು ಬರುತ್ತದೆ. ಈ ಕಾರಿನ ಇನ್ಸ್ಯುರೆನ್ಸ್‌ ಸುಮಾರು 50,113 ರೂಗಳು. ಇವೆಲ್ಲಾ ಸೇರಿ ಬೆಂಗಳೂರಿನಲ್ಲಿ ಕಿಯಾ ಸೆಲ್ಟೋಸ್‌ ಆನ್‌ ರೋಡ್‌ ಬೆಲೆ‌‌ ಸುಮಾರು 13,59,738 ರೂಗಳಿಂದ ಆರಂಭವಾಗುತ್ತದೆ.

New Kia Seltos

ಇನ್ನು ಈ ಕಾರಿನ ಇಎಂಐ ಮತ್ತು ಕುರಿತಾಗಿ ನೋಡುವುದಾದರೆ ನೀವು ಈ ಕಾರಿಗೆ ಕನಿಷ್ಟವೆಂದರೂ 2,50,000 ರೂಗಳನ್ನು ಡೌನ್‌ ಪೇಮೆಂಟ್‌ ರೀತಿಯಲ್ಲಿ ಕಟ್ಟಬೇಕಾಗುತ್ತದೆ. ನೀವು 9.8% ಬಡ್ಡಿ ದರದಲ್ಲಿ ಸುಮಾರು ೭ ವರ್ಷಗಳ ಕಾಲಾವಧಿಗೆ ಲೋನ್‌ ಮಾಡಿದರೆ, ಪ್ರತೀ ತಿಂಗಳು ಸುಮಾರು 18,308 ರೂಗಳನ್ನು ಇಎಂಐ ರೂಪದಲ್ಲಿ ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ.

ಕಿಯಾ ಸೆಲ್ಟೋಸ್ (Kia Seltos) ಎಸ್‍ಯುವಿಯ ಹೊಸ ಡೀಸೆಲ್ ರೂಪಾಂತರಗಳಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 114 bhp ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ iMT ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಅನ್ನು ನೀಡಲಾಗಿದೆ.

New Kia Seltos

ಗ್ರಾಹಕರು ಈಗ HTE, HTK, HTK+, HTX, ಮತ್ತು HTX+ ಸೇರಿದಂತೆ ಐದು ವಿಭಿನ್ನ ರೂಪಾಂತರಗಳಲ್ಲಿ 6-ಸ್ಪೀಡ್ ಡೀಸೆಲ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಮಾಡಬಹುದು. ಸುರಕ್ಷತೆ ಮತ್ತು ಅತ್ಯಾಧುನಿಕತೆಯನ್ನು ಖಚಿತಪಡಿಸಿಕೊಳ್ಳಲು ಸೆಲ್ಟೋಸ್ ಅನ್ನು ನಿಖರವಾಗಿ ರಚಿಸಲಾಗಿದೆ, 32 ಸುರಕ್ಷತಾ ವೈಶಿಷ್ಟ್ಯಗಳನ್ನು ಪ್ಯಾಕಿಂಗ್ ಮಾಡಲಾಗಿದೆ. ಇವುಗಳಲ್ಲಿ, 15 ಹೈ-ಸುರಕ್ಷತಾ ಅಂಶಗಳು ಎಲ್ಲಾ ರೂಪಾಂತರಗಳಲ್ಲಿ ಪ್ರಮಾಣಿತವಾಗಿ ಬರುತ್ತವೆ.

ಲೆವೆಲ್-2 ADAS ತಂತ್ರಜ್ಞಾನವು ಸೆಲ್ಟೋಸ್ ಅನ್ನು ವಾಹನ ಸುರಕ್ಷತೆಯಲ್ಲಿ ತಾಂತ್ರಿಕವಾಗಿ ಮುಂದಕ್ಕೆ ಇರಿಸುತ್ತದೆ. ಕಿಯಾ ಸೆಲ್ಟೋಸ್ ಎಸ್‍ಯುವಿಯು ಸುರಕ್ಷತೆ ಮತ್ತು ಅತ್ಯಾಧುನಿಕತೆಯಿಂದ ಕೂಡಿದೆ. ಈ ಕಿಯಾ ಎಸ್‍ಯುವಿಯಲ್ಲಿ 32 ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿದೆ. ಇವುಗಳಲ್ಲಿ, 15 ಹೈ-ಸುರಕ್ಷತಾ ಅಂಶಗಳು ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಬರುತ್ತವೆ. ಇದರೊಂದಿಗೆ 17 ಲೆವೆಲ್-2 ADAS ತಂತ್ರಜ್ಞಾನವು ಸೆಲ್ಟೋಸ್ ಅನ್ನು ವಾಹನ ಸುರಕ್ಷತೆಯಲ್ಲಿ ತಾಂತ್ರಿಕವಾಗಿ ಮತ್ತೊಂದು ಲೆವೆಲ್ ಆಗಿದೆ.

New Kia Seltos

ಲೆವೆಲ್-2 ADAS ತಂತ್ರಜ್ಞಾನವು ಸೆಲ್ಟೋಸ್ ಅನ್ನು ವಾಹನ ಸುರಕ್ಷತೆಯಲ್ಲಿ ತಾಂತ್ರಿಕವಾಗಿ ಮುಂದಕ್ಕೆ ಇರಿಸುತ್ತದೆ. ಕಿಯಾ ಸೆಲ್ಟೋಸ್ ಎಸ್‍ಯುವಿಯು ಸುರಕ್ಷತೆ ಮತ್ತು ಅತ್ಯಾಧುನಿಕತೆಯಿಂದ ಕೂಡಿದೆ. ಈ ಕಿಯಾ ಎಸ್‍ಯುವಿಯಲ್ಲಿ 32 ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿದೆ. ಇವುಗಳಲ್ಲಿ, 15 ಹೈ-ಸುರಕ್ಷತಾ ಅಂಶಗಳು ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಬರುತ್ತವೆ. ಇದರೊಂದಿಗೆ 17 ಲೆವೆಲ್-2 ADAS ತಂತ್ರಜ್ಞಾನವು ಸೆಲ್ಟೋಸ್ ಅನ್ನು ವಾಹನ ಸುರಕ್ಷತೆಯಲ್ಲಿ ತಾಂತ್ರಿಕವಾಗಿ ಮತ್ತೊಂದು ಲೆವೆಲ್ ಆಗಿದೆ.

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿವೆ. ಫೇಸ್‌ಲಿಫ್ಟೆಡ್ ಸೆಲ್ಟೋಸ್ ಎಸ್‍ಯುವಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದರ ಸಹಾಯದಿಂದ ಈ ಕಾರು 113 bhp ಮತ್ತು 144 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ iVT ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, May 18, 2024, 9:30 [IST]
English summary
New kia seltos emi down payment engine options and other details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+