ಕ್ಯಾಮರಾ ಕಣ್ಣಿಗೆ ಬಿತ್ತು ಮಹೀಂದ್ರಾ ಬ್ರಹ್ಮಾಸ್ತ್ರ: ಬರುತ್ತಿದೆ ಹೊಸ ಅದ್ಭುತ ಎಲೆಕ್ಟ್ರಿಕ್ ಕಾರು
ಭಾರತೀಯ ವಾಹನ ಮಾರುಕಟ್ಟೆ ಈಗ ಎಲೆಕ್ಟ್ರಿಕ್ ವಾಹನಗಳ ಭರಾಟೆ ಹೆಚ್ಚಾಗಿದೆ.ಇದರ ಪರಿಣಾಮವಾಗಿ ಅನೇಕ ಆಟೋ ಬ್ರಾಂಡ್‌ಗಳು ಇವಿ ಮಾದರಿಗಳನ್ನು ಪ್ರಾರಂಭಿಸಲು ಗಮನಹರಿಸುತ್ತಿವೆ. ಇವಿ ವಲಯದಲ್ಲಿ ಉತ್ಪಾದನೆ ಮತ್ತು ಸಂಶೋಧನಾ ಚಟುವಟಿಕೆಗಳಿಗಾಗಿ ಕಾರು ಕಂಪನಿಗಳು ಕೋಟಿಗಟ್ಟಲೆ ಹೂಡಿಕೆ ಮಾಡುತ್ತಿವೆ. ಟಾಟಾ ಪ್ರಸ್ತುತ ಭಾರತೀಯ ಪ್ರಯಾಣಿಕರ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪ್ರಾಬಲ್ಯ ಹೊಂದಿದೆ. ಆದರೆ ಎಲೆಕ್ಟ್ರಿಕ್ ಎಸ್ ಯುವಿಗಳ ಸಾಲನ್ನು ಸಿದ್ಧಪಡಿಸುತ್ತಿರುವ ಮಹೀಂದ್ರಾ ಟಾಟಾ ಭಾರಿ ಸವಾಲನ್ನು ಒಡ್ಡಲಿದೆ. ಈ ಮಹೀಂದ್ರಾ ಮುಂಬರುವ ಎಲೆಕ್ಟ್ರಿಕ್ ಕಾರಿನ ಸ್ಪೈ ಚಿತ್ರಗಳು ಇತ್ತೀಚೆಗೆ ಕಾಣಿಸಿಕೊಂಡಿವೆ. ಆ ಕಾರು ಯಾವುದು ಎಂದು ನೋಡೋಣ.
ಮಹೀಂದ್ರಾ BE ಅಥವಾ ಬಾರ್ನ್ ಎಲೆಕ್ಟ್ರಿಕ್ ಸರಣಿಯ ಅಡಿಯಲ್ಲಿ ಬಹು ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುತ್ತದೆ. ಮಹೀಂದ್ರಾ BE.05 (Mahindra BE.05) ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆಗೆ ಮುಂಚಿತವಾಗಿ ದೇಶೀಯ ವಾಹನ ತಯಾರಕರು ಮಹತ್ವದ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಮಹೀಂದ್ರಾ ಕಂಪನಿಯು ಪ್ರಸ್ತುತ ಈ ಕಾರನ್ನು ಭಾರತೀಯ ರೋಡುಗಳಲ್ಲಿ ಟೆಸ್ಟ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ರೋಡ್ ಟೆಸ್ಟ್ ನಡೆಸುತ್ತಿರುವಾಗ ಕಾಣಿಸಿಕೊಂಡಿದೆ.

ಕಾರಿನ ಹೊರಭಾಗವು ಸಂಪೂರ್ಣವಾಗಿ ಮರೆಮಾಚಲಾಗಾಗಿದೆ. ಆದರೆ ಸ್ಪೈ ಚಿತ್ರಗಳು ಕೆಲವು ನಿರ್ಣಾಯಕ ಹೊಸ ಮಾಹಿತಿಯನ್ನು ಬಹಿರಂಗಪಡಿಸುತ್ತದೆ. ಸ್ಪೈ ಫೋಟೋಗಳ ಮೂಲಕ ಇವಿಯ ಆಂತರಿಕ ವೈಶಿಷ್ಟ್ಯಗಳ ಮಾಹಿತಿಯು ಬಹಿರಂಗವಾಗಿದೆ. ಈ ಕಾರಿನಲ್ಲಿ ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್ ಡಿಸ್‌ಪ್ಲೇಗಾಗಿ ಮಹೀಂದ್ರಾ ಇವಿ ಒಳಗೆ ದೊಡ್ಡ ಡ್ಯುಯಲ್ ಸ್ಕ್ರೀನ್ ಸೆಟಪ್ ಅನ್ನು ಒದಗಿಸಿದೆ. ಇದು ಸ್ಟೀರಿಂಗ್ ವ್ಹೀಲ್ ಮಧ್ಯದಲ್ಲಿ 'BE' ಲೋಗೋ ಇದೆ. ಸ್ಟೀರಿಂಗ್ ವ್ಹೀಲ್ ಟೂ-ಸ್ಪೋಕ್ ವಿನ್ಯಾಸದಲ್ಲಿ ಬರುತ್ತದೆ.
BE.05 ಟೆಸ್ಟಿಂಗ್ ಮಾದರಿಯು ಕಾನ್ಸೆಪ್ಟ್ ಮಾದರಿಗೆ ಹೋಲುತ್ತದೆ. ತೀಕ್ಷ್ಣವಾಗಿ ಕಾಣುವ ಬಂಪರ್ ನಿಂದ ಈ ಎಲೆಕ್ಟ್ರಿಕ್ ಕಾರಿನ ಫಾಸಿಕ ಉತ್ತಮ ಲುಕ್ ಅನ್ನು ಹೊಂದಿದೆ. ಇದು ಎಲ್ಇಡಿ ಡಿಆರ್ಎಲ್ ಗಳು ಮತ್ತು ನಯವಾದ ಬಂಪರ್ ಗಳನ್ನು ಒಳಗೊಂಡಿದೆ. ಬದಿಗಳಲ್ಲಿ ಪಾಪ್-ಅಪ್ ಡೋರ್ ಹ್ಯಾಂಡಲ್‌ಗಳು ಮತ್ತು ಹಿಂಭಾಗದಲ್ಲಿ ಸ್ಪಾಯ್ಲರ್‌ಗಳಿವೆ.

ಈ ಮಹೀಂದ್ರಾ BE.05 ಎಲೆಕ್ಟ್ರಿಕ್ ಕಾರಿನ ಪವರ್‌ಟ್ರೇನ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಲಭ್ಯವಿರುವ ವರದಿಗಳ ಪ್ರಕಾರ, ಮಹೀಂದ್ರಾ BE.05 ಇವಿಯು 60 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 450 ಕಿ.ಮೀ ದೂರದವರೆಗೆ ಸಂಚರಿಸಲಿದೆ ಎಂದು ಹೇಳಲಾಗುತ್ತಿದೆ. ಈ ಎಲೆಕ್ಟ್ರಿಕ್ ಕಾರು 30 ನಿಮಿಷಗಳಲ್ಲಿ ಬ್ಯಾಟರಿಯನ್ನು ಶೇಕಡಾ 5 ರಿಂದ 80 ರಷ್ಟು ಚಾರ್ಜ್ ಮಾಡಬಹುದು.
ಮಹೀಂದ್ರಾ ಈ ವಾಹನವನ್ನು ಎಲೆಕ್ಟ್ರಿಕ್ ವಾಹನಗಳಿಗಾಗಿ ಮೀಸಲಾದ INGLO ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸುತ್ತಿದೆ. ಭವಿಷ್ಯದ ಎಲ್ಲಾ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಇದನ್ನೇ ಬಳಸಲಾಗುತ್ತದೆ. ಪ್ಲಾಟ್‌ಫಾರ್ಮ್ ಫ್ರಂಟ್-ವೀಲ್ ಡ್ರೈವ್, ರಿಯರ್-ವೀಲ್ ಡ್ರೈವ್ ಮತ್ತು ಆಲ್-ವೀಲ್ ಡ್ರೈವ್ ಕಾನ್ಫಿಗರೇಶನ್‌ಗಳನ್ನು ಒಳಗೊಂಡಂತೆ ವಿವಿಧ ಡ್ರೈವ್ ಆಯ್ಕೆಗಳನ್ನು ಬೆಂಬಲಿಸುತ್ತದೆ. ರೇರ್-ವ್ಹೀಲ್ ಡ್ರೈವ್ ಮಾದರಿಗಳು 285 bhp ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಆದರೆ ಆಲ್-ವೀಲ್ ಡ್ರೈವ್ ರೂಪಾಂತರಗಳು 394 bhp ಮೋಟಾರ್ ಅನ್ನು ಸಹ ಪಡೆಯಬಹುದು. ಮಹೀಂದ್ರಾ BE.05 ಎಲೆಕ್ಟ್ರಿಕ್ ಎಸ್‍ಯುವಿಯು 2025ರ ಅಕ್ಟೋಬರ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ. ಮಹೀಂದ್ರಾ BE.05 ಎಲೆಕ್ಟ್ರಿಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂಬರುವ ಟಾಟಾ ಕರ್ವ್ ಇವಿ, ಹ್ಯುಂಡೈ ಕ್ರೆಟಾ ಇವಿ ಮತು MG ZS ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications