ಕೇವಲ 6.79 ಲಕ್ಷಕ್ಕೆ ಮಾರುತಿಯ ಅತ್ಯಂತ ಸುರಕ್ಷಿತ ಕಾರು: ವೇರಿಯೆಂಟ್ ವಾರು ಬೆಲೆ ವಿವರ!

ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜಾಗಿರುವ ಮಾರುತಿ ಸುಜುಕಿ ಡಿಜೈರ್ (Maruti suzuki dzire), ತನ್ನ ಸೇಫ್ಟಿ ರೇಟಿಂಗ್ ಬಹಿರಂಗಪಡಿಸುವ ಮೂಲಕ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಇತ್ತೀಚೆಗೆ ಹೊಸ ನಾಲ್ಕನೇ ತಲೆಮಾರಿನ ಡಿಜೈರ್ ಬೆಲೆಯನ್ನು ಘೋಷಿಸಿದ್ದೇ ತಡ ಎಲ್ಲರು ಅಚ್ಚರಿಗೊಳಗಾಗಿದ್ದಾರೆ. ಹೌದು, 5-ಸ್ಟಾರ್ ರೇಟಿಂಗ್‌ನೊಂದಿಗೆ ಕೇವಲ 6.79 ಲಕ್ಷ ರೂ. (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಹೊಸ ಡಿಜೈರ್ ಬಿಡುಗಡೆಯಾಗಿದೆ. ಇನ್ನು ಟಾಪ್‌ಎಂಡ್ ವೇರಿಯೆಂಟ್ ಬೆಲೆಯು 10.14 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ) ಇದೆ.

ಹೊಸ ಡಿಜೈರ್ ಸೆಡಾನ್ ಕಾರನ್ನು 11,000 ರೂ. ಟೋಕನ್ ಮೊತ್ತಕ್ಕೆ ಬುಕಿಂಗ್ ಮಾಡಬಹುದು. ಕಾರಿನ ಹೊಸ ಪರಿಚಯಾತ್ಮಕ ಬೆಲೆಗಳು ಡಿಸೆಂಬರ್ 31, 2024 ರವರೆಗೆ ಅನ್ವಯಿಸುತ್ತವೆ. ಈ ಕಾರಿನ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿರುವುದರಿಂದ ಹೊಸ ಡಿಜೈರ್ ವೇರಿಯೆಂಟ್ ವಾರು ಬೆಲೆ ಎಷ್ಟು ಎಂಬುದನ್ನು ತಿಳಿಸಲು ನಾವು ಈ ಲೇಖನವನ್ನು ನಿಮಗಾಗಿ ತಂದಿದ್ದೇವೆ.

new-maruti-suzuki-dzire-variant-wise-price-details

ಕಂಪನಿಯ ಪ್ರಕಾರ, ಹೊಸ ಡಿಜೈರ್ ಮ್ಯಾನುವಲ್‌ನಲ್ಲಿ 24.79 ಕಿ.ಮೀ ಮತ್ತು ಎಎಂಟಿನಲ್ಲಿ 25.71 ಕಿ.ಮೀ ಹಾಗೂ ಸಿಎನ್‌ಜಿನಲ್ಲಿ ಡಿಜೈರ್ ಪ್ರತಿ ಕೆ.ಜಿಗೆ 33.73 ಕಿ.ಮೀ ಮೈಲೇಜ್ ನೀಡುತ್ತದೆ. ಹೊಸ ಡಿಜೈರ್ ಕಾರು ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಮತ್ತು ಝಡ್ಎಕ್ಸ್ಐ + ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. ಪ್ರತಿ ಟ್ರಿಮ್‌ನ ಬೆಲೆ ಹಾಗೂ ಅದರಲ್ಲಿ ಸಿಗುವ ವೈಶಿಷ್ಟ್ಯಗಳನ್ನು ಇಲ್ಲಿ ನೋಡೋಣ.

ಮಾರುತಿ ಡಿಜೈರ್ ಎಲ್ಎಕ್ಸ್ಐ: ಹೊಸ ಡಿಜೈರ್ LXI ವೇರಿಯೆಂಟ್ ಬೆಲೆಯು 6.79 ಲಕ್ಷ ರೂ.(ಎಕ್ಸ್ ಶೋರೂಂ) ಇದೆ. ಇದು ಪೆಟ್ರೋಲ್ ಮ್ಯಾನುವಲ್‌ನಲ್ಲಿ ಲಭ್ಯವಿದೆ. ನಾಲ್ಕು ಪವರ್ ವಿಂಡೋಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್-ಹೋಲ್ಡ್ ಅಸಿಸ್ಟ್, EBD ಯೊಂದಿಗೆ ABS, ರಿವರ್ಸ್ ಪಾರ್ಕಿಂಗ್ ಸೆನ್ಸರ್, ಆಟೋ AC, ಟಿಲ್ಟ್ ಸ್ಟೀರಿಂಗ್ ವ್ಹೀಲ್, ಆರು ಏರ್ ಬ್ಯಾಗ್‌ಗಳು, ಹಿಂಭಾಗದ ಡಿಫೋಗರ್, 3-ಪಾಯಿಂಟ್ ಸೀಟ್ ಬೆಲ್ಟ್ ಹೊಂದಿದೆ.

new-maruti-suzuki-dzire-variant-wise-price-details

ಮಾರುತಿ ಡಿಜೈರ್ ವಿಎಕ್ಸ್ಐ: ಹೊಸ ಮಾರುತಿ ಡಿಜೈರ್ VXI ವೇರಿಯೆಂಟ್ ಬೆಲೆಯು 7.79 ಲಕ್ಷದಿಂದ 8.74 ರೂ.(ಎಕ್ಸ್ ಶೋರೂಂ) ಇದೆ. ಇದು ಪೆಟ್ರೋಲ್-ಎಂಟಿ, ಎಎಂಟಿ ಹಾಗೂ ಸಿಎನ್‌ಜಿ-ಎಂಟಿ ನಲ್ಲಿ ಲಭ್ಯವಿದೆ. ಬ್ಲೂಟೂತ್, IRVM, ಹಿಂಭಾಗದ ಸೆಂಟರ್ ಆರ್ಮ್ರೆಸ್ಟ್, 7-ಇಂಚಿನ ಟಚ್ ಸ್ಕ್ರೀನ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, 4-ಸ್ಪೀಕರ್‌ಗಳು, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್, ವಾಯಿಸ್ ಅಸಿಸ್ಟ್, ಹಾಗೂ ಎಸಿ ವೆಂಟ್‌ಗಳನ್ನು ಹೊಂದಿದೆ.

ಮಾರುತಿ ಡಿಜೈರ್ ಝಡ್ಎಕ್ಸ್ಐ: ಹೊಸ ಮಾರುತಿ ಡಿಜೈರ್ ZXI ವೇರಿಯೆಂಟ್ ಬೆಲೆಯು 8.89 ಲಕ್ಷದಿಂದ 9.84 ಲಕ್ಷ ರೂ. (ಎಕ್ಸ್ ಶೋರೂಂ)ಇದೆ. ಇದು ಪೆಟ್ರೋಲ್-ಎಂಟಿ, ಎಎಂಟಿ, ಸಿಎನ್‌ಜಿ-ಎಂಟಿನಲ್ಲಿ ಲಭ್ಯವಿದೆ. ಆಟೋ ಎಸಿ, 6 ಸ್ಪೀಕರ್ ಗಳು (2 ಟ್ವೀಟರ್‌ಗಳು ಸೇರಿದಂತೆ), ಕ್ಲೋಮ್ ವಿಂಡೋ ಡಿಸೈನ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ವೈರ್ಲೆಸ್ ಫೋನ್ ಚಾರ್ಜರ್, ಕೀ-ಆಪರೇಟೆಡ್ ಬೂಟ್ ಓಪನಿಂಗ್, ಕನೆಕ್ಟೆಡ್ ಕಾರ್ ಟೆಕ್, ರಿವರ್ಸ್ ಪಾರ್ಕಿಂಗ್ ಕ್ಯಾಮರಾಗಳನ್ನು ಹೊಂದಿದೆ.

new-maruti-suzuki-dzire-variant-wise-price-details

ಮಾರುತಿ ಡಿಜೈರ್ ಝಡ್ಎಕ್ಸ್ಐ+: ಮಾರುತಿ ಡಿಜೈರ್ ZXI+ ವೇರಿಯೆಂಟ್ ಬೆಲೆಯು 9.69 ಲಕ್ಷದಿಂದ 10.14 ಲಕ್ಷ ರೂ. (ಎಕ್ಸ್ ಶೋರೂಂ)ಇದೆ. ಪೆಟ್ರೋಲ್-ಎಂಟಿ, ಪೆಟ್ರೋಲ್-ಎಎಂಟಿನಲ್ಲಿ ಮಾತ್ರ ಲಭ್ಯವಿದೆ. ಫ್ರಂಟ್ ವೆಲ್ ಲೈಟ್, ಅರ್ಕಾಮಿಸ್-ಟ್ಯೂನ್ಡ್ ಸೌಂಡ್ ಸಿಸ್ಟಮ್, ಸಿಂಗಲ್-ಪ್ಯಾನ್ ಸನ್ ರೂಫ್, ಇನ್ಸ್ ಟ್ರೂಮೆಂಟ್ ಕನ್ಸೋಲ್ ನಲ್ಲಿ ಕಲರ್ MID, ಲೆದರೆಟ್- ಸ್ಟೀರಿಂಗ್ ವೀಲ್, 9-ಇಂಚಿನ ಟಚ್ ಸ್ಕ್ರೀನ್, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, November 13, 2024, 14:12 [IST]
English summary
New maruti suzuki dzire variant wise price details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+