ಹೊಸ ಸ್ವಿಫ್ಟ್‌ ಎಪಿಕ್‌ ಎಡಿಷನ್‌ ಮಾರುಕಟ್ಟೆಗೆ: ಬರೀ ಎಂಟೇ ಲಕ್ಷಕ್ಕೆ ಕಾರು ನಿಮ್ಮ ಮನೆಗೆ! ಇನ್ನೇನು ಬೇಕು...

ಕೆಲವು ವಾರಗಳ ಹಿಂದೆಯಷ್ಟೇ ಮಾರುತಿ ಸುಜುಕಿ ಹೊಸ ಸ್ವಿಫ್ಟ್‌ ಅನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿತ್ತು. ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಧಾವಿಸಿದ್ದ ಹೊಸ ಸ್ವಿಫ್ಟ್ ಸಾಕಷ್ಟು ಜನರ ಮೆಚ್ಚುಗೆಗೂ ಪಾತ್ರವಾಗಿತ್ತು. ಇದೀಗ ಮಾರುತಿ ಸುಜುಕಿ ಸ್ವಿಫ್ಟ್‌ನ ಹೊಸ ಎಡಿಷನ್‌ ಅನಾವರಣಗೊಂಡಿದೆ ಎಂಬುದು ಹೊಸ ಸುದ್ದಿ.

ಹೊಸ ಸ್ವಿಫ್ಟ್‌ ಈಗಾಗಲೇ ಮಾರುತಿ ಸುಜುಕಿ ಡೀಲರ್‌ಗಳನ್ನು ತಲುಪಿದ್ದು ಇದರ ವಿತರಣೆಯೂ ಆರಂಭವಾಗಿದೆ. ಈ ಕಾರಿನ ಆರಂಭಿಕ ಆವೃತ್ತಿಯ ಕಾರುಗಳನ್ನು ಹಲವರು ಮಾಡಿಫೈ ಮಾಡುಲೂ ಆರಂಭಿಸಿದ್ದು ರಸ್ತೆಗಳೆಲ್ಲಾ ಸ್ವಿಫ್ಟ್‌ಮಯ ಆಗಲಿದೆ. ಇದೇ ಕಾರಣದಿಂದ ಮಾರುತಿ ಸುಜುಕಿ ಇದೀಗ ಈ ಕಾರಿಗೆ ಮಾಡಿಫಿಕೇಷನ್‌ ಮಾಡಲು ಆಕ್ಸಸರೀಸ್‌ ಪ್ಯಾಕ್‌ ಅನ್ನು ಪರಿಚಯಿಸುತ್ತಿದೆ.

New Maruti Suzuki Swift Epic Edition Accessories Out Now More Details

ಈ ಮಾಡಿಫಿಕೇಷನ್‌ ಆಕ್ಸಸರೀಸ್‌ ಪ್ಯಾಕ್‌ ಅನ್ನು ಮಾರುತಿ ಸುಜುಕಿಯು ಎಪಿಕ್‌ ಎಡಿಷನ್ ( Maruti Suzuki Swift) ಎಂದು ಕರೆಯುತ್ತಿದ್ದು, ಇದರಲ್ಲಿ ಸ್ಇಫ್ಟ್‌ ಕಾರನ್ನು ಅಂದಗಾಣಿಸಲು ಬೇಕಾದ ಎಲ್ಲಾ ವಸ್ತುಗಳೂ ಒಳಗೊಂಡಿದೆ. ಈಗಾಗಲೇ ವಿಡಿಯೋದಲ್ಲಿ ಇದನ್ನು ಬಳಸಿದ ಸ್ವಿಫ್ಟ್ ಕಾರನ್ನು ನಾವು ಕಾಣಬಹುದಾಗಿದ್ದು, ಒಂದೇ ನೋಟದಲ್ಲಿ ನೋಡುಗರನ್ನು ಆಕರ್ಷಿಸುತ್ತದೆ.

ಯ್ಯೂಟ್ಯೂಬರ್ ಒಬ್ಬರು ಈ ಕಾರಿನ ವಾಕ್‌ ಅರೌಂಡ್‌ ವಿಡಿಯೋ ಮಾಡಲಾಗಿದ್ದು, ಇದರಲ್ಲಿ ಕಾರಿನ ಕುರಿತಾದ ಮತ್ತು ಎಪಿಕ್‌ ಎಡಿಷನ್‌ ಕುರಿತಾದ ಸಂಪೂರ್ಣ ಮಾಹಿತಿಗಳಿದೆ. ಈ ಎಪಿಕ್‌ ಎಡಿಷನ್‌ ಅನ್ನು ಎಲ್‌ಎಕ್ಸ್‌ಐ ಆವೃತ್ತಿಗೆ ಅಳವಡಿಸಲಾಗಿದ್ದು, ಕಾರನ್ನು ಮತ್ತಷ್ಟು ಅಗ್ರೆಸಿವ್‌ ಲುಕ್‌ ಕಡೆಗೆ ಕೊಂಡೊಯ್ಯುತ್ತದೆ. ಆಕ್ಸಸರೀಸ್‌ಗಳು ಕಪ್ಪು ಬಣ್ಣದಿಂದ ಕೂಡಿದ್ದು, ಬೇಕಾದವರು ಇದನ್ನು ಕೊಳ್ಳಬಹುದಾಗಿದೆ.

New Maruti Suzuki Swift Epic Edition Accessories Out Now More Details

ಮಾರುತಿ ಸುಜುಕಿ ಸ್ವಿಫ್ಟ್‌ ಬಗ್ಗೆ ನೋಡುವುದಾದರೆ, ಕಾರಿನ ಬುಕ್ಕಿಂಗ್‌ನಲ್ಲಿಯೂ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದೆ. ಮೇ.1ರಿಂದ ಕಂಪನಿಯು ಈ ಹ್ಯಾಚ್‌ಬ್ಯಾಕ್‌ಗಾಗಿ ಆರ್ಡರ್ ತೆಗೆದುಕೊಳ್ಳುವುದನ್ನು ಪ್ರಾರಂಭಿಸಿತ್ತು. ಕೇವಲ 8 ದಿನಗಳಲ್ಲಿ 10,000ಕ್ಕೂ ಹೆಚ್ಚಿನ ಗ್ರಾಹಕರು ಸ್ವಿಫ್ಟ್‌ ಕಾರನ್ನು ಕಾಯ್ದಿರಿಸಿದ್ದರು. ಈಗಲೂ ಬುಕ್ಕಿಂಗ್ ಮಾಡಲು ಅವಕಾಶವಿದ್ದು, ಆಸಕ್ತ ಖರೀದಿದಾರರು ರೂ.11,000 ಹಣವನ್ನು ಮುಂಗಡವಾಗಿ ಪಾವತಿಸುವ ಮೂಲಕ ಆರ್ಡರ್ ಮಾಡಬಹುದು.

ದೇಶೀಯವಾಗಿ ಖರೀದಿಗೆ ಲಭ್ಯವಿರುವ ಮಾರುತಿ ಸುಜುಕಿ ಸ್ವಿಫ್ಟ್‌ ಕಾರು ರೂ.6.49 ಲಕ್ಷದಿಂದ ರೂ.9.65 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ (ಒ), ಝಡ್ಎಕ್ಸ್ಐ, ಝಡ್ಎಕ್ಸ್ಐ ಪ್ಲಸ್ ರೂಪಾಂತರ (ವೇರಿಯೆಂಟ್)ಗಳು ಹಾಗೂ ಪರ್ಲ್ ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ, ಸಿಜ್ಲಿಂಗ್ ರೆಡ್ ನಾವೆಲ್ ಆರೆಂಜ್ ಸೇರಿದಂತೆ ಹಲವು ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ. ಈ ಕಾರಿನಲ್ಲಿ 5 ಮಂದಿ ಓಡಾಟವನ್ನು ನಡೆಸಬಹುದು.

ಈ ಸ್ವಿಫ್ಟ್ ಕಾರು 1.2 - ಲೀಟರ್ 3 - ಸಿಲಿಂಡರ್ ಝಡ್ ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದೆ. ಜೊತೆಗೆ ರೂಪಾಂತರಗಳಿಗೆ ಅನುಗುಣವಾಗಿ 5 - ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. ಇಂಧನ ದಕ್ಷತೆ (Fuel efficiency) ವಿಚಾರಕ್ಕೆ ಬರುವುದಾದರೆ, 24.8 ರಿಂದ 25.72 ಕೆಎಂಪಿಎಲ್ ವರೆಗೆ ಮೈಲೇಜ್ ಕೊಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, May 24, 2024, 15:35 [IST]
English summary
New maruti suzuki swift epic edition accessories out now more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+