ಭರ್ಜರಿಯಾಗಿ ಮಾರಾಟವಾಗುತ್ತಿದೆ ಪ್ರೀಮಿಯಂ ಹ್ಯಾಚ್‌ಬ್ಯಾಕ್: ಹೊಸ ಕಾರು ಕೊಳ್ಳುವವರಿಗೆ ಭಾರೀ ಕೊಡುಗೆ!
ಬಡವರಷ್ಟೇ ಶ್ರೀಮಂತರೂ ಇಷ್ಟ ಪಡುವ ಮಾರುತಿ ಸುಜುಕಿಯ ಕಾರೆಂದರೆ ಅದು ಸ್ವಿಫ್ಟ್. ಆಕರ್ಷಕ ಡಿಸೈನ್ ಮತ್ತು ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿರುವ ಈ ಕಾರನ್ನು ಮಧ್ಯಮ ವರ್ಗದ ಜನರಿಂದ ಹಿಡಿದು ದುಬಾರಿ ಕಾರುಗಳನ್ನು ಹೊಂದಿರುವವರು ಸಹ ಇಷ್ಟ ಪಡುತ್ತಾರೆ. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಮಾರುತಿ ಸುಜುಕಿ ಭಾರತದಲ್ಲಿ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಕಾರನ್ನು ಲಾಂಚ್ ಮಾಡಿತ್ತು. ಬಿಡುಗಡೆಯಾಗಿ ಕೆಲವೇ ವಾರಗಳಲ್ಲಿಈ ಕಾರು ಭಾರೀ ಸಂಖ್ಯೆಯಲ್ಲಿ ಬುಕಿಂಗ್ ಪಡೆದು ಸದ್ಯದಲ್ಲೇ ಎಲ್ಲಾ ರಸ್ತೆಗಳಲ್ಲಿ ತನ್ನ ಹಾವಳಿಯನ್ನು ಶುರು ಮಾಡಲಿದೆ.
ಕಾರು ಬಿಡುಗಡೆಯಾದಾಗಿನಿಂದ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ, ಈ ಕಾರಿಗೆ ಡಿಸ್ಕೌಂಟ್ ಅನ್ನು ಘೋಷಿಸಿದೆ. ಇದೀಗ ಈ ಕಾರನ್ನು ಖರೀದಿ ಮಾಡುವವರಿಗೆ ಸುಮಾರು ಹತ್ತರಿಂದ ಹದಿನೈದು ಸಾವಿರದ ವರೆಗಿನ ಆಫರ್ ಅನ್ನು ಕಂಪನಿ ನೀಡುತ್ತಿದೆ. ಸುಮಾರು ಹದಿನೈದು ಸಾವಿರದ ವರೆಗೆ ಈ ಹ್ಯಾಚ್‌ಬ್ಯಾಕ್ ಕಾರಿನ ಮೇಲೆ ಎಕ್ಸ್‌ಚೇಂಜ್ ಬೋನಸ್ ಸಿಗುತ್ತಿದೆ.

ಇದು ಮಾತ್ರವಲ್ಲದೇ ಕಳೆದ ಬಾರಿಯ ಅಂದರೆ ಕಳೆದ ವರ್ಷದ ಸ್ವಿಫ್ಟ್ (Maruti Suzuki Swift) ಕಾರುಗಳಿಗೆ ಸುಮಾರು 35000 ರೂಗಳ ವರೆಗಿನ ಡಿಸ್ಕೌಂಟ್ ಮತ್ತು ಸಿಎನ್‌ಜಿ ಮಾದರಿಗೆ ಹದಿನೈದು ಸಾವಿರ ರೂಗಳ ವರೆಗಿನ ಆಫರ್ ಅನ್ನು ಕಂಪನಿ ನೀಡುತ್ತಿದೆ. ಹಾಗಾಗಿ ಹಳೇ ಸ್ವಿಫ್ಟ್ ಅನ್ನು ಖರೀದಿಸುವವರು ಸಹ ಈ ಡಿಸ್ಕೌಂಟ್ ಅನ್ನು ಪಡೆದು ಹೊಸ ಕಾರನ್ನು ಖರೀದಿ ಮಾಡಬಹುದಾಗಿದೆ.
ಇನ್ನು ಮಾರುತಿ ಸುಜುಕಿಯ ಹೊಸ ಸ್ವಿಫ್ಟ್ ಬಗ್ಗೆ ನೋಡುವುದಾದರೆ, ಕಾರಿನ ಬುಕ್ಕಿಂಗ್‌ನಲ್ಲಿಯೂ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದೆ. ಮೇ.1 ರಿಂದ ಕಂಪನಿಯು ಈ ಹ್ಯಾಚ್‌ಬ್ಯಾಕ್‌ಗಾಗಿ ಆರ್ಡರ್ ತೆಗೆದುಕೊಳ್ಳುವುದನ್ನು ಪ್ರಾರಂಭಿಸಿತ್ತು. ಕೇವಲ 8 ದಿನಗಳಲ್ಲಿ 10,000ಕ್ಕೂ ಹೆಚ್ಚಿನ ಗ್ರಾಹಕರು ಸ್ವಿಫ್ಟ್ ಕಾರನ್ನು ಕಾಯ್ದಿರಿಸಿದ್ದರು. ಈಗಲೂ ಬುಕ್ಕಿಂಗ್ ಮಾಡಲು ಅವಕಾಶವಿದ್ದು, ಆಸಕ್ತ ಖರೀದಿದಾರರು ರೂ.11,000 ಹಣವನ್ನು ಮುಂಗಡವಾಗಿ ಪಾವತಿಸುವ ಮೂಲಕ ಆರ್ಡರ್ ಮಾಡಬಹುದು.

ದೇಶೀಯವಾಗಿ ಖರೀದಿಗೆ ಲಭ್ಯವಿರುವ ಮಾರುತಿ ಸುಜುಕಿ ಸ್ವಿಫ್ಟ್ ಕಾರು ರೂ.6.49 ಲಕ್ಷದಿಂದ ರೂ.9.65 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ (ಒ), ಝಡ್ಎಕ್ಸ್ಐ, ಝಡ್ಎಕ್ಸ್ಐ ಪ್ಲಸ್ ರೂಪಾಂತರ (ವೇರಿಯೆಂಟ್)ಗಳು ಹಾಗೂ ಪರ್ಲ್ ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ, ಸಿಜ್ಲಿಂಗ್ ರೆಡ್ ನಾವೆಲ್ ಆರೆಂಜ್ ಸೇರಿದಂತೆ ಹಲವು ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ. ಈ ಕಾರಿನಲ್ಲಿ 5 ಮಂದಿ ಓಡಾಟವನ್ನು ನಡೆಸಬಹುದು.
ಈ ಸ್ವಿಫ್ಟ್ ಕಾರು 1.2 - ಲೀಟರ್ 3 - ಸಿಲಿಂಡರ್ ಝಡ್ ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದೆ. ಜೊತೆಗೆ ರೂಪಾಂತರಗಳಿಗೆ ಅನುಗುಣವಾಗಿ 5 - ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. ಇಂಧನ ದಕ್ಷತೆ (Fuel efficiency) ವಿಚಾರಕ್ಕೆ ಬರುವುದಾದರೆ, 24.8 ರಿಂದ 25.72 ಕೆಎಂಪಿಎಲ್ ವರೆಗೆ ಮೈಲೇಜ್ ಕೊಡುತ್ತದೆ.

ಈ ತಿಂಗಳು, ಡಿಜೈರ್ ಡೀಲರ್‌ಗಳು ಆಟೋಮ್ಯಾಟಿಕ್ ರೂಪಾಂತರಗಳಿಗೆ 30,000 ರೂ.ವರೆಗೆ ಮತ್ತು ಮ್ಯಾನುವಲ್‌ನಲ್ಲಿ 25,000 ರೂ.ವರೆಗೆ ಡಿಸ್ಕೌಂಟ್‌ಗಳನ್ನು ನೀಡುತ್ತಿದ್ದಾರೆ. ಆದರೆ, CNG ರೂಪಾಂತರದಲ್ಲಿ ಯಾವುದೇ ಕೊಡುಗೆಗಳಿಲ್ಲ. ಮಾರುತಿ ಮುಂದಿನ ತಲೆಮಾರಿನ ಡಿಜೈರ್ ಅನ್ನು ಭಾರತದಲ್ಲಿ ಹಬ್ಬದ ಋತುವಿನಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications