ಬೈಕ್‌ನಂತೆ ಮೈಲೇಜ್, ಅಗ್ಗದ ಬೆಲೆಯಲ್ಲಿ ಬಿಡುಗಡೆಗೊಂಡು ಹೊಸ ಕ್ರಾಂತಿ ಮಾಡಲಿದೆ 2024ರ ಮಾರುತಿ ಸ್ವಿಫ್ಟ್
ಜಪಾನಿನ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ನ್ಯೂ ಜನರೇಷನ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ತಾಯಿನಾಡು ಜಪಾನ್ ನಲ್ಲಿ ಪರಿಚಯಿಸಿತು. ಹೊಸ ಸುಜುಕಿ ಸ್ವಿಫ್ಟ್ (Suzuki Swift) ಕಾರುಪರಿಷ್ಕೃತ ಸ್ಟೈಲಿಂಗ್ ಮತ್ತು ಹೊಸ ಇಂಜಿನ್ ಆಯ್ಕೆಗಳೊಂದಿಗೆ ನವೀಕರಿಸಿದ ಇಂಟಿಯರ್ ಗಳೊಂದಿಗೆ ಬರಲಿದೆ. ಈ ಹೊಸ ಮಾರುತಿ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.
ಭಾರತದಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವೀಫ್ ಕಳೆದ ಹಲವು ವರ್ಷದಿಂದ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಈ ಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift ) ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಗೊಂಡಿತ್ತು. ಈ ಮಾರುತಿ ಸುಜುಕಿ ಸ್ವಿಫ್ಟ್ ದೀರ್ಘಕಾಲದಿಂದಲೇ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಕೂಡ ಒಂದಾಗಿದೆ.

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸ್ವಿಫ್ಟ್ ಕಾರು 2018ರ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾಯಿತು. ಮಾರುತಿ ಸುಜುಕಿ ಮಾರಾಟದಲ್ಲಿ ಮತ್ತಷ್ಟು ಬೆಳವಣಿಗೆಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ಮಾರುತಿ ಸುಜುಕಿ ಕಂಪನಿಯು ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್ ಕಾರು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಹೊಸ ಸ್ವಿಫ್ಟ್ ಕಾರು ಭಾರತದಲ್ಲಿ ರೋಡ್ ಟೆಸ್ಟ್ ನಡೆಸಿದೆ.
ಈ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಗುಜರಾತ್‌ನ ಮಾರುತಿ ಸುಜುಕಿಯ ಹಂಸಲ್‌ಪುರ ಘಟಕದಲ್ಲಿ ತಯಾರಿಸಲಾಗುತ್ತದೆ. ತಿಂಗಳಿಗೆ ಈ ಸ್ವಿಫ್ಟ್ ಮಾದರಿಯ ಸರಾಸರಿ 18,000 ಯುನಿಟ್‌ಗಳು ಮಾರಾಟವಾಗುತ್ತಿದೆ. ಇನ್ನು ಹೊಸ ಮಾದರಿಯು ಬಿಡುಗಡೆಯಾದ ಬಳಿಕ ಮಾರಾಟದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಕಾಣುವ ಸಾಧ್ಯತೆಗಳಿದೆ. ಭಾರತದ ಅಚ್ಚುಮೆಚ್ಚಿನ ಹ್ಯಾಚ್‌ಬ್ಯಾಕ್ ಒಳ ಮತ್ತು ಹೊರಭಾಗದಲ್ಲಿ ಮರುವಿನ್ಯಾಸವನ್ನು ಪಡೆದುಕೊಂಡಿದೆ.

ಇದೀಗ 2024ರ ಮಾರುತಿ ಸ್ವಿಫ್ಟ್ ಹೈಬ್ರಿಡ್ ಕಾರಿನ ಟಿವಿಸಿಯನ್ನು ಬಿಡುಗಡೆಗೊಂಡಿದೆ. ಈ ಹೊಸ ಸ್ವಿಫ್ಟ್ ಹೊಸ ಮಿನಿ ಕಂಟ್ರಿಮ್ಯಾನ್‌ನಿಂದ ಅನೇಕ ವಿನ್ಯಾಸ ಸ್ಫೂರ್ತಿ ಪಡೆದುಕೊಂಡಿದೆ ಹೊಸ ಸ್ವಿಫ್ಟ್ ಕಾರಿನ ವಿನ್ಯಾಸದ ಬಗ್ಗೆ ಹೇಳಬೇಕಾದರೆ, ಮಾರುತಿ ಸ್ವಿಫ್ಟ್ ಕಾರಿನ ಮುಂಭಾಗದಲ್ಲಿ ನವೀಕರಿಸಲಾಗಿದೆ. ಇದರ ಮುಂಭಾಗದಲ್ಲಿ ಚಿಕ್ ಗ್ರಿಲ್, ಎಲ್-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ (ಡಿಆರ್ಎಲ್ ಗಳು) ಮತ್ತು ಸಿ-ಆಕಾರದ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಹೊಂದಿವೆ.
ಇದರೊಂದಿಗೆ ಕ್ಲ್ಯಾಂಪ್-ಶೆಲ್ ಹುಡ್ ಮತ್ತು 16-ಇಂಚಿನ ಅಲಾಯ್ ವ್ಹೀಲ್ ಗಳೊಂದಿಗೆ ಎಲ್ಇಡಿ ಹೆಡ್ ಲೈಟ್ ಗಳನ್ನು ಹೊಂದಿವೆ. ಸ್ವಿಫ್ ಕಾರು 13 ಬಣ್ಣಗಳ ಆಯ್ಕೆಗಳೊಂದಿಗೆ ಬರಲಿದೆ ಎಂದು ವರದಿಯಾಗಿದೆ. ಇದರ ಸಿಂಗಲ್-ಟೋನ್ ಬಣ್ಣಗಳ ಆಯ್ಕೆ ಫ್ರಾಂಟಿಯರ್ ಬ್ಲೂ, ಕೂಲ್ ಹಳದಿ, ಫ್ಲೇಮ್ ಆರೆಂಜ್, ಕಾರವಾನ್ ಐವರಿ, ಪ್ಯೂರ್ ವೈಟ್, ಪ್ರೀಮಿಯಂ ಸಿಲ್ವರ್, ಸ್ಟಾರ್ ಸಿಲ್ವರ್ ಮತ್ತು ಸೂಪರ್ ಬ್ಲ್ಯಾಕ್ ಆಗಿದೆ.

ಇನ್ನು ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆ ಫ್ರಾಂಟಿಯರ್ ಬ್ಲೂ, ಬರ್ನಿಂಗ್ ರೆಡ್, ಕೂಲ್ ಯೆಲ್ಲೋ ಮತ್ತು ಪ್ಯೂರ್ ವೈಟ್ ಒಳಗೊಂಡಿವೆ. ಹೊಸ ಸ್ವಿಫ್ಟ್ 3860mm ಉದ್ದ, 1695mm ಅಗಲ ಮತ್ತು 1,500mm ಎತ್ತರ ಮತ್ತು 2,450mm ವ್ಹೀಲ್‌ಬೇಸ್ ಹೊಂದಿದೆ. ಪ್ರಸ್ತುತ ಮಾದರಿಗೆ ಹೋಲಿಸಿದರೆ, ಹೊಸ ಸ್ವಿಫ್ಟ್ 15 ಎಂಎಂ ಉದ್ದವಾಗಿದೆ, ಅಗಲ ಮತ್ತು ಎತ್ತರ ಕ್ರಮವಾಗಿ 40 ಎಂಎಂ ಮತ್ತು 30 ಎಂಎಂ ಕಡಿಮೆಯಾಗಿದೆ.
ಹೊಸ ಸ್ವಿಫ್ಟ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ತೇಲುವ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ಕ್ಲೈಮೆಂಟ್ ಕಂಟ್ರೋಲ್, ಸ್ಟಾರ್ಟ್-ಸ್ಟಾಪ್ ಬಟನ್, 360-ಡಿಗ್ರಿ ಕ್ಯಾಮೆರಾ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ನಂತಹ ಅತ್ಯಾಧುನಿಕ ಫಿಚರ್ಸ್ ಗಳನ್ನು ಹೊಂದಿವೆ. ಹೊಸ ಸ್ವಿಫ್ಟ್ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ 3-ಸಿಲಿಂಡರ್ ಎಂಜಿನ್ ಮತ್ತು 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್-ಹೈಬ್ರಿಡ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ.
ಈ ಎಂಜಿನ್‌ಗಳು 80 bhp ಪವರ್ ಮತ್ತು 108Nm ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಆಯ್ಕೆ ಮಾಡಬಹುದು. ಜಪಾನ್‌ನಲ್ಲಿ ನ್ಯೂ ಜನರೇಷನ್ ಸ್ವಿಫ್ಟ್ ಮೂರು ರೂಪಾಂತರಗಳಲ್ಲಿ ಪರಿಚಯಿಸಿತು. ಈ ಮಾರುತಿ ಸ್ವಿಫ್ಟ್ ಕಾರು XG, ಹೈಬ್ರಿಡ್ MX ಮತ್ತು ಹೈಬ್ರಿಡ್ MZ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.


Click it and Unblock the Notifications