ಭಾರತದಲ್ಲಿ ಆಕರ್ಷಕ ಮರ್ಸಿಡಿಸ್ ಕಾನ್ಸೆಪ್ಟ್ EQG ಅನಾವರಣ
ಜಮರ್ನಿ ಮೂಲದ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್ ಬೆಂಝ್ ಭಾರತದಲ್ಲಿ ಮೊದಲ ಬಾರಿಗೆ ಆಲ್-ಎಲೆಕ್ಟ್ರಿಕ್ ಕಾನ್ಸೆಪ್ಟ್ EQG ಅನ್ನು ಪ್ರದರ್ಶಿಸಿದೆ. ಮರ್ಸಿಡಿಸ್ ಕಾನ್ಸೆಪ್ಟ್ EQG (Mercedes Concept EQG) ಅನ್ನು ಹೊಸದಾಗಿ ಬಿಡುಗಡೆಯಾದ GLA ಮತ್ತು GLE 53 ಕೂಪೆ ಫೇಸ್‌ಲಿಫ್ಟ್‌ಗಳ ಜೊತೆಗೆ ಪ್ರದರ್ಶಿಸಿದೆ.
2021ರಲ್ಲಿ ಫ್ರಾಂಕ್‌ಫರ್ಟ್ ಮೋಟಾರ್ ಶೋನಲ್ಲಿ ಮೊದಲ ಬಾರಿಗೆ ಭಾರತೀಯ ಪ್ರೇಕ್ಷಕರಿಗೆ ಪ್ರದರ್ಶಿಸಿದರು. ಇದೀಗ ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಹೊಸ ಮರ್ಸಿಡಿಸ್ ಕಾನ್ಸೆಪ್ಟ್ EQG ಮಾದರಿಯನ್ನು ಭಾರತೀಯ ಮಾರುಕಟ್ತೆಯಲ್ಲಿ ಬಿಡುಗಡೆಗೊಳಿಸುವುದಾಗಿ ಖಚಿತಪಡಿಸಿದೆ. ವರದಿಗಳ ಪ್ರಕಾರ, ಈ ಹೊಸ ಮರ್ಸಿಡಿಸ್ ಎಲೆಕ್ಟ್ರಿಕ್ ಎಸ್‍ಯುವಿಯು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಹೊಸ ಮರ್ಸಿಡಿಸ್ ಕಾನ್ಸೆಪ್ಟ್ EQG ಮಾದರಿಯ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯು ಬಾಕ್ಸಿ ಬಾಡಿ ಶೈಲಿಯನ್ನು ಉಳಿಸಿಕೊಳಬಹುದು. ಈ ಬಾಕ್ಸಿ ಬಾಡಿ ಶೈಲಿಯು ಐಕಾನ್ ಆಗಿ ಮಾಡಿದ ಐಕಾನಿಕ್ ಗೆಲಾಂಡವಾಗನ್ ವಿನ್ಯಾಸ ಶೈಲಿಯನ್ನು ಹೊಂದಿದೆ. ಜಿ-ಕ್ಲಾಸ್ ವಿನ್ಯಾಸಕ್ಕೆ ಕೆಲವು ಟ್ವೀಕ್‌ಗಳು ಇರಲಿದ್ದು, ಅದನ್ನು ಆಲ್-ಎಲೆಕ್ಟ್ರಿಕ್ ಮರ್ಸಿಡಿಸ್ ಇಕ್ಯೂ ಫೋಲ್ಡ್‌ಗೆ ತರಲು ಸಹಾಯ ಮಾಡುತ್ತದೆ.
ಈ ಬದಲಾವಣೆಗಳು ಬಾಕ್ಸಿ ಎಸ್‌ಯುವಿಯನ್ನು ಅದರ ಡಿನೋ-ಬರ್ನಿಂಗ್ ಸಿಬ್ಲಿಂಗ್‌ಗೆ ಹೋಲಿಸಿದರೆ ಹೆಚ್ಚು ಏರೋಡೈನಾಮಿಕ್ ದಕ್ಷ ಮಾದರಿಯನ್ನಾಗಿ ಮಾಡುವ ನಿರೀಕ್ಷೆಯಿದೆ. ಇನ್ನು ಇದರ ಬ್ಯಾಟರಿ ಪ್ಯಾಕ್ ಅನ್ನು ಎಲೆಕ್ಟ್ರಿಕ್ ಜಿ-ಕ್ಲಾಸ್‌ನ ಲ್ಯಾಡರ್-ಫ್ರೇಮ್ ಚಾಸಿಸ್‌ಗೆ ಅಳವಡಿಸಲಾಗಿದೆ. ಪ್ರೊಡಕ್ಷನ್-ಸ್ಪೆಕ್ ಇಕ್ಯೂಜಿಯು ಕಾನ್ಸೆಪ್ಟ್ ಇಕ್ಯೂಜಿಯ ಕ್ವಾಡ್-ಮೋಟರ್, ಆಲ್-ವೀಲ್ ಡ್ರೈವ್ ಸೆಟಪ್ ಅನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಪವರ್ ಅಂಕಿಅಂಶಗಳನ್ನು ಬಹಿರಂಗಪಡಿಸದಿದ್ದರೂ, EQG AMG V8-ಚಾಲಿತ G63 ಮಾದರಿಯಂತೆ ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ. ಈ ಮರ್ಸಿಡಿಸ್ ಎಲೆಕ್ಟ್ರಿಕ್ ಎಸ್‍ಯುವಿಯು 4.5 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಕ್ವಾಡ್-ಮೋಟಾರ್ ಸೆಟಪ್ ಮರ್ಸಿಡಿಸ್ EQG ಸ್ಪೋರ್ಟ್ ಅನ್ನು ಪ್ರತಿ ಚಕ್ರದಲ್ಲಿ ಮೋಟರ್ ಅನ್ನು ನೀಡಿದೆ. ಇದು ಪ್ರೊಡಕ್ಷನ್ ಸ್ಪೆಕ್ ಎಸ್‍ಯುವಿಯು ಅಸಾಧಾರಣ ಆಫ್-ರೋಡ್ ಸಾಮರ್ಥ್ಯವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇನ್ನು ಪ್ರತಿ ಚಕ್ರದ ಸೆಟಪ್‌ನಲ್ಲಿನ ಮೋಟರ್ ಎಂದರೆ EQG ತನ್ನದೇ ಆದ ಸಿಗ್ನೇಚರ್ ಚಲನೆಯನ್ನು ಹೊಂದಿದೆ, ಇದು ಎಲೆಕ್ಟ್ರಿಕ್ ಎಸ್‍ಯುವಿಗಳಲ್ಲಿ ಸಾಮಾನ್ಯವಾಗಿದೆ. ಇನ್ನು ಈ ಹೊಸ ಹೊಸ ಮರ್ಸಿಡಿಸ್ ಕಾನ್ಸೆಪ್ಟ್ EQG ಎಲೆಕ್ಟ್ರಿಕ್ ಎಸ್‍ಯುವಿಯು ಡ್ಯುಯಲ್ ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ. ಇನ್ನು ಹೊಸ ಮರ್ಸಿಡಿಸ್ ಕಾನ್ಸೆಪ್ಟ್ EQG ಎಲೆಕ್ಟ್ರಿಕ್ ಎಸ್‍ಯುವಿಯು ಅಂದಾಜು 500 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಇದರೊಂದಿಗೆ ಭಾರತದಲ್ಲಿ ನವೀಕರಿಸಿದ 2024 ಜಿಎಲ್ಎ (2024 GLA) ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ. ಇದು ಅತ್ಯಂತ ಕೈಗೆಟುಕುವ ಬೆಲೆಗೆ ದೊರೆಯುವ ಕಾರಾಗಿದ್ದು, ರೂ.50.50 ಲಕ್ಷ ಆರಂಭಿಕ ಬೆಲೆಗೆ ಪರಿಚಯಿಸಿದೆ. ನೂತನ ಮರ್ಸಿಡಿಸ್ ಬೆಂಜ್ ಜಿಎಲ್ಎ ಎಸ್‌ಯುವಿ, ಹೊರಭಾಗ ಹಾಗೂ ವೈಶಿಷ್ಟ್ಯದಲ್ಲಿ ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳನ್ನು ಪಡೆದುಕೊಂಡಿದೆ. ಹೊಸದಾದ 'ಸ್ಪೆಕ್ಟ್ರಲ್ ಬ್ಲೂ' ಬಣ್ಣದ ಆಯ್ಕೆಯಲ್ಲಿಯೂ ಲಭ್ಯವಿದೆ.
2010ರಲ್ಲಿ ಮೊದಲ ಬಾರಿಗೆ ದೇಶೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಇಲ್ಲಿಯವರೆಗೂ 14,000ಕ್ಕೂ ಹೆಚ್ಚು ಯುನಿಟ್ ಮಾರಾಟಗೊಳಿಸಿದೆ. 2024ರ ಮರ್ಸಿಡಿಸ್ ಬೆಂಜ್ ಜಿಎಲ್ಎ ಎಸ್‌ಯುವಿ 2 ರೂಪಾಂತರದ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಅವುಗಳೆಂದರೆ, ಪ್ರೋಗ್ರೆಸ್ಸಿವ್ ಲೈನ್ ಹಾಗೂ ಎಎಂಜಿ ಲೈನ್. ಪ್ರೋಗ್ರೆಸ್ಸಿವ್ ಲೈನ್ ರೂಪಾಂತರ ಪೆಟ್ರೋಲ್ - ಡೀಸೆಲ್ ಎಂಜಿನ್ ಮತ್ತು ಎಎಂಜಿ ಲೈನ್ ರೂಪಾಂತರ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








