ಕ್ಯಾಮರಾ ಕಣ್ಣಿಗೆ ಬಿತ್ತು ಎಂಜಿಯ ಬ್ರಹ್ಮಾಸ್ತ್ರ: ಹೊಸ ಅದ್ಭುತ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜು
ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡ ಎಂಜಿ ತನ್ನ ಎಲೆಕ್ಟ್ರಿಕ್ ಕಾರುಗಳ ಸರಣಿಯನ್ನು ವಿಸ್ತರಿಸಲು ಸಜ್ಜಾಗಿದೆ. ಇದರ ಭಾಗವಾಗಿ ಎಂಜಿ ತನ್ನ ಹೊಸ ಕ್ಲೌಡ್ ಎಲೆಕ್ಟ್ರಿಕ್ ಕಾರನ್ನು ಮರೆಮಾಚಿ ಸ್ಪಾಟ್ ಟೆಸ್ಟ್ ಅನ್ನು ಪ್ರಾರಂಭಿಸಿದೆ. ಆಸಕ್ತಿದಾಯಕ ಸಂಗತಿಯೆಂದರೆ, ರೋಡ್ ಟೆಸ್ಟ್ ವೇಳೆ "ಇಂಟೆಲಿಜೆಂಟ್ CUV" (CUV ಎಂದರೆ ಕ್ರಾಸ್‌ಓವರ್ ಯುಟಿಲಿಟಿ ವೆಹಿಕಲ್) ಸ್ಟಿಕ್ಕರ್ ಅನ್ನು ಈ ಎಲೆಕ್ಟ್ರಿಕ್ ಕಾರಿನ ಬದಿಯಲ್ಲಿ ಅಂಟಿಸಿದ್ದಾರೆ. ಇದು ವಿಭಿನ್ನವಾಗಿ ಕಾಣುತ್ತದೆ. ಎಂಜಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಕ್ಲೌಡ್ ಎಲೆಕ್ಟ್ರಿಕ್ ಕಾರನ್ನು ಹೆಚ್ಚು ಸುಧಾರಿತ ಮತ್ತು ವೈಶಿಷ್ಟ್ಯ-ಭರಿತ ಆವೃತ್ತಿಯನ್ನು ಪರಿಗಣಿಸುತ್ತಿರಬಹುದು
ಹೊಸ ಎಂಜಿ ಕ್ಲೌಡ್ (MG Cloud) ಎಲೆಕ್ತ್ರಿಕ್ ಕಾರು ವಿನ್ಯಾಸದ ಬಗ್ಗೆ ಹೇಳುವುದಾದರೆ, ಕ್ಲೌಡ್ ಅಂತರಾಷ್ಟ್ರೀಯ ರೂಪಾಂತರದಂತೆಯೇ ಕಾಣುವ ನಿರೀಕ್ಷೆಯಿದೆ. ಇದು ಕಾರಿನ ಅಗಲದಾದ್ಯಂತ ಚಲಿಸುವ ಕನೆಕ್ಟಿವಿಟಿ LED DRL, ಮುಚ್ಚಿದ ಗ್ರಿಲ್, ಮುಂಭಾಗದ ಬಂಪರ್‌ನಲ್ಲಿ ಇರಿಸಲಾದ ಹೆಡ್‌ಲ್ಯಾಂಪ್‌ಗಳು ಇತ್ಯಾದಿಗಳೊಂದಿಗೆ ಬರುವ ನಿರೀಕ್ಷೆಯಿದೆ. ಈ ಕಾರಿ ವಿನ್ಯಾಸವು ಸೈಡ್ ಪ್ರೊಫೈಲ್‌ನಲ್ಲಿ ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತದೆ.

ಎಂಜಿ ಕ್ಲೌಡ್ ಎಲೆಕ್ತ್ರಿಕ್ ಕಾರಿನ ಟಾಪ್-ಸ್ಪೆಕ್ ಆವೃತ್ತಿಯು ಹೆಚ್ಚು ಸುಧಾರಿತ ಅಡ್ವಾನ್ಸ್ ಡ್ರೈವಿಂಗ್ ತಂತ್ರಜ್ಞಾನ ಮತ್ತು ಮಸಾಜ್ ಸೀಟ್‌ಗಳು, ರೆಫ್ರಿಜರೇಟರ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಹೆಚ್ಚು ಐಷಾರಾಮಿ ಒಳಾಂಗಣವನ್ನು ಸಹ ಒಳಗೊಂಡಿರುತ್ತದೆ. ಈ ಹೊಸ ಎಂಜಿ ಕ್ಲೌಡ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸದ ವಿಷಯದಲ್ಲಿ ಸಣ್ಣ ಬಾನೆಟ್ ಮತ್ತು ದೊಡ್ಡ ಗ್ಲಾಸ್ ಪ್ರದೇಶದೊಂದಿಗೆ ಸಂಪೂರ್ಣ ಎಂಪಿವಿಯಾಗಿದೆ. ಇದು ಭಾರತೀಯ ಮಾರುಕಟ್ಟೆಗೆ ಬಂದಾಗ ಅತ್ಯಂತ ಪ್ರೀಮಿಯಂ ಮತ್ತು ದುಬಾರಿಯಾಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ.
ಈ ಎಂಜಿ ಕ್ಲೌಡ್ ಎಲೆಕ್ತ್ರಿಕ್ ಕಾರಿನ ಒಳಭಾಗದಲ್ಲಿದೊಡ್ಡ 8.8-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ ಪ್ಲೇ, ಇನ್ನೂ ದೊಡ್ಡದಾದ ಫ್ರೀ-ಸ್ಟ್ಯಾಂಡಿಂಗ್ ಇನ್ಫೋಟೈನ್ಮೆಂಟ್ ಯೂನಿಟ್, ದೊಡ್ಡ ಪನರೊಮಿಕ್ ಸನ್‌ರೂಫ್, ಲೆಥೆರೆಟ್ ಸೀಟ್‌ಗಳು, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಚಾಲಿತ ಟೈಲ್‌ಗೇಟ್ ಮತ್ತು ಡ್ಯುಯಲ್-ಜೋನ್ ಕ್ಲೈಮೆಂಟ್ ಅನ್ನು ಹೊಂದಿದೆ.

ಹೊಸ ಎಂಜಿ ಕ್ಲೌಡ್ ಎಲೆಕ್ತ್ರಿಕ್ ಕಾರಿನ ಪವರ್‌ಟ್ರೇನ್‌ಗೆ ಸಂಬಂಧಿಸಿದಂತೆ, ಇದರಲ್ಲಿ ದೊಡ್ಡ 50.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಈ 177 PS ಮತ್ತು 280 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಎಂಜಿ ZS ಎಲೆಕ್ಟ್ರಿಕ್ ಎಸ್‍ಯುವಿಯಂತೆಯೇ ಇರುವ ಕಾರಣ ಈ ವಿವರಣೆಯು ಪರಿಚಿತವಾಗಿದೆ.
ಈ ಹೊಸ ಎಂಜಿ ಕ್ಲೌಡ್ ಎಲೆಕ್ತ್ರಿಕ್ ಕಾರಿನಲ್ಲಿ ಫುಲ್ ಚಾರ್ಜ್‌ಗೆ ಸುಮಾರು 450 ಕಿ.ಮೀ ರೇಂಜ್ ಅನ್ನು ನಾವು ನಿರೀಕ್ಷಿಸುತ್ತೇವೆ. ಇನ್ನು ಎಂಜಿ ZS ಇವಿಗಿಂತ ಸ್ವಲ್ಪ ಕಡಿಮೆ ರೇಂಜ್ ಅನ್ನು ಹೊಂದಿರಲಿದೆ. ಇನ್ನು ಚಾರ್ಜಿಂಗ್ ಸಮಯಗಳು ಎಂಜಿ ZS ಎಲೆಕ್ಟ್ರಿಕ್ ಎಸ್‍ಯುವಿಯಂತೆಯೇ ಇರುತ್ತದೆ. ಒಟ್ಟಿನಲ್ಲಿ ಹೊಸ ಎಂಜಿ ಎಲೆಕ್ಟ್ರಿಕ್ ಕಾರು ಉತ್ತಮ ರೇಂಜ್ ಅನ್ನು ನೀಡುತ್ತದೆ.

ಮುಂಬರುವ ಹೊಸ ಎಂಜಿ ಕ್ಲೌಡ್ ಎಲೆಕ್ಟ್ರಿಕ್ ಕಾರಿನ ಪ್ರಾರಂಭಿಕ ಬೆಲೆಯು ರೂ.30 ಲಕ್ಷಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿರಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಈ ಎಂಜಿ ಕ್ಲೌಡ್ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಗ ಬಿವೈಡಿ Atto3 ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








