ಆಕರ್ಷಕ ವಿನ್ಯಾಸದ ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ ವಿಶೇಷತೆಗಳೇನು?

ಭಾರತದ ಮಾರುಕಟ್ಟೆಯಲ್ಲಿ ಯುಗಾದಿಯ ಮರುದಿನ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ (MG Hector Blackstorm Edition) ಎಸ್‌ಯುವಿಯನ್ನು ಬಿಡುಗಡೆಗೊಳಿಸಿತು. ಈ ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ ಮಾದರಿಗೆ ರೂ.21.25 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ.

ವಿನ್ಯಾಸ: ಎಂಜಿ ಕಂಪನಿಯ ಗ್ಲೋಸ್ಟರ್ ಮತ್ತು ಆಸ್ಟರ್ ಕಾರುಗಳ ನಂತರ, ಹೆಕ್ಟರ್ ಕೂಡ ಸ್ಪೆಷಲ್ ಎಡಿಷನ್‌ನೊಂದಿಗೆ ಬಂದಿದೆ. ಇದರಲ್ಲಿ ನೂತನ ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಸ್‌ಯುವಿ ವಿಶೇಷ ಆವೃತ್ತಿಯಾಗಿರುವುದರಿಂದ ಹೊರಭಾಗದ ವಿನ್ಯಾಸದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದೆ. ಸಂಪೂರ್ಣವಾಗಿ ಕಪ್ಪು (ಬ್ಲ್ಯಾಕ್) ಬಣ್ಣವನ್ನು ಹೊಂದಿರುವ ಈ ಕಾರು, ಅಲ್ಲಲ್ಲಿ ಕೆಂಪು (ರೆಡ್) ಬಣ್ಣವನ್ನು ಒಳಗೊಂಡಿದೆ. ಇದು ಬಿಟ್ಟರೆ, ಬಹುತೇಕ ವಿನ್ಯಾಸ (ಡಿಸೈನ್) ಸಾಮಾನ್ಯ ಹೆಕ್ಟರ್ ಕಾರಿಗೆ ಹೋಲಿಕೆಯಾಗುತ್ತದೆ.

MG Hector Blackstorm Edition

ಈ ಎಸ್‍ಯುವಿಯಲ್ಲಿ 18-ಇಂಚಿನ ಆಲ್-ಬ್ಲ್ಯಾಕ್ ಅಲಾಯ್ ವೀಲ್ಸ್, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್ಸ್, ಟೈಲ್‌ಲೈಟ್‌ ಅನ್ನು ಹೊಂದಿದೆ. ಒಳಭಾಗವು ಸಹ ಕಪ್ಪು ಬಣ್ಣದ ಆಯ್ಕೆಯನ್ನು ಪಡೆದಿದ್ದು, ಡ್ಯಾಶ್‌ಬೋರ್ಡ್, ಡೋರ್ ಹ್ಯಾಂಡಲ್ಸ್, ಸ್ಟೀರಿಂಗ್ ವೀಲ್, ಸೆಂಟರ್ ಕನ್ಸೋಲ್ ಹಾಗೂ ಎಸಿ ವೆಂಟ್‌ಗಳು ಹೆಚ್ಚು ಆಕರ್ಷಕವಾಗಿವೆ. ಹೆಡ್‌ರೆಸ್ಟ್‌ ಬ್ಲ್ಯಾಕ್‌ಸ್ಟಾರ್ಮ್ ಬ್ಯಾಡ್ಜಿಂಗ್ ಅನ್ನು ಹೊಂದಿದ್ದು, ಆಂಬಿಯೆಂಟ್ ಲೈಟಿಂಗ್‌ ಕೆಂಪು ಬಣ್ಣದಲ್ಲಿವೆ.

ಫೀಚರ್ಸ್: ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ 5, 6 ಅಥವಾ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ಫೀಚರ್ಸ್ ಗಳನ್ನು ಒಳಗೊಂಡಿದೆ.

MG Hector Blackstorm Edition

ಎಂಜಿನ್: ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ 2 ಪವರ್‌ಟ್ರೇನ್‌ ಆಯ್ಕೆಯಲ್ಲಿ ಸಿಗುತ್ತದೆ. ಇದರ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 141 ಪಿಎಸ್ ಗರಿಷ್ಠ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಮ್ಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ.

ಈ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ ಎಸ್‌ಯುವಿ, 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯೂ ದೊರೆಯಲಿದ್ದು, 168 ಪಿಎಸ್ ಮತ್ತು 350 ಎನ್ಎಂ ಪೀಕ್ ಟಾರ್ಕ್ ಮಾತ್ರ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ನೊಂದಿಗೆ ಸಿಗುತ್ತದೆ. ಇದು ಕೂಡ 15.58 ಕೆಎಂಪಿಎಲ್ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

MG Hector Blackstorm Edition

ಸುರಕ್ಷತಾ ಫೀಚರ್ಸ್: ಈ ಹೊಸ ಹೆಕ್ಟರ್ ಎಡಿಷನ್ ಸುರಕ್ಷತೆ ವಿಚಾರದಲ್ಲಿಯೂ ಈ ಕಾರು ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಫ್ರಂಟ್ & ರೇರ್ ಪಾರ್ಕಿಂಗ್ ಸೇನಾರ್ಸ್, ಆಲ್-ವೀಲ್ ಡಿಸ್ಕ್ ಬ್ರೇಕ್ಸ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360 - ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, April 12, 2024, 10:22 [IST]
English summary
New mg hector blackstorm edition top things details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+