ಕಡಿಮೆ ಬೆಲೆಯಲ್ಲಿ ಹೊಸ ಪುಟ್ಟ ಎಂಜಿ ಎಲೆಕ್ಟ್ರಿಕ್ ಕಾರು ಬಿಡುಗಡೆ: ವಿಶೇಷತೆಗಳೇನು?
JSW ಎಂಜಿ ಮೋಟಾರ್ (JSW MG Motor) ಸಂಸ್ಥೆಯು ಹಲವು ಅಂತರರಾಷ್ತ್ರೀಯ ಮಾರುಕಟ್ಟೆಗಳಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡುತ್ತಿದೆ. ಭಾರತದಲ್ಲಿ ಎಂಜಿ ಕಂಪನಿಯು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಬಜೆಟ್ ಬೆಲೆಯ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲು ಎಂಜಿ ಕಂಪನಿಯು ಸಜ್ಜಾಗುತ್ತಿದೆ.
ಈ ನಡುವೆ ಚೀನಾದಲ್ಲಿ ಬಾಜುನ್ ಯೆಪ್ ಪ್ಲಸ್ ಇಎಸ್‍ಯುವಿ (Baojun Yep Plus eSUV) ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಎಂಜಿ ಯೆಪ್ ಪ್ಲಸ್ (MG Yep Plus) ಇಎಸ್‍ಯುವಿ ಬೆಲೆಯು CNY 94K (ರೂ. 10.8 ಲಕ್ಷ) ಆಗಿದೆ. ಇದು 3-ಡೋರ್ ಬಾಜುನ್ ಯೆಪ್ ಅನ್ನು ಆಧರಿಸಿದೆ. ಯೆಪ್ ಪ್ಲಸ್ ಹೆಸರೇ ಸೂಚಿಸುತ್ತದೆ. ಪ್ಲಸ್-ಗಾತ್ರದ 5-ಡೋರಿನ ಆವೃತ್ತಿಯು 4-ಸೀಟುಗಳ ವಿನ್ಯಾಸದಿಂದಾಗಿ ಉತ್ತಮ ಪ್ರಾಯೋಗಿಕತೆಯನ್ನು ಹೊಂದಿದೆ.

ಬಾಜುನ್ ಯೆಪ್ ಪ್ಲಸ್ ಎಲೆಕ್ಟ್ರಿಕ್ ಎಸ್‍ಯುವಿಯು ಬ್ರ್ಯಾಂಡ್ SAIC-GM-Wuling JV ಅಡಿಯಲ್ಲಿ ಬರುತ್ತದೆ ಮತ್ತು ಎಂಜಿ ಮೋಟಾರ್ ಬ್ರ್ಯಾಂಡ್ ಅಡಿಯಲ್ಲಿ ಹೊಸ ಯೆಪ್ ಪ್ಲಸ್ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. JSW ಗ್ರೂಪ್ ಮತ್ತು ಎಂಜಿ ಮೋಟಾರ್ ನಡುವಿನ ಹೊಸ JV ಪ್ರತಿ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 3 ಹೊಸ ಕಾರು ಬಿಡುಗಡೆಗಳನ್ನು ಘೋಷಿಸಿದೆ ಮತ್ತು ಯೆಪ್ ಪ್ಲಸ್ ಅವುಗಳಲ್ಲಿ ಒಂದಾಗಿರಬಹುದು.
ಚೀನಾದಲ್ಲಿ, ಯೆಪ್ ಪ್ಲಸ್ CNY 93,800 ಮತ್ತು CNY 103,800 ನಡುವೆ ಬೆಲೆಯನ್ನು ಹೊಂದಿದೆ, ಇದು ಸರಿಸುಮಾರು ಭಾರತದಲ್ಲಿ ಕರೆನ್ಸಿಯಲ್ಲಿ ರೂ. 10.9 ಲಕ್ಷದಿಂದ ರೂ.12 ಲಕ್ಷ ಆಗಿದೆ. ಯೆಪ್ ಪ್ಲಸ್ ಯೆಪ್‌ನ 'ಸ್ಕ್ವೇರ್ ಬಾಕ್ಸ್+' ವಿನ್ಯಾಸ ಭಾಷೆಗೆ ಬದ್ಧವಾಗಿದೆ ಮತ್ತು ಇದೇ ರೀತಿಯ ವಿನ್ಯಾಸದ ಗುಣಲಕ್ಷಣಗಳನ್ನು ಸಹ ನೀಡುತ್ತದೆ. ಹೊಸ 5-ಡೋರ್ ಮಾದರಿಯು 3,996 mm ಉದ್ದ, 1,760 mm ಅಗಲ ಮತ್ತು 1,726 mm ಎತ್ತರವನ್ನು ಹೊಂದಿದೆ.

ಇನ್ನು 2,560 mm ಉದ್ದದ ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ ವಾಹನವು ಅದರ ಬಾಕ್ಸ್ ಸಿಲೂಯೆಟ್ ಮತ್ತು ಒರಟಾದ ಬಾಡಿ ಕ್ಲಾಡಿಂಗ್‌ನಿಂದಾಗಿ ಆಫ್-ರೋಡ್ ವೈಬ್ ಅನ್ನು ನೀಡುತ್ತದೆ. ಇದರ ಇತರ ಬಾಹ್ಯ ವಿನ್ಯಾಸದ ಮುಖ್ಯಾಂಶಗಳು ಪ್ಲೋಟಿಂಗ್ ರೂಫ್, 3-ಡೋರ್ ಮಾದರಿಯ ಹಿಂಬದಿಯ ಪರದೆಯಿಲ್ಲದ ಫ್ಲಾಟ್ ಸೈಡ್-ಹಿಂಗ್ಡ್ ಟೈಲ್‌ಗೇಟ್ ಮತ್ತು ಐದು ಬಾಹ್ಯ ಬಣ್ಣಗಳನ್ನು ಹೊಂದಿವೆ.
ಈ ಎಸ್‍ಯುವಿ ಎಲ್ಇಡಿ ಲೈಟಿಂಗ್, ರೂಫ್ ರೈಲ್‌ಗಳು ಮತ್ತು ಸಿ ಮತ್ತು ಡಿ ಪಿಲ್ಲರ್‌ಗಳ ನಡುವೆ ಆಸಕ್ತಿದಾಯಕ ಬಾಡಿ ಪ್ಯಾನೆಲ್. ಅಲಾಯ್ ವ್ಹೀಲ್ ಗಳು 16-ಇಂಚುಗಳು ಮತ್ತು 'ಲಾಡೆನ್' ಗ್ರೌಂಡ್ ಕ್ಲಿಯರೆನ್ಸ್ 150 ಎಂಎಂ ಆಗಿದೆ. ಯೆಪ್ ಪ್ಲಸ್ ಎಲ್ಲಾ ನಾಲ್ಕು ಕಾರ್ನರ್ ಗಳಲ್ಲಿಯೂ ಸಹ ಡಿಸ್ಕ್ ಬ್ರೇಕ್ ಗಳನ್ನು ಪಡೆಯುತ್ತದೆ.

ಈ ಎಲೆಕ್ಟ್ರಿಕ್ ಎಸ್‍ಯುವಿಯ ಒಳಭಾಗದಲ್ಲಿ ಸಾಫ್ಟ್ ಟಚ್ ಪ್ಲಾಸ್ಟಿಕ್‌ಗಳು ಮತ್ತು ಡ್ಯುಯಲ್-ಟೋನ್ ಬಣ್ಣದ ಸ್ಕೀಮ್‌ನಲ್ಲಿ ಫ್ಲಾಟ್ ಮಲ್ಟಿ-ಲೇಯರ್ಡ್ ಡ್ಯಾಶ್‌ಬೋರ್ಡ್ ಅನ್ನು ನಾವು ನೋಡಬಹುದು. ಇನ್ನು ಎಂಜಿ ಕಾಮೆಟ್ ನಲ್ಲಿರುವಂತೆ ಸೆಂಟರ್ ಕನ್ಸೋಲ್ ಟೊಳ್ಳಾಗಿದೆ. ಸ್ಟೀರಿಂಗ್ ವ್ಹೀಲ್ 3-ಸ್ಪೋಕ್ ಯುನಿಟ್ ಆಗಿದೆ. ಈ ಮಾದರಿಯಲ್ಲಿ ಸೆಂಟರ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ 10.1-ಇಂಚಿನದ್ದಾಗಿದೆ ಮತ್ತು ಇನ್‌ಸ್ಟ್ರುಮೆಂಟ್ ಸ್ಕ್ರೀನ್ 8.8-ಇಂಚಿನ ಯುನಿಟ್ ಆಗಿದೆ.
ಪವರ್‌ಟ್ರೇನ್‌ಗೆ ಸಂಬಂಧಿಸಿದಂತೆ, ಬಾಜುನ್ ಯೆಪ್ ಪ್ಲಸ್ ಇಎಸ್‍ಯುವಿ ಏಕೈಕ 75 kW (100 bhp) ಮತ್ತು 180 Nm ಎಲೆಕ್ಟ್ರಿಕ್ ಮೋಟಾರ್ ಪಡೆಯುತ್ತದೆ. ಭವಿಷ್ಯದಲ್ಲಿ ಡ್ಯುಯಲ್-ಮೋಟರ್ AWD ರೂಪಾಂತರಗಳಲ್ಲಿ ಬರಬಹುದು. ಈ ಎಲೆಕ್ಟ್ರಿಕ್ ಎಸ್‍ಯುವಿಯ ಟಾಪ್ ಸ್ಪೀಡ್ ಗಂಟೆಗೆ 150 ಕಿಮೀ ಎಂದು ರೇಟ್ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯು ಎಕಾನಮಿ+, ಎಕಾನಮಿ, ಸ್ಟ್ಯಾಂಡರ್ಡ್ ಮತ್ತು ಸ್ಪೋರ್ಟ್ಸ್ ಎಂಬ 4 ಡ್ರೈವಿಂಗ್ ಮೋಡ್‌ಗಳಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








