ಬಹುನಿರೀಕ್ಷಿತ ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್‌ಒವರ್ ವಿಶೇಷತೆಗಳು
ಜನಪ್ರಿಯ ವಾಹನ ತಯಾರಕ ಕಂಪನಿಯಾದ ನಿಸ್ಸಾನ್ ತನ್ನ ಬಹುನಿರೀಕ್ಷಿತ 2025ರ ನಿಸ್ಸಾನ್ ಕಿಕ್ಸ್ (Nissan Kicks ) ಕಾಂಪ್ಯಾಕ್ಟ್ ಕ್ರಾಸ್ಒವರ್ ಮಾದರಿಯ ಚಿತ್ರಗಳು ಬಹಿರಂಗವಾಗಿದೆ. ಈ ಹೊಸ ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್ಒವರ್ ಮೊದಲ ಸಾರ್ವಜನಿಕ ಅನಾವರಣವನ್ನು ನ್ಯೂಯಾರ್ಕ್ ಮೋಟಾರ್ ಶೋಗೆ ನಿಗದಿಪಡಿಸಲಾಗಿದೆ.
ಹೊಸ ನಿಸ್ಸಾನ್ ಕಿಕ್ಸ್ ಇಂಡೋನೇಷಿಯನ್ ಮತ್ತು ಆಯ್ದ ಮಾರುಕಟ್ಟೆಗಳಲ್ಲಿ ಮಾರಾಟವಾದ ಮಿತ್ಸುಬಿಷಿ ಎಕ್ಸ್-ಫೋರ್ಸ್ ಎಸ್‍ಯುವಿಗೆ ಹೋಲುತ್ತದೆ. ಹೊಸ ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್ಒವರ್ S, SV ಮತ್ತು SR ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಅನಾವರಣಕ್ಕೆ ಸಜ್ಜಾದ ಹೊಸ ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್ಒವರ್ ಮಾದರಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವಿನ್ಯಾಸ: ಈ ಹೊಸ ನಿಸ್ಸಾನ್ ಕಿಕ್ಸ್ ವಿಶಾಲವಾದ ನಿಲುವು ಮತ್ತು ಪ್ರಮುಖ ಫೆಂಡರ್‌ಗಳನ್ನು ಹೊಂದಿದ್ದು, ಇದು ಬಾಕ್ಸರ್ ನೋಟವನ್ನು ನೀಡುತ್ತದೆ. ಈ ಹೊಸ ಕಾಂಪ್ಯಾಕ್ಟ್ ಕ್ರಾಸ್ಒವರ್ ಮಾದರಿಯು ವಿಶೇಷವಾಗಿ ಮುಂಭಾಗದ ಫಾಸಿಕದ ಅರ್ಧಭಾಗದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಈ ಮಾದರಿಯ ರೂಫ್ ಮತ್ತು ಡೋರುಗಳಂತಹ ವಿನ್ಯಾಸದ ಅಂಶಗಳು XForce ಎಸ್‍ಯುವಿಗೆ ಹೋಲುತ್ತವೆ. ಮುಂಭಾಗದಲ್ಲಿ, ಅಡ್ಡಲಾಗಿ ಇರಿಸಲಾಗಿರುವ LED ಹೆಡ್‌ಲ್ಯಾಂಪ್‌ಗಳು ಮತ್ತು ಬ್ಲ್ಯಾಕ್ ಫಿನಿಶ್ ಪ್ರದೇಶದೊಂದಿಗೆ ಸಿಗ್ನೇಚರ್ ಗ್ರಿಲ್ ಅನ್ನು ವೈಶಿಷ್ಟ್ಯಗೊಳಿಸಲಾಗಿದೆ.
ಈ ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್‌ಒವರ್‌ನಲ್ಲಿ ಮ್ಯಾಟ್ ಬ್ಲ್ಯಾಕ್ ಬಾಡಿ ಕ್ಲಾಡಿಂಗ್, 19-ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಟೈಲ್‌ಗೇಟ್‌ನ ಅಗಲದಲ್ಲಿ ಚಲಿಸುವ ಬ್ಲ್ಯಾಕ್ ಟ್ರಿಮ್‌ನೊಂದಿಗೆ ಸಂಯೋಜಿಸಲ್ಪಟ್ಟ ಅನನ್ಯವಾಗಿ ವಿನ್ಯಾಸಗೊಳಿಸಲಾದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿರುವ ವೀಲ್ ಆರ್ಚ್‌ಗಳನ್ನು ಸಹ ಒಳಗೊಂಡಿದೆ. ಇನ್ನು ಒಟ್ಟಾರೆಯಾಗಿ ಈ ಹೊಸ ಮಾದರಿಯ ವಿನ್ಯಾಸವು ಆಕರ್ಷಕವಾಗಿದೆ.

ಫೀಚರ್ಸ್: ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಒಳಗೆ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುವ ಡ್ಯುಯಲ್-ಸ್ಕ್ರೀನ್ ಸೆಟಪ್ ಅನ್ನು ಡಬಲ್-ಲೇಯರ್ಡ್ ಡ್ಯಾಶ್‌ಬೋರ್ಡ್‌ಗೆ ಸಂಯೋಜಿಸಲಾಗಿದೆ. ಇನ್ಫೋಟೈನ್‌ಮೆಂಟ್ ಯುನಿಟ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಂಪರ್ಕವನ್ನು ಬೆಂಬಲಿಸುತ್ತದೆ. ಹೆಚ್ಚುವರಿ ಫೀಚರ್ಸ್ ಗಳನ್ನು ಹೊಸದಾಗಿ ಸೇರಿಸಲಾಗಿದೆ.
ಇದರೊಂದಿಗೆ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಗಾಗಿ ಟಚ್-ಕೆಪ್ಯಾಸಿಟಿವ್ ಸ್ವಿಚ್‌ಗಳು, ರೆಡ್ ಅಸ್ಸೆಟ್, ನಿಸ್ಸಾನ್‌ನ ಝೀರೋ ಗ್ರಾವಿಟಿ ಸೀಟ್ ವಿನ್ಯಾಸ, ಚಾಲಿತ ಪನೋರಮಿಕ್ ಸನ್‌ರೂಫ್, ಹೆಡ್‌ರೆಸ್ಟ್-ಮೌಂಟೆಡ್ ಬೋಸ್ ಸ್ಪೀಕರ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿವೆ. ನಿಸ್ಸಾನ್ ಸೇಫ್ಟಿ ಶೀಲ್ಡ್ 360 ಎಡಿಎಎಸ್ ಸೂಟ್ ಇದರ ಅಸಾಧಾರಣ ಫೀಚರ್ಸ್ ಗಳಲ್ಲಿ ಒಂದಾಗಿದೆ.

ಇದರೊಂದಿಗೆ ಈ ಮಾದರಿಯು ಇಂಟಿಲಿಜೆಂಟ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ವಾರ್ನಿಂಗ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್, ಲೇನ್ ಡಿಪರ್ಚರ್ ವಾರ್ನಿಂಗ್, ಹಿಂಭಾಗದ ಅಡ್ಡ-ಟ್ರಾಫಿಕ್ ವಾರಿಂಗ್ ಮತ್ತು ಹೈ ಬೀಮ್ ಅಸಿಸ್ಟ್ ಅನ್ನು ನೀಡುತ್ತದೆ. ಟಾಪ್-ಎಂಡ್ SR ರೂಪಾಂತರವು ಸ್ಟೀರಿಂಗ್ ಅಸಿಸ್ಟ್ಮತ್ತು ಮಾನಿಟರ್ ಸೇರಿದಂತೆ ProPILOT ಅಸಿಸ್ಟ್‌ನೊಂದಿಗೆ ಸಜ್ಜುಗೊಂಡಿದೆ.
ಎಂಜಿನ್: ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್ಒವರ್ ಮಾದರಿಯು 2.0 ಲೀಟರ್ ಇನ್‌ಲೈನ್-ಫೋರ್ ಎಂಜಿನ್ ಅನ್ನು ಒಳಗೊಂಡಿರುತ್ತವೆ. ಈ ಎಂಜಿನ್ 141 bhp ಮತ್ತು 190 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿಯಾಗಿ, ಸ್ನೋ ಡ್ರೈವಿಂಗ್ ಮೋಡ್‌ನೊಂದಿಗೆ ಇಂಟೆಲಿಜೆಂಟ್ AWD (ಆಲ್-ವೀಲ್ ಡ್ರೈವ್) ಸಿಸ್ಟಮ್ ಆಯ್ಕೆಯಾಗಿರುತ್ತದೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಕೆಲವು ವರದಿಗಳ ಪ್ರಕಾರ, ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಇನ್ನು ಈ ಹೊಸ ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಯುಎಸ್ ಮತ್ತು ಕೆನಡಾ ದೇಶದಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications








