ಅನಾವರಣಕ್ಕೆ ಸಜ್ಜಾದ ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್ಒವರ್

ನಿಸ್ಸಾನ್ ತನ್ನ ಬಹುನಿರೀಕ್ಷಿತ 2025ರ ನಿಸ್ಸಾನ್ ಕಿಕ್ಸ್ (Nissan Kicks ) ಕಾಂಪ್ಯಾಕ್ಟ್ ಕ್ರಾಸ್ಒವರ್ ಮಾದರಿಯ ಚಿತ್ರಗಳು ಬಹಿರಂಗವಾಗಿದೆ. ಈ ಹೊಸ ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್ಒವರ್ ಮೊದಲ ಸಾರ್ವಜನಿಕ ಅನಾವರಣವನ್ನು ನ್ಯೂಯಾರ್ಕ್ ಮೋಟಾರ್ ಶೋಗೆ ನಿಗದಿಪಡಿಸಲಾಗಿದೆ. ಹೊಸ ನಿಸ್ಸಾನ್ ಕಿಕ್ಸ್ ಇಂಡೋನೇಷಿಯನ್ ಮತ್ತು ಆಯ್ದ ಮಾರುಕಟ್ಟೆಗಳಲ್ಲಿ ಮಾರಾಟವಾದ ಮಿತ್ಸುಬಿಷಿ ಎಕ್ಸ್-ಫೋರ್ಸ್ ಎಸ್‍ಯುವಿಗೆ ಹೋಲುತ್ತದೆ.

ಹೊಸ ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್ಒವರ್ S, SV ಮತ್ತು SR ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಕಾಂಪ್ಯಾಕ್ಟ್ ಕ್ರಾಸ್ಒವರ್ ಮಾದರಿಯು 2.0 ಲೀಟರ್ ಇನ್‌ಲೈನ್-ಫೋರ್ ಎಂಜಿನ್ ಅನ್ನು ಒಳಗೊಂಡಿರುತ್ತವೆ. ಈ ಎಂಜಿನ್ 141 bhp ಮತ್ತು 190 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿಯಾಗಿ, ಸ್ನೋ ಡ್ರೈವಿಂಗ್ ಮೋಡ್‌ನೊಂದಿಗೆ ಇಂಟೆಲಿಜೆಂಟ್ AWD (ಆಲ್-ವೀಲ್ ಡ್ರೈವ್) ಸಿಸ್ಟಮ್ ಆಯ್ಕೆಯಾಗಿರುತ್ತದೆ.

Nissan Kicks

ಹೊಸ ನಿಸ್ಸಾನ್ ಕಿಕ್ಸ್ ವಿಶಾಲವಾದ ನಿಲುವು ಮತ್ತು ಪ್ರಮುಖ ಫೆಂಡರ್‌ಗಳನ್ನು ಹೊಂದಿದ್ದು, ಇದು ಬಾಕ್ಸರ್ ನೋಟವನ್ನು ನೀಡುತ್ತದೆ. ಈ ಹೊಸ ಕಾಂಪ್ಯಾಕ್ಟ್ ಕ್ರಾಸ್ಒವರ್ ಮಾದರಿಯು ವಿಶೇಷವಾಗಿ ಮುಂಭಾಗದ ಫಾಸಿಕದ ಅರ್ಧಭಾಗದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಈ ಮಾದರಿಯ ರೂಫ್ ಮತ್ತು ಡೋರುಗಳಂತಹ ವಿನ್ಯಾಸದ ಅಂಶಗಳು XForce ಎಸ್‍ಯುವಿಗೆ ಹೋಲುತ್ತವೆ. ಮುಂಭಾಗದಲ್ಲಿ, ಅಡ್ಡಲಾಗಿ ಇರಿಸಲಾಗಿರುವ LED ಹೆಡ್‌ಲ್ಯಾಂಪ್‌ಗಳು ಮತ್ತು ಬ್ಲ್ಯಾಕ್ ಫಿನಿಶ್ ಪ್ರದೇಶದೊಂದಿಗೆ ಸಿಗ್ನೇಚರ್ ಗ್ರಿಲ್ ಅನ್ನು ವೈಶಿಷ್ಟ್ಯಗೊಳಿಸಲಾಗಿದೆ.

ಈ ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್‌ಒವರ್‌ನಲ್ಲಿ ಮ್ಯಾಟ್ ಬ್ಲ್ಯಾಕ್ ಬಾಡಿ ಕ್ಲಾಡಿಂಗ್, 19-ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಟೈಲ್‌ಗೇಟ್‌ನ ಅಗಲದಲ್ಲಿ ಚಲಿಸುವ ಬ್ಲ್ಯಾಕ್ ಟ್ರಿಮ್‌ನೊಂದಿಗೆ ಸಂಯೋಜಿಸಲ್ಪಟ್ಟ ಅನನ್ಯವಾಗಿ ವಿನ್ಯಾಸಗೊಳಿಸಲಾದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿರುವ ವೀಲ್ ಆರ್ಚ್‌ಗಳನ್ನು ಸಹ ಒಳಗೊಂಡಿದೆ. ಒಟ್ಟಾರೆಯಾಗಿ ಈ ಹೊಸ ಮಾದರಿಯ ವಿನ್ಯಾಸವು ಆಕರ್ಷಕವಾಗಿದೆ.

Nissan Kicks

ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಒಳಗೆ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುವ ಡ್ಯುಯಲ್-ಸ್ಕ್ರೀನ್ ಸೆಟಪ್ ಅನ್ನು ಡಬಲ್-ಲೇಯರ್ಡ್ ಡ್ಯಾಶ್‌ಬೋರ್ಡ್‌ಗೆ ಸಂಯೋಜಿಸಲಾಗಿದೆ. ಇನ್ಫೋಟೈನ್‌ಮೆಂಟ್ ಯುನಿಟ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಂಪರ್ಕವನ್ನು ಬೆಂಬಲಿಸುತ್ತದೆ. ಹೆಚ್ಚುವರಿ ವೈಶಿಷ್ಟ್ಯಗಳಲ್ಲಿ ಹೊಸದಾಗಿ ಸೇರಿಸಲಾಗಿದೆ.

ಇದರೊಂದಿಗೆ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಗಾಗಿ ಟಚ್-ಕೆಪ್ಯಾಸಿಟಿವ್ ಸ್ವಿಚ್‌ಗಳು, ರೆಡ್ ಅಸ್ಸೆಟ್, ನಿಸ್ಸಾನ್‌ನ ಝೀರೋ ಗ್ರಾವಿಟಿ ಸೀಟ್ ವಿನ್ಯಾಸ, ಚಾಲಿತ ಪನೋರಮಿಕ್ ಸನ್‌ರೂಫ್, ಹೆಡ್‌ರೆಸ್ಟ್-ಮೌಂಟೆಡ್ ಬೋಸ್ ಸ್ಪೀಕರ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿವೆ. ನಿಸ್ಸಾನ್ ಸೇಫ್ಟಿ ಶೀಲ್ಡ್ 360 ಎಡಿಎಎಸ್ ಸೂಟ್ ಇದರ ಅಸಾಧಾರಣ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.

Nissan Kicks

ಇದರೊಂದಿಗೆ ಇಂಟಿಲಿಜೆಂಟ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ವಾರ್ನಿಂಗ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್, ಲೇನ್ ಡಿಪರ್ಚರ್ ವಾರ್ನಿಂಗ್, ಹಿಂಭಾಗದ ಅಡ್ಡ-ಟ್ರಾಫಿಕ್ ವಾರಿಂಗ್ ಮತ್ತು ಹೈ ಬೀಮ್ ಅಸಿಸ್ಟ್ ಅನ್ನು ನೀಡುತ್ತದೆ. ಟಾಪ್-ಎಂಡ್ SR ರೂಪಾಂತರವು ಸ್ಟೀರಿಂಗ್ ಅಸಿಸ್ಟ್ಮತ್ತು ಮಾನಿಟರ್ ಸೇರಿದಂತೆ ProPILOT ಅಸಿಸ್ಟ್‌ನೊಂದಿಗೆ ಸಜ್ಜುಗೊಂಡಿದೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಕೆಲವು ವರದಿಗಳ ಪ್ರಕಾರ, ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಇನ್ನು ಈ ಹೊಸ ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಯುಎಸ್ ಮತ್ತು ಕೆನಡಾ ದೇಶದಲ್ಲಿ ಬಿಡುಗಡೆಯಾಗಲಿದೆ.

Nissan Kicks

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, March 23, 2024, 18:08 [IST]
English summary
New nissan kicks unveiling new york motor show 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+