ಆಕರ್ಷಕ ಬೆಲೆಗೆ ಬಿಡುಗಡೆಯಾದ 2024 ರೇಂಜ್ ರೋವರ್ ಇವೊಕ್ ವಿಶೇಷತೆಗಳು!
ಭಾರತದಲ್ಲಿ 2024ರ ಹೊಸ ರೇಂಜ್ ರೋವರ್ ಇವೊಕ್ ಅನ್ನು ಇತ್ತೀಚೆಗೆ ರೂ. 67.90 ಲಕ್ಷ (ಎಕ್ಸ್ ಶೋ ರೂಂ)ಕ್ಕೆ ಬಿಡುಗಡೆ ಮಾಡಲಾಗಿದೆ. 2024ರ ಹೊಸ ರೇಂಜ್ ರೋವರ್ ಇವೊಕ್‌ನಲ್ಲಿ ಇದೀಗ ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್‌ನಲ್ಲಿ ಹೊಸ ಗೇರ್ ಲಿವರ್ ಕೂಡ ನೀಡಲಾಗಿದೆ. ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ
ಈ ಐಷಾರಾಮಿ SUV ಫುಲ್ಲಿ - ಲೋಡ್ ಡೈನಾಮಿಕ್ SE ಟ್ರಿಮ್‌ನಲ್ಲಿ ಮಾತ್ರ ಬರುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಘಟಕವು 247hp ಪವರ್ ಮತ್ತು 365Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೊಂದು ಆಯ್ಕೆಯಲ್ಲಿ 2.0 - ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ 201hp ಪವರ್ ಮತ್ತು 430Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎರಡೂ ಎಂಜಿನ್‌ಗಳು 48V ಮೈಲ್ಡ್ - ಹೈಬ್ರಿಡ್ ವ್ಯವಸ್ಥೆಯನ್ನು ಬೆಲ್ಟ್ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್‌ನೊಂದಿಗೆ ಪಡೆಯುತ್ತವೆ. ಇದು ಬ್ರೇಕಿಂಗ್‌ನಿಂದ ಶಕ್ತಿಯನ್ನು ಚೇತರಿಸಿಕೊಂಡು ವೇಗವರ್ಧನೆಗೆ ಸಹಾಯ ಮಾಡುತ್ತದೆ. ಇದನ್ನು 9 - ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. JLR ನ ಟೆರೈನ್ ರೆಸ್ಪಾನ್ಸ್ ಸಿಸ್ಟಂನೊಂದಿಗೆ ಆಲ್ - ವೀಲ್ ಡ್ರೈವ್ ಪ್ರಮಾಣಿತವಾಗಿದೆ.
ಬಾಹ್ಯ ನವೀಕರಣಗಳು ತೀರಾ ಕಡಿಮೆಯಿದ್ದು - ದೊಡ್ಡ ರೇಂಜ್ ರೋವರ್‌ಗಳಂತೆಯೇ ವಿವರವಾಗಿ ಮರುವಿನ್ಯಾಸಗೊಳಿಸಲಾದ ಗ್ರಿಲ್, ಮರುವಿನ್ಯಾಸಗೊಳಿಸಲಾದ LED ರನ್ನಿಂಗ್ ಲ್ಯಾಂಪ್ ಸಿಗ್ನೇಚರ್‌ಗಳೊಂದಿಗೆ ಹೊಸ ಸೂಪರ್ - ಸ್ಲಿಮ್ LED ಹೆಡ್‌ಲ್ಯಾಂಪ್‌ಗಳು, ಹೊಸ ರೆಡ್ ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಅಲಾಯ್ ವೀಲ್‌ಗಳಿಗೆ ಹೊಸ ಟ್ವಿನ್ 10 ಸ್ಪೋಕ್ ವಿನ್ಯಾಸವಿದೆ. ಆಯ್ಕೆ ಮಾಡಲು ಕೊರಿಂಥಿಯನ್ ಬ್ರಾಂಜ್ ಮತ್ತು ಟ್ರಿಬೆಕಾ ಬ್ಲೂ ಎಂಬ ಎರಡು ಹೊಸ ಬಣ್ಣಗಳಿವೆ.

ಇಂಟೀರಿಯರ್‌ನಲ್ಲಿ ವಿಂಡ್ಸರ್ ಲೆದರ್ ಸೀಟುಗಳು, ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್, ಹೀಟೆಡ್ ಮತ್ತು ಕೂಲ್ಡ್ ಫ್ರಂಟ್ ಸೀಟ್‌ಗಳು, ಕಸ್ಟಮೈಸ್ ಕ್ಯಾಬಿನ್ ಲೈಟಿಂಗ್ ಮತ್ತು ವಿಸ್ತರಿತ ಆಂತರಿಕ ಸ್ಥಳವನ್ನು ಹೊಂದಿದೆ. ಐದು ಆಸನಗಳ ಎಸ್‌ಯುವಿಯು ಹೊಸ ಫ್ಲೋಟಿಂಗ್ 11.4 - ಇಂಚಿನ ಕರ್ವ್ಡ್ ಗ್ಲಾಸ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಇತ್ತೀಚಿನ ಪಿವಿ ಪ್ರೊ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ.
ಡ್ಯುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್, ಪನಾರಮಿಕ್ ಸನ್‌ರೂಫ್, 360 - ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ, ವೈರ್‌ಲೆಸ್ Apple CarPlay ಮತ್ತು Android Auto, OTA ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಮತ್ತು ಹೊಸ PM2.5 ಏರ್ ಪ್ಯೂರಿಫಿಕೇಶನ್ ಸಿಸ್ಟಮ್, ಸುಧಾರಿತ ಸುರಕ್ಷತೆಗಾಗಿ ಕ್ಲಿಯರ್‌ಸೈಟ್ ಗ್ರೌಂಡ್ ವ್ಯೂ ತಂತ್ರಜ್ಞಾನವನ್ನು ಸಹ ಅನ್ನು ಒಳಗೊಂಡಿದೆ.

ಅಲ್ಲದೇ 2024ರ ಹೊಸ ರೇಂಜ್ ರೋವರ್ ಇವೊಕ್‌ನಲ್ಲಿ ಇದೀಗ ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್‌ನಲ್ಲಿ ಹೊಸ ಗೇರ್ ಲಿವರ್ ಕೂಡ ಇದೆ. ಕ್ಲೈಮೆಟ್, ಸೀಟ್ ಮತ್ತು ಆಡಿಯೊ ಕಂಟ್ರೋಲ್‌ಗಳನ್ನು ಸೈಡ್‌ಬಾರ್‌ಗಳಲ್ಲಿ ನೀಡಲಾಗಿದೆ. ಎರಡೂ ಬದಿಗಳಲ್ಲಿ ಮತ್ತು ವರ್ಚುವಲ್ ಬಟನ್‌ಗಳಲ್ಲಿ Multi-functional sliding ಕಂಟ್ರೋಲ್‌ಗಳನ್ನು ಒಳಗೊಂಡಿರುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








