27 ಕಿ.ಮೀ ಮೈಲೇಜ್, ಕೈಗೆಟುವ ದರದಲ್ಲಿ ಬರಲಿರುವ ಟಾಟಾ ಟಿಯಾಗೊ CNG ಆಟೋಮ್ಯಾಟಿಕ್ ವಿಶೇಷತೆಗಳು

ಭಾರತೀಯ ಮಾರುಕಟ್ಟೆಯಲ್ಲಿ ಸಿಎನ್‌ಜಿ ಕಾರುಗಳಿಗೆ ಭರ್ಜರಿ ಬೇಡಿಕೆಯಿದೆ, ಪ್ರತಿಯೊಂದು ವಾಹನ ಉತ್ಪಾದನಾ ಕಂಪನಿಗಳು ಸಿಎನ್‌ಜಿ ಮಾದರಿಗಳಿಗೆ ಪ್ರಮುಖ್ಯತೆ ನೀಡುತ್ತಿದ್ದಾರೆ. ದೇಶದ ಅತಿ ದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿಗೆ ಸೆಡ್ಡು ಹೊಡೆಯಲು ಟಾಟಾ (Tata) ಸಜ್ಜಾಗುತ್ತಿದೆ. ಇತಿಚೆಗೆ ಟಾಟಾ ಸಿಎನ್‌ಜಿ ಕಾರುಗಳುಗೆ ಬೇಡಿಕೆ ಹೆಚ್ಚಾಗುತ್ತಿದೆ.

ಇತ್ತೀಚೆಗೆ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ #TiagoiCNG ಮತ್ತು #TigoriCNG ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಮುಂಬರುವ CNG ರೂಪಾಂತರಗಳ ಕುರಿತು ಟೀಸರ್ ಅನ್ನು ಬಿಡುಗಡೆ ಮಾಡಿತ್ತು ಟಾಟಾ ಟಿಯಾಗೊ ಮತ್ತು ಟಿಗೊರ್ ಸಿಎನ್‌ಜಿ ರೂಪಾಂತರಗಳು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಒಳಗೊಂಡಿರುತ್ತವೆ. ಇದು ಇದು ದೇಶದಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಮೊದಲ ಸಿಎನ್‌ಜಿ ಮಾದರಿಗಳಾಗಿ ಗುರುತಿಸುತ್ತದೆ. ಇದರಲ್ಲಿ ಟಾಟಾ ಟಿಯಾಗೊ CNG ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ.

Tata Tiago CNG AMT

ರೂಪಾಂತರಗಳು: ಟಾಟಾ ಟಿಯಾಗೊ CNG ಆಟೋಮ್ಯಾಟಿಕ್ (Tata Tiago CNG AMT) ಮಾದರಿಯು XTA, XZA+ ಮತ್ತು XZA NRG ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಟಾಟಾ ಟಿಯಾಗೊ CNG ಆಟೋಮ್ಯಾಟಿಕ್ ಮಾದರಿಯು ಸ್ಟ್ಯಾಂಡರ್ಡ್ ಟಿಯಾಗೊ ಮಾದರಿಯಂತೆಯೇ ರೂಪಾಂತರಗಳನ್ನು ಹೊಂದಿರುತ್ತದೆ. ಬೆಲೆಯಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತ CNG ಮಾದರಿಯು ತುಸು ದುಬಾರಿಯಾಗಿರುತ್ತದೆ.

ಎಂಜಿನ್: ಟಾಟಾ ಟಿಯಾಗೊ CNG ಮಾದರಿಯಲ್ಲಿ ಅದೇ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 85 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ ಎರಡು-ಪೆಡಲ್ ಸೆಟಪ್ ನೊಂದಿಗೆ 5-ಸ್ಫೀಡ್ ಆಟೋಮ್ಯಾಟಿಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿರುತ್ತದೆ.

Tata Tiago CNG AMT

ಫೀಚರ್ಸ್: ಈ ಟಿಯಾಗೋ CNG ಕಾರಿನಲ್ಲಿ ಫೀಚರ್ಸ್ ಬಗ್ಗೆ ಹೇಳಿವುದಾದರೆ, ಫೀಚರ್ಸ್ ಗಳು ಬದಲಾಗದೆ ಉಳಿದಿದೆ. ಇದರ ಟಾಪ್-ಸ್ಪೆಕ್ XZA ಪ್ಲಸ್ ರೂಪಾಂತರದಲ್ಲಿ ಫೋನ್ ಮಿರರಿಂಗ್, ಡ್ರೈವರ್ ಸೀಟ್‌ಗೆ ಎತ್ತರ ಹೊಂದಾಣಿಕೆ, ಪವರ್ ಮಿರರ್‌ಗಳು ಮತ್ತು ಕಿಟಕಿಗಳು, ಬಟನ್ ಸ್ಟಾರ್ಟ್ ಮತ್ತು ರೈನ್ ಸೆನ್ಸಿಂಗ್ ವೈಪರ್‌ಗಳನ್ನು ಒಳಗೊಂಡಿದೆ. ಟಾಟಾ ಟೊರ್ನಾಡೊ ಬ್ಲೂ ಎಂಬ ಹೊಸ ಬಣ್ಣವನ್ನು ಸೇರಿಸಿದೆ.

ಆ ಬಣ್ಣವನ್ನು ಈ ಹೊಸ ಟಾಟಾ ಟಿಯಾಗೊ CNG ಆಟೋಮ್ಯಾಟಿಕ್ ಮಾದರಿಯಲ್ಲಿ ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಈ ಟಿಯಾಗೊ CNG ಆಟೋಮ್ಯಾಟಿಕ್ ಕಾರಿನಲ್ಲಿ ಈಗ ಸಹಜವಾಗಿಯೇ ಟಾಟಾದ ಟ್ವಿನ್ ಸಿಲಿಂಡರ್ ತಂತ್ರಜ್ಞಾನದಿಂದ ಪ್ರಯೋಜನ ಪಡೆಯುತ್ತದೆ, ಆ ಮೂಲಕ ವಾಹನ ತಯಾರಕರು CNG ಟ್ಯಾಂಕ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ ಮತ್ತು ಹೆಚ್ಚುವರಿ ಬೂಟ್ ಸ್ಪೇಸ್ ಅನ್ನು ಇರಿಸಲು ಅದನ್ನು ಕೆಳಕ್ಕೆ ಇರಿಸಿದ್ದಾರೆ.

ನಿರೀಕ್ಷಿತ ಬೆಲೆ: ಹೊಸ ಟಾಟಾ ಟಿಯಾಗೊ CNG ಕಾರಿಗೆ ಸ್ಟ್ಯಾಂಡರ್ಡ್ ಪೆಟ್ರೋಲ್ ಮಾದರಿಗಳಂತೆಯೇ ಮ್ಯಾನುಯಲ್ CNG ರೂಪಾಂತರಗಳ ಮೇಲೆ ರೂ.80,000 ಬೆಲೆ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಟಾಟಾ ಟಿಯಾಗೊ CNG ಮಾದರಿಯು ಬಿಡುಗಡೆಯಾದ ಬಳಿಕ ಮಾರುತಿ CNG ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಇನ್ನು ಟಾಟಾ ಕಂಪನಿಯು ತನ್ಬ್ನ ನಾಲ್ಕನೇ ಎಲೆಕ್ಟ್ರಿಕ್ ಮಾದರಿಯಾಗಿ ಪಂಚ್ ಇವಿ ಮಾದರಿಯನ್ನು ಕಳೆದ ವಾರ ಭಾರತದಲ್ಲಿ ಬಿಡುಗಡೆ ಮಾಡಿತು. ಈ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೊರೂಂ ಪ್ರಕಾರ ರೂ.10.99 ಲಕ್ಷವಾಗಿದೆ. ಪಂಚ್ ಎಲೆಕ್ಟ್ರಿಕ್ ರೂಪದಲ್ಲೂ ಮಿಂಚಲು ಸಜ್ಜಾಗಿದೆ. ಇದೀಗ ಈ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ವಿತರಣೆಯು ದೇಶಾದ್ಯಂತ ಪ್ರಾರಂಭವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, January 29, 2024, 17:08 [IST]
English summary
New tata tiago cng amt top things details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+