ಭರ್ಜರಿ ಮೈಲೇಜ್, ಆಕರ್ಷಕ ಬೆಲೆಯಲ್ಲಿ ಬರಲಿವೆ ಟಾಟಾ ಸಿಎನ್‌ಜಿ ಆಟೋಮ್ಯಾಟಿಕ್ ಕಾರುಗಳು
ಭಾರತದಲ್ಲಿ ಸಿಎನ್‌ಜಿ ಕಾರುಗಳಿಗೆ ಭರ್ಜರಿ ಬೇಡಿಕೆಯಿದೆ, ಪ್ರತಿಯೊಂದು ವಾಹನ ಉತ್ಪಾದನಾ ಕಂಪನಿಗಳು ಸಿಎನ್‌ಜಿ ಮಾದರಿಗಳಿಗೆ ಪ್ರಮುಖ್ಯತೆ ನೀಡುತ್ತಿದ್ದಾರೆ. ದೇಶದ ಅತಿ ದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿಗೆ ಸೆಡ್ಡು ಹೊಡೆಯಲು ಟಾಟಾ (Tata) ಸಜ್ಜಾಗುತ್ತಿದೆ. ಇತಿಚೆಗೆ ಟಾಟಾ ಸಿಎನ್‌ಜಿ ಕಾರುಗಳುಗೆ ಬೇಡಿಕೆ ಹೆಚ್ಚಾಗುತ್ತಿದೆ.
ಇದೀಗ ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ #TiagoiCNG ಮತ್ತು #TigoriCNG ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಮುಂಬರುವ CNG ರೂಪಾಂತರಗಳ ಕುರಿತು ಸುಳಿವು ನೀಡುತ್ತಾ ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಟಾಟಾ ಟಿಯಾಗೊ ಮತ್ತು ಟಿಗೊರ್ ಸಿಎನ್‌ಜಿ ರೂಪಾಂತರಗಳು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಒಳಗೊಂಡಿರುತ್ತವೆ ಎಂದು ಹೇಳಲಾಗುತ್ತಿದೆ. ಇದು ಇದು ದೇಶದಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಮೊದಲ ಸಿಎನ್‌ಜಿ ಮಾದರಿಗಳಾಗಿ ಗುರುತಿಸುತ್ತದೆ.

ಆಟೋಮ್ಯಾಟಿಕ್ ರೂಪಾಂತರಗಳು ಟಾಪ್-ಎಂಡ್ XT ಮತ್ತು XZ+ ಟ್ರಿಮ್‌ಗಳನ್ನು ಆಧರಿಸಿವೆ ಎಂದು ನಿರೀಕ್ಷಿಸಲಾಗಿದೆ. ತಮ್ಮ ಮ್ಯಾನುವಲ್ ಕೌಂಟರ್‌ಪಾರ್ಟ್‌ಗಳಂತೆಯೇ, ಟಾಟಾ ಟಿಯಾಗೊ CNG AT ಮತ್ತು Tigor CNG AT ಅದೇ 1.2 ಲೀಟರ್ 3-ಸಿಲಿಂಡರ್ ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 85 bhp ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಟಾಟಾ ಟಿಯಾಗೋ ಹಾಗೂ ಟಾಟಾ ಟಿಗೋರ್ ಐಸಿಎನ್‌ಜಿ ಕಾರುಗಳನ್ನು ಟ್ವಿನ್-ಸಿಲಿಂಡರ್ ತಂತ್ರಜ್ಞಾನದೊಂದಿಗೆ ನವೀಕರಿಸಲಾಗಿತ್ತು. ಕಾರ್ಖಾನೆಯಲ್ಲೇ ಅಳವಡಿಸಲಾದ (ಫ್ಯಾಕ್ಟರಿ ಫಿಟೆಡ್) CNG ಟ್ಯಾಂಕ್‌ಗಳು ಪ್ರಾಯೋಗಿಕ ಸರಕು ಸಾಮರ್ಥ್ಯಕ್ಕೂ ಹೆಚ್ಚಿನ ಸ್ಥಳವನ್ನು ಒದಗಿಸುತ್ತವೆ. ಟಾಟಾದ ಅವಳಿ-ಸಿಲಿಂಡರ್ ತಂತ್ರಜ್ಞಾನವು 70 ಲೀ. ಸಾಮರ್ಥ್ಯದ ಎರಡು ಇಂಧನ ಟ್ಯಾಂಕ್‌ಗಳನ್ನು ಬೂಟ್ ಜಾಗದಲ್ಲಿ ಸ್ಪೇರ್ ವೀಲ್ ಬದಲಿಗೆ ಟ್ಯಾಂಕ್‌ಗಳನ್ನು ಇರಿಸಲಾಗಿದೆ.

ಹಾಗೆಯೇ ಸ್ಪೇರ್ ವೀಲ್ ಅನ್ನು ಎರಡೂ ವಾಹನಗಳಲ್ಲಿ ಕಾರಿನ ಹಿಂಭಾಗದ ಒಳಭಾಗಕ್ಕೆ ಸರಿಸಲಾಗಿದೆ. ಈ ಮೂಲಕ ಸೂಟ್‌ಕೇಸ್, ಬ್ಯಾಗ್‌ಗಳು ಮತ್ತು ಹೆಚ್ಚಿನ ಸರಕುಗಳನ್ನು ಇರಿಸಿಕೊಳ್ಳಲು ಬಳಸಬಹುದಾದ ಸ್ಥಳಾವಕಾಶವಿದೆ. ಟಾಟಾ ಟಿಯಾಗೊ ಮತ್ತು ಟಿಗೊರ್ ಸಿಎನ್‌ಜಿ ಮೋಟಾರ್ ಅನ್ನು ಡಿಟ್ಯೂನ್ ಮಾಡಲಾಗಿದೆ. ಇದನ್ನು 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.
ಟಾಟಾ ಟಿಯಾಗೊ ಮತ್ತು ಟಾಟಾ ಟಿಗೋರ್ CNG ಎರಡು ಮಾದರಿಗಳ ಪ್ರತಿಸ್ಪರ್ಧಿಗಳಾದ ಮಾರುತಿ ಸುಜುಕಿ ಸೆಲೆರಿಯೊ, ಮಾರುತಿ ಸುಜುಕಿ ಡಿಜೈರ್ ಮತ್ತು ಹುಂಡೈ ಔರಾಗೆ ಹೋಲಿಸಿದರೆ Tiago ಮತ್ತು Tigor CNG ಯೋಗ್ಯವಾದ ವೈಶಿಷ್ಟ್ಯಗಳನ್ನು ಹೊಂದಿವೆ. ಇತ್ತೀಚಿನ ನವೀಕರಣವು ಮಾದರಿಗಳನ್ನು ಹೆಚ್ಚು ಪ್ರಾಯೋಗಿಕವಾಗಿಸಿದೆ. ಟಾಟಾದ CNG ಶ್ರೇಣಿಯು ಖಾಸಗಿ ಖರೀದಿದಾರರಿಗೆ ಲಭ್ಯವಿದೆ.
ಟಾಟಾ ಟಿಯಾಗೊ ಮತ್ತು ಟಾಟಾ ಟಿಗೋರ್ ಮತ್ತು ಬಹು ನಿರೀಕ್ಷಿತ ಮತ್ತು ನಮ್ಮ ನಿಮ್ಮೆಲ್ಲರ ಪ್ರೀತಿಪಾತ್ರ ಸಬ್‌ಕಾಂಪ್ಯಾಕ್ಟ್ SUV ಟಾಟಾ ಪಂಚ್ ಕೂಡ ಈ ತಂತ್ರಜ್ಞಾನದೊಂದಿಗೆ ಉತ್ತಮ ಪ್ರತಿಕ್ರಿಯೆ ಪಡೆಯಲಿದೆ. ಈ ಪರಿಚಯಗಳು ಒಟ್ಟಾಗಿ ನಮ್ಮ ಸಿಎನ್‌ಜಿ ಶ್ರೇಣಿಯನ್ನು ಆಕರ್ಷಕವಾಗಿ, ಸಮಗ್ರವಾಗಿ ಮತ್ತು ಎಂದಿಗಿಂತಲೂ ಬಲವಾಗಿ ಮಾಡುತ್ತವೆ.
ಇನ್ನು ಟಾಟಾ ಮೋಟಾರ್ಸ್ ತನ್ಬ್ನ ನಾಲ್ಕನೇ ಎಲೆಕ್ಟ್ರಿಕ್ ಮಾದರಿಯಾಗಿ ಪಂಚ್ ಇವಿ ಮಾದರಿಯನ್ನು ಕಳೆದ ವಾರ ಭಾರತದಲ್ಲಿ ಬಿಡುಗಡೆ ಮಾಡಿತು. ಈ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೊರೂಂ ಪ್ರಕಾರ ರೂ.10.99 ಲಕ್ಷವಾಗಿದೆ. ಪಂಚ್ ಎಲೆಕ್ಟ್ರಿಕ್ ರೂಪದಲ್ಲೂ ಮಿಂಚಲು ಸಜ್ಜಾಗಿದೆ. ಇದೀಗ ಈ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ವಿತರಣೆಯು ದೇಶಾದ್ಯಂತ ಪ್ರಾರಂಭವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications