ರಗಡ್ ಲುಕ್‌ನಲ್ಲಿ ಹೊಸ ಫೋಕ್ಸ್‌ವ್ಯಾಗನ್ ಪೊಲೊ ಟ್ರ್ಯಾಕ್ ಬಿಡುಗಡೆ
ಫೋಕ್ಸ್‌ವ್ಯಾಗನ್ ಪೊಲೊ ಜಾಗತಿಕವಾಗಿ ಅತ್ಯಂತ ಸಮರ್ಥ ಮತ್ತು ಬಹುಮುಖ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಇದು ಇನ್ನು ಮುಂದೆ ಭಾರತದಲ್ಲಿ ಮಾರಾಟವಾಗದಿದ್ದರೂ, ಇತರ ಹಲವು ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಬ್ರೆಜಿಲಿಯನ್ ಮಾರುಕಟ್ಟೆಯಲ್ಲಿ ಮಾದರಿಯು ಹೆಚ್ಚು ಅಗ್ರೇಸಿವ್ ಆದ ಫೋಕ್ಸ್‌ವ್ಯಾಗನ್ ಪೊಲೊ ಟ್ರ್ಯಾಕ್ (Volkswagen Polo Track) ಕಾರು ಬಿಡುಗಡೆಗೊಂಡಿದೆ.
ಹೊಸ ಫೋಕ್ಸ್‌ವ್ಯಾಗನ್ ಪೊಲೊ ಟ್ರ್ಯಾಕ್ 'ಕ್ರಾಸ್ ಪೋಲೊ' ರೀತಿಯಲ್ಲಿ ಸಂಪೂರ್ಣವಾಗಿ ಹಾರ್ಡ್‌ಕೋರ್‌ಗೆ ಹೋಗದಿದ್ದರೂ, ಹೊಸ ಪೋಲೊ ಒರಟಾದ ರಸ್ತೆಗಳಲ್ಲಿ ಉತ್ತಮ ಪರ್ಫಾಮೆನ್ಸ್ ಅನ್ನು ನೀಡುವಲ್ಲಿ ಸಮರ್ಥವಾಗಿದೆ. ಪೊಲೊ ಟ್ರ್ಯಾಕ್ ಅನ್ನು ಬ್ರೆಜಿಲ್‌ನಲ್ಲಿನ ಕೃಷಿಭೂಮಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಫೋಕ್ಸ್‌ವ್ಯಾಗನ್ ಹೇಳಿಕೊಂಡಿದೆ. ಕಂಪನಿಯು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಇತರ ನವೀಕರಣಗಳೊಂದಿಗೆ ದೇಶದಲ್ಲಿ ತನ್ನ ಎಂಟ್ರಿ ಲೆವೆಲ್ ಒರಟಾದ ಕೊಡುಗೆಯಾಗಿ ಹೊಸ ಪೋಲೋ ಟ್ರ್ಯಾಕ್‌ನೊಂದಿಗೆ ರೈತರನ್ನು ಗುರಿಯಾಗಿಸಿಕೊಂಡಿದೆ.

ಬ್ರೆಜಿಲ್‌ನಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ಟ್ರ್ಯಾಕ್ ಕಾರಿನಲ್ಲಿ 1.0-ಲೀಟರ್ ಎಂಜಿನ್ ಅನ್ನು ನೀಡಿದ್ದು, ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಬ್ರೆಜಿಲ್‌ನಲ್ಲಿನ ಸ್ಟ್ಯಾಂಡರ್ಡ್ ಹ್ಯಾಚ್‌ಬ್ಯಾಕ್‌ನಲ್ಲಿ ಪೋಲೊ ರೋಬಸ್ಟ್ ಸ್ವಲ್ಪ ಎತ್ತರದ ಸಸ್ಪೆಕ್ಷನ್ ಅನ್ನು ಪಡೆಯುತ್ತದೆ. ಇದು ವಿನೈಲ್ ಸೀಟ್‌ಗಳನ್ನು ಸಹ ಪಡೆಯುತ್ತದೆ. ಇದು ಹೊಲಗಳಿಂದ ಮಾರುಕಟ್ಟೆಗೆ ಉತ್ಪನ್ನಗಳನ್ನು ಸಾಗಿಸಿದ ನಂತರ ತೊಳೆಯಲು ಸುಲಭವಾಗಿದೆ.
ಒರಟಾದ ಹ್ಯಾಚ್ ರಬ್ಬರ್ ಫ್ಲೋರ್ ಮ್ಯಾಟ್‌ಗಳೊಂದಿಗೆ ಬರುತ್ತದೆ ಮತ್ತು ಅದನ್ನು ಹೆಚ್ಚು ಎಳೆದುಕೊಂಡು ಹೋಗುವಂತೆ ಮಾಡಲು ಟ್ರೈಲರ್ ಹಿಚ್ ಕೂಡ ಇದೆ. ಅಂತಿಮವಾಗಿ, ಪೊಲೊ ರೊಬಸ್ಟ್ 15-ಇಂಚಿನ ಸ್ಟಿಲ್ ವ್ಹೀಲ್ ಗಳನ್ನು ಹೊಂದಿವೆ. ಇದರಿಂದ ಅದು ಹೆಚ್ಚು ಆತ್ಮವಿಶ್ವಾಸದಿಂದ ಕೆಟ್ಟ ರಸ್ತೆಗಳನ್ನು ತೆಗೆದುಕೊಂಡು ಹೋಗಬಹುದು.

ಈ ಫೋಕ್ಸ್‌ವ್ಯಾಗನ್ ಪೊಲೊ ಟ್ರ್ಯಾಕ್ ಕಾರಿನಲ್ಲಿ 1.0-ಲೀಟರ್ ನ್ಯಾಚುರಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿರುತ್ತದೆ. ಈ ಎಂಜಿನ್ 84 bhp ಮತ್ತು 101 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.
ಈ ಹೊಸ ಫೋಕ್ಸ್‌ವ್ಯಾಗನ್ ಪೊಲೊ ಟ್ರ್ಯಾಕ್ ಕಾರಿನಲ್ಲಿ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಎಬಿಎಸ್, ಇಎಸ್‌ಸಿ, ಡಿಫರೆನ್ಷಿಯಲ್ ಲಾಕ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಇತರ ವೈಶಿಷ್ಟ್ಯಗಳನ್ನು ನೀಡಿದೆ. ಇನ್ನು ಕ್ಯಾಬಿನ್ ವಿನೈಲ್ ಸೀಟುಗಳನ್ನು ಪಡೆಯುತ್ತದೆ. ಇದು ಲೆದರ್ ಅಥವಾ ಟ್ಟೆಯ ಮೇಲೆ ಸ್ವಚ್ಛಗೊಳಿಸಲು ಹೆಚ್ಚು ಸುಲಭವಾಗಿರುತ್ತದೆ.

ಹೊಸ ಫೋಕ್ಸ್‌ವ್ಯಾಗನ್ ಪೊಲೊ ರೋಬಸ್ಟ್ MQB ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿರುವ ಹ್ಯಾಚ್‌ಬ್ಯಾಕ್‌ನ ಇತ್ತೀಚಿನ ಜನರೇಷನ್ ಮಾದರಿಗೆ ಆಧರಿಸಿದೆ. ಈ ಆವೃತ್ತಿಯು ಭಾರತೀಯ ಮಾರುಕಟ್ಟೆಗೆ ಎಂದಿಗೂ ಬಂದಿಲ್ಲ. ಬದಲಿಗೆ ಫೋಕ್ಸ್‌ವ್ಯಾಗನ್ ಭಾರತೀಯ ಮಾರುಕಟ್ಟೆಗೆ ಹೊಸ ಸಬ್‌ಕಾಂಪ್ಯಾಕ್ಟ್ ಎಸ್‍ಯ್ವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಮಾದರಿಯು ಟೈಗನ್‌ಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ.
ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಪೊಲೊ ಕಾರನ್ನು 2010 ರಲ್ಲಿ ಬಿಡುಗಡೆ ಮಾಡಿತು. ಅಂದಿನಿಂದ, ಜರ್ಮನ್ ಕಾರ್ ಬ್ರಾಂಡ್‌ನಿಂದ ಈ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಕಂಪನಿಯ ಅತ್ಯಂತ ಕೈಗೆಟುಕುವ ಮತ್ತು ಅತಿ ಹೆಚ್ಚು ಮಾರಾಟವಾಗುವ ಕಾರ್ ಆಗಿ ಉಳಿದಿತ್ತು. ಆದರೆ 2022ರ ಫೋಕ್ಸ್‌ವ್ಯಾಗನ್ ಕಂಪನಿಯು ಈ ಪೊಲೊವನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಿತು. ಫೋಕ್ಸ್‌ವ್ಯಾಗನ್ ಕೆಲವು ತಿಂಗಳ ಹಿಂದೆ ಪೋಲೋ ಲೆಜೆಂಡ್ ಎಂದು ಬ್ರಾಂಡ್ ಮಾಡಿದ ಪೋಲೋದ ಅಂತಿಮ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








