ಫೋಕ್ಸ್‌ವ್ಯಾಗನ್ ಟೈಗನ್ ಜಿಟಿ ಲೈನ್, ಜಿಟಿ ಪ್ಲಸ್ ಸ್ಪೋರ್ಟ್ ರೂಪಾಂತರಗಳು ಅನಾವರಣ
ಜರ್ಮನ್ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ (Volkswagen) ತನ್ನ ವಾರ್ಷಿಕ ಬ್ರ್ಯಾಂಡ್ ಕಾನ್ಫರೆನ್ಸ್ 2024 ರಲ್ಲಿ ಟೈಗನ್ ಎಸ್‌ಯುವಿ - ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್ ಎಂಬ ಎರಡು ಹೊಸ ರೂಪಾಂತರಗಳನ್ನು ಅನಾವರಣಗೊಳಿಸಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಟೈಗನ್ ಜಿಟಿ ಸ್ಪೋರ್ಟ್ ಪ್ಲಸ್ ಖರೀದಿಸಲು ಬುಕ್ಕಿಂಗ್ ಪ್ರಾರಂಭಿಸಿದೆ.
ಭಾರತಕ್ಕಾಗಿ ಫೋಕ್ಸ್‌ವ್ಯಾಗನ್‌ನ ಕಾಂಪ್ಯಾಕ್ಟ್ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ತರುತ್ತಿವೆ. ಯಾಂತ್ರಿಕವಾಗಿ, GT ಲೈನ್ ಸಣ್ಣ 1.0-ಟರ್ಬೋಚಾರ್ಜ್ಡ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದರೆ, GT ಪ್ಲಸ್ ಸ್ಪೋರ್ಟ್ ರೂಪಾಂತರವು ಹೆಚ್ಚು ಪವರ್ ಫುಲ್ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ.

ಫೋಕ್ಸ್‌ವ್ಯಾಗನ್ ಟೈಗನ್ ಜಿಟಿ ಪ್ಲಸ್ ಸ್ಪೋರ್ಟ್ ರೂಪಾಂತರದ ಹೊರಭಾಗದಲ್ಲಿ ಗ್ರಿಲ್, ರೂಫ್ ರೈಲ್ಸ್, ಬಿ-ಪಿಲ್ಲರ್, ಸಿ-ಪಿಲ್ಲರ್ ಗಾರ್ನಿಶ್, ಒಆರ್‌ವಿಎಂಎಸ್, ಟೈಗುನ್ ಬ್ಯಾಡ್ಜಿಂಗ್ ಮತ್ತು 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಕ್ಯಾಸಾನೊ ಬ್ಲ್ಯಾಕ್ ಫಿನಿಶ್‌ನಲ್ಲಿ ಒಳಗೊಂಡಂತೆ ಬ್ಲ್ಯಾಕ್ ಬಣ್ಣದ ಟ್ರಿಮ್ ಅನ್ನು ಹೊಂದಿದೆ. ಈ ಎಸ್‌ಯುವಿಯು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಕಾರ್ಬನ್ ಸ್ಟೀಲ್ ಫಿನಿಶ್ಡ್ ರೂಫ್ ಮತ್ತು ಡಾರ್ಕ್ ಕ್ರೋಮ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿವೆ.
ಇದರೊಂದಿಗೆ ಗ್ರಿಲ್‌ನಲ್ಲಿ ರೆಡ್ ಬಣ್ಣದ ಜಿಟಿ ಬ್ಯಾಡ್ಜ್‌ಗಳು, ಫೆಂಡರ್‌ಗಳು ಮತ್ತು ಬೂಟ್ ಲಿಡ್ ಜೊತೆಗೆ ಡಿಫ್ಯೂಸರ್ ಅಂಶವನ್ನು ಹೊಂದಿದೆ. ಈ ಟೈಗನ್ ಜಿಟಿ ಸ್ಪೋರ್ಟ್ ಪ್ಲಸ್ ಒಳಗೆ ಕಪ್ಪು ಹೆಡ್‌ಲೈನರ್, ಚೆರ್ರಿ ರೆಡ್ ಕಾಂಟ್ರಾಸ್ಟ್ ಸ್ಟಿಚಿಂಗ್‌ನೊಂದಿಗೆ ಡ್ಯುಯಲ್-ಟೋನ್ ಲೆಥೆರೆಟ್ ಅಪ್ಹೋಲ್ಸ್ಟರಿ, ಮುಂಭಾಗದ ಸೀಟ್‌ಗಳ ಹಿಂಭಾಗದಲ್ಲಿ ಜಿಟಿ ಬ್ಯಾಡ್ಜ್‌ಗಳು, ಸ್ಪೋರ್ಟ್ಸ್ ಸ್ಟೀರಿಂಗ್ ವೀಲ್ ಮತ್ತು ಅಲ್ಯೂಮಿನಿಯಂ ಪೆಡಲ್‌ಗಳನ್ನು ಒಳಗೊಂಡಿದೆ.

ಫೋಕ್ಸ್‌ವ್ಯಾಗನ್ ಟೈಗನ್ ಜಿಟಿ ಪ್ಲಸ್ ಸ್ಪೋರ್ಟ್ ಎಸ್‍ಯುವಿಯಲ್ಲಿ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 148 bhp ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ DSG ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ ಮುಂಭಾಗದ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.
ಫೋಕ್ಸ್‌ವ್ಯಾಗನ್ GT ಲೈನ್ ರೂಪಾಂತರ ಮತ್ತು GT ಪ್ಲಸ್ ಸ್ಪೋರ್ಟ್ ರೂಪಾಂತರದಲ್ಲಿ ಬ್ಲಾಕ್ ಅಂಶಗಳನ್ನು ಹೆಚ್ಚಾಗಿ ನೀಡಲಾಗಿದೆ. ಇವುಗಳಲ್ಲಿ ರೂಡ್ ರೈಲ್‌ಗಳು, ಮ್ಯಾಟ್ ಬ್ಲ್ಯಾಕ್ B ಮತ್ತು C-ಪಿಲ್ಲರ್‌ಗಳು, 17-ಇಂಚಿನ ಕ್ಯಾಸಾನೊ ಬ್ಲ್ಯಾಕ್ ವ್ಹೀಲ್ ಗಳು, ಬ್ಲ್ಯಾಕ್ ಅಂಶಗಳನ್ನು ಒಳಗೊಂಡ LED ಹೆಡ್‌ಲ್ಯಾಂಪ್‌ಗಳು, ಬ್ಲ್ಯಾಕ್ಡ್-ಔಟ್ ಟೈಗನ್, TSI ಮತ್ತು GT ಲೈನ್ ಬ್ಯಾಡ್ಜ್‌ಗಳು ಸೇರಿವೆ.

ಟೈಗನ್ ಜಿಟಿ ಲೈನ್‌ನ ಒಳಭಾಗವು ಬ್ಲ್ಯಾಕ್ ಬಣ್ಣದ ರೂಫ್ ಲೈನರ್ ಜೊತೆಗೆ ಬ್ಲ್ಯಾಕ್ ಬಣ್ಣದ ಕೆಳ ಒಳಭಾಗ ಮತ್ತು ಕಪ್ಪು ಲೆಥೆರೆಟ್ ಸೀಟ್ ಕವರ್‌ಗಳನ್ನು ಹೊಗಳುವುದರೊಂದಿಗೆ ಬ್ಲ್ಯಾಕ್ಡ್ ಔಟ್ ಥೀಮ್ ಅನ್ನು ಒಳಗೊಂಡಿದೆ. ಸ್ಟೀರಿಂಗ್ ಚಕ್ರದಲ್ಲಿ ಕ್ರಿಸ್ಟಲ್ ಗ್ರೇ ಕಾಂಟ್ರಾಸ್ಟ್ ಸ್ಟಿಚಿಂಗ್, ಮುಂಭಾಗದ ಆರ್ಮ್‌ರೆಸ್ಟ್ ಮತ್ತು ಸೀಟ್ ಕವರ್‌ಗಳ ಜೊತೆಗೆ ರೆಡ್ ಆಂಬಿಯೆಂಟ್ ಲೈಟಿಂಗ್ ಅನ್ನು ಸಹ ಕಾಣಬಹುದು.
ಫೋಕ್ಸ್‌ವ್ಯಾಗನ್ ಟೈಗನ್ ಜಿಟಿ ಲೈನ್ ಎಸ್‍ಯುವಿಯಲ್ಲಿ 1.0-ಲೀಟರ್ ಟರ್ಬೋಚಾರ್ಜ್ಡ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 114 bhp ಪವರ್ ಮತ್ತು 178 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ ಟಾರ್ಕ್ ಪರಿವರ್ತಕ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








