ಒಂದೇ ವರ್ಷದಲ್ಲಿ 5 ಲಕ್ಷ ಮಾರುತಿ ಸುಜುಕಿ ಕಾರುಗಳನ್ನು ಮಾರಿದ ನೆಕ್ಸಾ: ಬೈಕ್‌ಗಳಂತೆ ಬಿಕರಿಯಾದ ಕಾರುಗಳು
ಮಾರುತಿ ಸುಜುಕಿ ಕಾರುಗಳೆಂದರೆ ಹಾಗೆಯೇ, ಭಾರತೀಯರಿಗೆ ವಿಶೇಷವಾದ ಪ್ರೀತಿ. ಭಾರತದಲ್ಲಿ ದಶಕಗಳ ಇತಿಹಾಸ ಹೊಂದಿರುವ ಈ ಕಂಪನಿ, ತಾನು ಪಾದಾರ್ಪಣೆ ಮಾಡಿದ ಅಂದಿನಿಂದ ಇಂದಿನವರೆಗೆ ಭಾರತೀಯರ ನಾಡಿಮಿಡಿತವನ್ನು ಅರಿತುಕೊಂಡಿದ್ದು, ಅದಕ್ಕೆ ಅನುಗುಣವಾಗಿ ಕಾರುಗಳನ್ನು ಮಾರುಕಟ್ಟೆಗೆ ತಂದು ಯಶಸ್ಸನ್ನು ಕಂಡಿದ್ದಾರೆ ಎಂಬುದು ಹಗಲಿನಷ್ಟೇ ಸತ್ಯವಾದ ವಿಷಯ.
ಇದೀಗ ಮಾರುತಿ ಸುಜುಕಿ ಕಾರುಗಳ ಪ್ರೀಮಿಯಂ ಡೀಲರ್ ಆದ ನೆಕ್ಸಾ ಕುರಿತಾಗಿ ನಿಮಗೆಲ್ಲರಿಗೂ ತಿಳಿದಿದೆ. ಮಾರುತಿಯ ಪ್ರೀಮಿಯಂ ಕಾರುಗಳನ್ನು ನೆಕ್ಸಾ ಔಟ್‌ಲೆಟ್ ಮೂಲಕ ಮಾರಾಟ ಮಾಡುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದೆ. ಇದೀಗ ಮಾಹಿತಿಗಳ ಪ್ರಕಾರ ನೆಕ್ಸಾ ಔಟ್‌ಲೆಟ್‌ನಲ್ಲಿ ಕಳೆದ ವರ್ಷ ಸುಮಾರು ಐದು ಲಕ್ಷಕ್ಕೂ ಅಧಿಕ ಕಾರುಗಳು ಮಾರಾಟವಾಗಿರುವ ಸುದ್ದಿ ಬಹಿರಂಗಗೊಂಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಮಾಹಿತಿಗಳ ಪ್ರಕಾರ ಕಳೆದ ವರ್ಷ ನೆಕ್ಸಾ ಸುಮಾರು ೫೦ ಪ್ರತಿಶತ ಹೆಚ್ಚಿನ ಅಭಿವೃದ್ದಿಯನ್ನು ಸಾಧಿಸಿದ್ದು, ಮಹೀಂದ್ರಾ ಕಂಪನಿಯ ಮಾರಾಟವನ್ನು ಸಹ ಇದು ಹಿಂದಿಕ್ಕಿದೆ ಎಂದರೆ ನಂಬಲೇ ಬೇಕಾದ ವಿಷಯವಾಗಿದೆ. ಇನ್ನು ಕಳೆದ ವರ್ಷ ಮಾರಾಟ ಮಾಡಲಾಗಿದೆ ಎನ್ನಲಾಗಿರುವ ಸುಮಾರು ೫ ಲಕ್ಷ ಕಾರುಗಳಲ್ಲಿ ಎಸ್‌ಯುವಿಗಳು ಮತ್ತು ಇತರ ಕಾರುಗಳು ಸಹ ಒಳಗೊಂಡಿದೆ.
ಇನ್ನು ಈ ಮೈಲುಗಲ್ಲಿನ ಕುರಿತಾಗಿ ಮಾತನಾಡಿದ ಮಾರುತಿ ಸುಜುಕಿಯ ಸೇಲ್ಸ್ ಮತ್ತು ಮಾರ್ಕೆಟಿಂಗ್‌ನ ಸೀನಿಯರ್ ಎಕ್ಸಿಕ್ಯೂಟಿವ್ ಆಫಿಸರ್ ಶಶಾಂಕ್ ಶ್ರೀವಾತ್ಸವ, ನಮ್ಮ ಎಸ್‌ಯುವಿ ಪೋರ್ಟ್‌ಫೋಲಿಯೋಗೆ ಇತ್ತೀಚೆಗೆ ಬಂದ ಮಾರುತಿ ಸುಜುಕಿ ಜಿಮ್ನಿ, ಫ್ರಾಂಕ್ಸ್ ಮತ್ತು ಗ್ರಾಂಡ್ ವಿಟಾರಾ, ಇನ್ವಿಕ್ಟೋ ಅಂತಹ ಕಾರುಗಳು ಆನೆ ಬಲವನ್ನು ತುಂಬಿದೆ. ಈ ಬಾರಿಯ ಮೊದಲ ಹಣಕಾಸು ವರ್ಷಾರ್ಧದಲ್ಲಿ ಮಾರುತಿ ಸುಜುಕಿ ನಂಬರ್ ವನ್ ಕಾರು ನಿರ್ಮಾಣ ಕಂಪನಿಯಾಗಿ ಹೊರಹೊಮ್ಮಿತ್ತು ಎಂದು ಹೇಳಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಮಾರುತಿ ನೆಕ್ಸಾ ಗಳಿಸಿದಂತಹ ಅತಿದೊಡ್ಡ ಮಾರಾಟ ಸಂಖ್ಯೆಯಾಗಿದ್ದು, ನಾವಿದನ್ನು ಇಲ್ಲಿಗೇ ನಿಲ್ಲಿಸದೇ, ಮುಂದಿನ ಬಾರಿ ಇದಕ್ಕಿಂತಲೂ ಹೆಚ್ಚಿನ ಮಾರಾಟವನ್ನು ಮಾಡಲಿದ್ದೇವೆ ಎಂದು ಅವರು ಇದೇ ಸಂಧರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ಮಾರುತಿ ಸುಜುಕಿ ಇತ್ತೀಚೆಗೆ ಮಾರುಕಟ್ಟೆಗೆ ತಂದ ಎಸ್‌ಯುವಿಗಳಲ್ಲಿ ಜಿಮ್ನಿ ಪ್ರಮುಖವಾದುದು ಎಂದರೆ ತಪ್ಪಾಗಲಾರದು.
ಜಿಮ್ನಿ 5 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpmನಲ್ಲಿ 104.8 Ps ಗರಿಷ್ಠ ಪವರ್ ಹಾಗೂ 4000 rpmನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದ್ದರೂ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರ 5-ಸ್ವೀಡ್ MT ರೂಪಾಂತರ, 16.94 km/l ಹಾಗೂ 4-ಸ್ವೀಡ್ AT ರೂಪಾಂತರ 16.39km/l ಮೈಲೇಜ್ ನೀಡುತ್ತದೆ. ಈ ಜಿಮ್ನಿ 5 ಡೋರ್ ಸುತ್ತಳತೆ ಬಗ್ಗೆ ಹೇಳುವುದಾದರೆ, ಇದು 3985 ಎಂಎಂ ಉದ್ದ, 1645 ಎಂಎಂ ಅಗಲ, 1720 ಎತ್ತರವಿದ್ದು, 2590 ಎಂಎಂ ಅಳತೆಯ ವೀಲ್ಸ್ ಬೇಸ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications