Nissan: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿಸ್ಸಾನ್ ಅರಿಯಾ ನಿಸ್ಮೋ ಬಿಡುಗಡೆ
ನಿಸ್ಸಾನ್ ಕಳೆದ ಕೆಲವು ತಿಂಗಳುಗಳಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಅರಿಯಾ ನಿಸ್ಮೋವನ್ನು ಕೊನೆಗೂ ಬಿಡುಗಡೆ ಮಾಡಿದೆ. ನಿಸ್ಸಾನ್ ಕಳೆದ ಜನವರಿಯಲ್ಲಿ ನಡೆದ ಟೋಕಿಯೊ ಆಟೋ ಸಲೂನ್ 2024 ರಲ್ಲಿ ಅರಿಯಾ ನಿಸ್ಮೋವನ್ನು ಅನಾವರಣಗೊಳಿಸಿತ್ತು. ಇದೀಗ ಜಪಾನ್‌ನಲ್ಲಿ ಬಿಡುಗಡೆ ಮಾಡಿದೆ.
ನಿಸ್ಸಾನ್ ಮೊದಲು ತನ್ನ ಆರಂಭಿಕ ಮಾರಾಟವನ್ನು ಜಪಾನ್‌ನಲ್ಲಿ ಮಾಡಲಿದೆ. ಬಳಿಕ ನಿಸ್ಮೋದ ಇವಿ ಆವೃತ್ತಿಯ ಮಾರಾಟವನ್ನು ಜೂನ್ ನಲ್ಲಿ ಪ್ರಾರಂಭಿಸಲು ಯೋಜಿಸಿಕೊಂಡಿದೆ. ಸಂಭಾವ್ಯ ಗ್ರಾಹಕರು B6 e-4ORCE ಮತ್ತು B9 e-4ORCE ಎಂಬ ಎರಡು ಅರಿಯಾ ನಿಸ್ಮೋ ಮಾದರಿಗಳ ನಡುವೆ ಆಯ್ಕೆ ಮಾಡಬಹುದು.

ಒಂದು 66 ಕಿಲೋವ್ಯಾಟ್ ಬ್ಯಾಟರಿ ಹೊಂದಿದ್ದು, 362 ಬಿಹೆಚ್‌ಪಿ ಪವರ್ ಮತ್ತು 560 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 91 ಕಿಲೋವ್ಯಾಟ್ ಬ್ಯಾಟರಿ ಹೊಂದಿರಲಿದ್ದು, ಅದು 429 ಬಿಹೆಚ್‌ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇವು ತನ್ನ ವಿಭಾಗದಲ್ಲಿ ಅತ್ಯಧಿಕ ಪವರ್ ಔಟ್‌ಪುಟ್ ಹೊಂದಿರುವ ಕಾರುಗಳಾಗಿವೆ ಎಂದು ಕಂಪನಿ ಹೇಳಿಕೊಂಡಿದೆ.
ಅರಿಯಾ ವಿಶೇಷತೆಗಳಿಗೆ ಬಂದರೆ ಇದರ ಬಂಪರ್‌ಗಳು, ಹಿಂಭಾಗದ ಸ್ಪಾಯ್ಲರ್‌ಗಳು ಮತ್ತು ಡೋರ್ ಮೋಲ್ಡಿಂಗ್‌ಗಳು ಡ್ರ್ಯಾಗ್ ಅನ್ನು ಕಡಿಮೆ ಮಾಡಿ ಹೆಚ್ಚಿನ ವೇಗದಲ್ಲಿ ಹೆಚ್ಚಿನ ಡೌನ್‌ಫೋರ್ಸ್ ಅನ್ನು ಉತ್ಪಾದಿಸುತ್ತದೆ. ಅಲ್ಲದೇ ಏರೋಡೈನಮಿಕ್ ವಿನ್ಯಾಸ ಕೂಡ ಕಾರಿಗೆ ಉತ್ತಮ ಪರ್ಫಾಮೆನ್ಸ್ ನೀಡುವಂತೆ ನಿರ್ಮಾಣ ಮಾಡಲಾಗಿದೆ ಎಂದು ನಿಸ್ಸಾನ್ ಹೇಳಿಕೊಂಡಿದೆ.

ಇಂಟೀರಿಯರ್ ವಿಷಯಕ್ಕೆ ಬಂದರೆ, ರೆಡ್ ಅಕ್ಸೆಂಟ್‌ಗಳೊಂದಿಗೆ ಬ್ಲಾಕ್-ಬೇಸ್ಡ್ ಒಳಭಾಗವು ಕ್ಯಾಬಿನ್‌ಗೆ ಸ್ಪೋರ್ಟಿ ನೋಟವನ್ನು ನೀಡುತ್ತದೆ, NISMO - ವಿಶೇಷ BOSE ಪ್ರೀಮಿಯಂ ಸೌಂಡ್ ಸಿಸ್ಟಮ್ ಹೊಂದಿದ್ದು, NISMO ಮೋಡ್ ಅನ್ನು ಸಕ್ರಿಯಗೊಳಿಸಿದಾಗ ಫಾರ್ಮುಲಾ E ರೇಸಿಂಗ್ ಸೌಂಡ್ ಅನ್ನು ಹೊರಹಾಕುತ್ತದೆ, ಇದು 'ಚಾಲನಾ ಉತ್ಸಾಹವನ್ನು ಹೆಚ್ಚಿಸುತ್ತದೆ' ಎಂದು ನಿಸ್ಸಾನ್ ಹೇಳಿದೆ.
Ariya B2 2WD ಗ್ರೇಡ್‌ಗಾಗಿ ಜಪಾನ್ ಮಾರುಕಟ್ಟೆಯಲ್ಲಿ ಆರ್ಡರ್‌ಗಳನ್ನು ಸ್ವೀಕರಿಸುವುದನ್ನು ಪುನರಾರಂಭಿಸುವುದಾಗಿ ನಿಸ್ಸಾನ್ ಘೋಷಿಸಿದೆ. ಇದು B6 e-4ORCE, B9 2WD, B9 e-4ORCE ಮತ್ತು B9 e-4ORCE ಪ್ರೀಮಿಯಂ ಗ್ರೇಡ್‌ಗಳನ್ನು ಒಳಗೊಂಡಂತೆ ಇತರ ಮಾದರಿಗಳನ್ನು ಪ್ರಾರಂಭಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ ನಿಸ್ಸಾನ್ ಮ್ಯಾಗ್ನೈಟ್ ದಾಖಲೆ: ನಿಸ್ಸಾನ್ ಇಂಡಿಯಾ (Nissan India), ಭಾರತದಲ್ಲಿ ಮಾರಾಟಗೊಳಿಸುವ ಏಕೈಕ ಎಸ್‌ಯುವಿಯಾಗಿ ಮ್ಯಾಗ್ನೈಟ್ (Magnite) ಜನಪ್ರಿಯತೆ ಗಳಿಸಿದೆ. ಸದ್ಯ, ಇದೇ ಕಾರಿನ ಸೇಲ್‌ನಲ್ಲಿ ಕಂಪನಿಯು ಐತಿಹಾಸಿಕ ದಾಖಲೆಯನ್ನು ನಿರ್ಮಾಣ ಮಾಡಿದೆ. ಈ ಮೂಲಕ ನಿಸ್ಸಾನ್ ಮ್ಯಾಗ್ನೈಟ್ ಗೇಮ್ ಚೆಂಜರ್ ಎಸ್‌ಯುವಿಯಾಗಿ ಹೊರಹೊಮ್ಮಿದೆ.
ದೇಶೀಯ ಮಾರುಕಟ್ಟೆಯಲ್ಲಿ 2020ರಲ್ಲಿ ರೂ. 4.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆಗೊಂಡ ಸಬ್ - ಫೋರ್ ಮೀಟರ್ ಎಸ್‌ಯುವಿ ನಿಸ್ಸಾನ್ ಮ್ಯಾಗ್ನೈಟ್, ಅಂದಿನಿಂದ ಇಂದಿನವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇಲ್ ಆಗಿದೆ. ಕಂಪನಿಯು ಈ ಕಾರಿನ 1 ಲಕ್ಷ ಯುನಿಟ್ ಮಾರಾಟಗೊಳಿಸಿ, ದೊಡ್ಡ ಮೈಲಿಗಲ್ಲನ್ನು ಸಾಧಿಸಿದೆ.
ಪ್ರಸ್ತುತ ಭಾರತದಲ್ಲಿ ಖರೀದಿಗೆ ದೊರೆಯುವ ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಎಸ್‌ಯುವಿ, ರೂ.6 ಲಕ್ಷದಿಂದ ರೂ.11.02 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಕ್ಸ್ಇ, ಎಕ್ಸ್ಎಲ್, ಎಕ್ಸ್‌ವಿ ಎಕ್ಸಿಕ್ಯೂಟಿವ್ ಸೇರಿದಂತೆ ವಿವಿಧ ರೂಪಾಂತರಗಳು ಮತ್ತು ಬ್ಲೇಡ್ ಸಿಲ್ವರ್, ಫ್ಲೇರ್ ಗಾರ್ನೆಟ್ ರೆಡ್, ಓನಿಕ್ಸ್ ಬ್ಲಾಕ್, ಸ್ಯಾಂಡ್‌ಸ್ಟೋನ್ ಬ್ರೌನ್, ಸ್ಟಾರ್ಮ್ ವೈಟ್ ಒಳಗೊಂಡಂತೆ 4-ಡುಯಲ್ ಟೋನ್, 5-ಮೊನೊ ಟೋನ್ ಬಣ್ಣಗಳೊಂದಿಗೆ ಸಿಗುತ್ತದೆ.
ಈ ಕಾರು 2 ಪೆಟ್ರೋಲ್ ಪವರ್‌ಟ್ರೇನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 72 ಪಿಎಸ್ ಗರಿಷ್ಠ ಪವರ್, 96 ಎನ್ಎಂ ಪೀಕ್ ಟಾರ್ಕ್ ಮತ್ತು 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 100 ಪಿಎಸ್ (ಶಕ್ತಿ), 160 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.


Click it and Unblock the Notifications








