ರೂ.6 ಲಕ್ಷ ಬೆಲೆಯ ಎಸ್‌ಯುವಿ... ರೂ. 87,000 ಇಳಿಕೆ... ತಕ್ಷಣ ಶೋರೂಂಗೆ ಹೋಗಿ!

ನೀವು SUV ಖರೀದಿಸಲು ಬಯಸುತ್ತಿದ್ದೀರಾ? ನಿಮ್ಮ ಬಜೆಟ್ ಕೇವಲ ರೂ. 6 ರಿಂದ 7 ಲಕ್ಷವಿದೆಯೇ? ಕೂಡಲೇ ನಿಮ್ಮ ಸ್ಥಳೀಯ ನಿಸ್ಸಾನ್ ಡೀಲರ್‌ಶಿಪ್‌ಗೆ ಭೇಟಿ ನೀಡಿ. ನಿಸ್ಸಾನ್ ಮೋಟಾರ್ ಇಂಡಿಯಾ ತನ್ನ ಮ್ಯಾಗ್ನೈಟ್ SUV ಮೇಲೆ ಜನವರಿ 2024 ರಲ್ಲಿ ಉತ್ತಮ ಕೊಡುಗೆಗಳನ್ನು ನೀಡುತ್ತಿದೆ.

ಹೌದು, ಈ ಕೊಡುಗೆಯು 31ನೇ ಜನವರಿ 2024 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಈ ತಿಂಗಳು ಈ ಎಸ್‌ಯುವಿ ಖರೀದಿಸಿದರೆ ರೂ.87,000 ಉಳಿಸಬಹುದು. ನೀವು ನಿಸ್ಸಾನ್ ಮ್ಯಾಗ್ನೈಟ್ SUV ಅನ್ನು ಖರೀದಿಸಿದಾಗ ಕಾರ್ಪೊರೇಟ್ ರಿಯಾಯಿತಿ, ನಗದು ರಿಯಾಯಿತಿ, ವಿನಿಮಯ ಬೋನಸ್, ಹಣಕಾಸು ಕೊಡುಗೆಗಳ ರೂಪದಲ್ಲಿ ರಿಯಾಯಿತಿ ಪ್ರಯೋಜನವನ್ನು ಪಡೆಯಬಹುದು.

nissan-magnite-discounts-in-january-2024-up-to-rs-87k-details

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸ್ಥಳೀಯ ನಿಸ್ಸಾನ್ ಡೀಲರ್‌ಗಳನ್ನು ಸಂಪರ್ಕಿಸಿದರೆ ಈ ಕುರಿತ ಸಂಪೂರ್ಣ ಮಾಹಿತಿ ಪಡೆಯಬಹುದು. ನೀವು ಈ ಕಾರನ್ನು ಸಾಲದ ಮೇಲೆ ಖರೀದಿಸಿದರೆ, ಕಂಪನಿಯು ನಿಮಗೆ ಈ ಕಾರನ್ನು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ನೀಡುತ್ತದೆ. ನಿಸ್ಸಾನ್ ಮ್ಯಾಗ್ನೈಟ್‌ನಲ್ಲಿ ನೀವು ಈ ಆಫರ್ ಅನ್ನು ಹೇಗೆ ಪಡೆಯಬಹುದು ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಮ್ಯಾಗ್ನೈಟ್ ಕಾಂಪ್ಯಾಕ್ಟ್ SUV ಯಲ್ಲಿ ಕಂಪನಿಯು ಒಟ್ಟು 87,000 ರೂ.ಗಳ ಪ್ರಯೋಜನಗಳನ್ನು ನೀಡುತ್ತಿದೆ. ಇದಲ್ಲದೆ, ಗೋಲ್ಡ್ ಸರ್ವೀಸ್ ಪ್ಯಾಕ್ ಅನ್ನು ಸಹ ನೀಡಲಾಗುತ್ತದೆ. ಈ ಎಸ್‌ಯುವಿಯಲ್ಲಿ ಸುಮಾರು ರೂ.28,000 ಎಕ್ಸ್‌ಚೇಂಜ್ ಬೋನಸ್ ಇದೆ. ಫೈನಾನ್ಸ್‌ನಲ್ಲಿ ಕಾರನ್ನು ಖರೀದಿಸುವಾಗ, ಗ್ರಾಹಕರು ಕನಿಷ್ಠ 6.99% ಬಡ್ಡಿದರವನ್ನು ಪಾವತಿಸಬೇಕಾಗುತ್ತದೆ.

nissan-magnite-discounts-in-january-2024-up-to-rs-87k-details

ಹೇಗಿದೆ ಮ್ಯಾಗ್ನೈಟ್: ನಿಸ್ಸಾನ್ ಮ್ಯಾಗ್ನೈಟ್ 5 ಆಸನಗಳ SUV ಆಗಿದೆ. 336 ಲೀಟರ್ ಬೂಟ್ ಸ್ಪೇಸ್ ಹೊಂದಿದ್ದು, ಈ SUV ಡ್ಯುಯಲ್ ಟೋನ್ ಬಣ್ಣದೊಂದಿಗೆ ಮೊನೊಟೋನ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ನಿಸ್ಸಾನ್ ಮ್ಯಾಗ್ನೈಟ್ ಬೆಲೆ ರೂ.6 ಲಕ್ಷದಿಂದ ಪ್ರಾರಂಭವಾಗಿ ರೂ.11.02 ಲಕ್ಷದವರೆಗೆ (ಎಕ್ಸ್ ಶೋ ರೂಂ) ವರೆಗೆ ಇದೆ.

ವೈಶಿಷ್ಟ್ಯಗಳು: ಈ SUV ಅದರ ವಿಭಾಗದಲ್ಲಿ ಅತ್ಯಂತ ಆಧುನಿಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಜೊತೆಗೆ 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ. ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ಜೆಬಿಎಲ್ ಸ್ಪೀಕರ್, ಆಂಬಿಯೆಂಟ್ ಲೈಟಿಂಗ್, ಫಾಗ್ ಲ್ಯಾಂಪ್‌ನಂತಹ ಸೌಲಭ್ಯಗಳು ಎಸ್‌ಯುವಿಯಲ್ಲಿ ಲಭ್ಯವಿದೆ.

nissan-magnite-discounts-in-january-2024-up-to-rs-87k-details

ಎಂಜಿನ್: 1.0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್, 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಸೇರಿದಂತೆ ಎರಡು ಪೆಟ್ರೋಲ್ ಎಂಜಿನ್‌ ಆಯ್ಕೆಯನ್ನು ಹೊಂದಿದೆ. ಟರ್ಬೊ ಪೆಟ್ರೋಲ್ ಎಂಜಿನ್ 100bhp ಪವರ್ ಮತ್ತು 160Nm ಟಾರ್ಕ್ ಉತ್ಪಾದಿಸುತ್ತದೆ. ಈ SUV ಮ್ಯಾನುವಲ್, CVT, AMT ಗೇರ್‌ಬಾಕ್ಸ್ ಸೇರಿದಂತೆ ಮೂರು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡುತ್ತದೆ. ಮ್ಯಾಗ್ನೈಟ್ ಪ್ರತಿ ಲೀಟರ್‌ಗೆ 20 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಸುರಕ್ಷತೆ: ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, TPMS, ಹಿಲ್-ಸ್ಟಾರ್ಟ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)ನೊಂದಿಗೆ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ನಿಸ್ಸಾನ್ ಮ್ಯಾಗ್ನೈಟ್ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ XUV300, ರೆನಾಲ್ಟ್ ಕಿಗರ್, ಸಿಟ್ರೊಯೆನ್ C3 ಜೊತೆಗೆ ಸ್ಪರ್ಧಿಸುತ್ತದೆ.

nissan-magnite-discounts-in-january-2024-up-to-rs-87k-details

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 29, 2024, 13:25 [IST]
English summary
Nissan magnite discounts in january 2024 up to rs 87k details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+