ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಚಿತ್ರಗಳು ಸೋರಿಕೆ: ಬಡವರ ಎಸ್‌ಯುವಿಯಲ್ಲಿ ಏನೇನಿರಲಿದೆ ಗೊತ್ತಾ?
ಬಜೆಟ್ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುವ ಭಾರತೀಯರ ಪ್ರಮುಖ ಕಾರುಗಳಲ್ಲಿ ನಿಸ್ಸಾನ್ ಮ್ಯಾಗ್ನೆಟ್ ಸಹ ಒಂದು. ಈಗಾಗಲೇ ಪ್ರಮುಖ ನಗರ ಮತ್ತು ಹೆದ್ದಾರಿಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಈ ಕಾರನ್ನು ನೋಡಲು ಸಾಧ್ಯವಾಗುತ್ತಿರುವುದೇ ಹೀಗನ್ನಲು ಪ್ರಮುಖ ಕಾರಣ. ಇದೀಗ ನಿಸ್ಸಾನ್ ಮ್ಯಾಗ್ನೈಟ್‌ನ ಫೇಸ್‌ಲಿಫ್ಟ್ ಟೆಸ್ಟ್ ರೈಡ್ ನಡೆಯುತ್ತಿದ್ದ ವೇಳೆ ಕ್ಯಾಮೆರಾಗೆ ಸೆರೆಯಾಗಿದೆ.
ಹೌದು, ನಿಸ್ಸಾನ್ ಗ್ರಾಹಕರಿಗೆ ಇದು ಸಾಕಷ್ಟು ಸಂತಸ ತರುವ ವಿಚಾರ. ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ೨೦೨೪ ಈಗಾಗಲೇ ಅಭಿವೃದ್ದಿಯ ಹಂತದಲ್ಲಿದ್ದು ಆದಷ್ಟು ಬೇಗ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ನಿಮಗೆಲ್ಲಾ ತಿಳಿದಿರುವಂತೆ ನಿಸ್ಸಾನ್ ಮ್ಯಾಗ್ನೈಟ್ ಎಂಬ ಹೆಸರು ಬಹುತೇಕ ಎಲ್ಲರಿಗೂ ತಿಳಿದಿದೆ. ಇದೀಗ ಇದರ ಫೇಸ್‌ಲಿಫ್ಟ್ ಮಾದರಿ ಚೆನ್ನೈನಲ್ಲಿ ಟೆಸ್ಟ್ ನಡೆಸುವ ವೇಳೆ ಕ್ಯಾಮೆರಾಗೆ ಸೆರೆಯಾಗಿದೆ.

ಹೊಸ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್‌ನಲ್ಲಿ ಇಂಟಿಗ್ರೇಟೆಡ್ ರೂಫ್ ರೇಲ್‌ಗಳನ್ನು ಕಾಣಬಹುದು. ಅದೆ ರೀತಿ ಮರು ವಿನ್ಯಾಸ ಮಾಡಿದಂತಹ ಟೇಲ್ ಲ್ಯಾಂಪ್, ಮತ್ತು ಫ್ರಂಟ್ ಬಂಪರ್‌ಗಳನ್ನು ಈ ಕಾರಲ್ಲಿ ನಿರೀಕ್ಷಿಸಲಾಗುತ್ತಿದೆ. ಶಾರ್ಕ್ ಫಿನ್ ಆಂಟೇನಾ ಜೊತೆ, ಹೊಸ ಅಲಾಯ್ ವ್ಹೀಲ್‌ಗಳು, ಬಲಿಷ್ಟವಾದ ಸಿ-ಪಿಲ್ಲರ್‌ಗಳನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಭಾರತದಲ್ಲಿ ಮಾರಾಟದಲ್ಲಿರುವ ನಿಸ್ಸಾನ್ ಮ್ಯಾಗ್ನೈಟ್ (Nissan Magnite Facelift) ಕುರಿತಾಗಿ ನೊಡುವುದಾದರೆ, ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ರೂಪಾಂತರದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆಶ್ಚರ್ಯ ಸಂಗತಿಯೊಂದು ಇಲ್ಲಿದೆ. ಇದು, 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಜೊತೆಯಲ್ಲಿ ಎಎಂಟಿ ಗೇರ್‌ಬಾಕ್ಸ್ ಹೊಂದಿರುವ ಏಕೈಕ ಆವೃತ್ತಿಯಾಗಿದೆ. ಟರ್ಬೋಚಾರ್ಜ್ಡ್ ಎಂಜಿನ್ ನಿಸ್ಸಾನ್ ಮ್ಯಾಗ್ನೈಟ್ ಆವೃತ್ತಿಯು ಇನ್ನೂ ಸಿವಿಟಿ (CVT) ಗೇರ್‌ಬಾಕ್ಸ್ ಆಯ್ಕೆಯನ್ನು ಹಾಗೆಯೇ ಉಳಿಸಿಕೊಂಡಿದೆ.

ಹೊಸ ಗೇರ್‌ಬಾಕ್ಸ್ ಹೊಂದಿರುವ ಈ ಕಾರಿನ 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್, 71 bhp ಗರಿಷ್ಠ ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಫ್ರಂಟ್ ವೀಲ್ ಗಳಿಗೆ ಪವರ್ ವರ್ಗಾಯಿಸುತ್ತದೆ. ಈ ಮೂಲಕ ಇದರ ಎಂಜಿನ್ ಹೆಚ್ಚು ಶಕ್ತಿಯುತವಾಗಿದೆ ಎಂದು ಹೇಳಬಹುದು.
ಹಿಂದಿನ ಮಾದರಿಯಂತೆಯೇ ಈ ಮ್ಯಾಗ್ನೈಟ್ ರೂಪಾಂತರದಲ್ಲಿಯೂ ಸಸ್ಪೆನ್ಷನ್ ಸೆಟಪ್ ಉತ್ತಮವಾಗಿದೆ. ಕಾರು ಹೆಚ್ಚಿನ ವೇಗದಲ್ಲಿ ಇದ್ದಾಗ, ಉಬ್ಬು - ತಗ್ಗು, ಹಳ್ಳ - ದಿಣ್ಣೆಯಿಂದ ಕೂಡಿದ ರಸ್ತೆಯಲ್ಲಿ ಸುಲಭವಾಗಿ ಚಲಾಯಿಸುತ್ತದೆ. ತಿರುವುಗಳಲ್ಲಿಯೂ ಉತ್ತಮವಾಗಿ ಡ್ರೈವ್ ಮಾಡಬಹುದು. ಬಾಡಿ ರೋಲ್ ಸಮಸ್ಯೆಯೂ ಅಷ್ಟಾಗಿ ಕಾಡುವುದಿಲ್ಲ. ಬ್ರೇಕ್ ಕೂಡ ಅತ್ಯುತ್ತಮವಾಗಿವೆ. ಇವೆಲ್ಲ ಕಾರಣಗಳಿಂದ ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ಉತ್ತಮವಾಗಿದೆ.

ಇಝಡ್-ಶಿಫ್ಟ್ ರೂಪಾಂತರ, ಇತರೆ ನಿಸ್ಸಾನ್ ಮ್ಯಾಗ್ನೈಟ್ ರೂಪಾಂತರಗಳಿಗೆ ಹೋಲಿಕೆಯಾಗುವ ವಿನ್ಯಾಸವನ್ನು ಹೊಂದಿದೆ. ಪ್ರಮುಖವಾಗಿ ಆಕರ್ಷಕ ಎಲ್ಇಡಿ ಹೆಡ್‌ಲೈಟ್, ಎಲ್ - ಆಕಾರದ ಡಿಆರ್‌ಎಲ್, ಅತ್ಯಾಧುನಿಕ ಗ್ರಿಲ್, ಎಲ್ಇಡಿ ಫಾಗ್ ಲೈಟ್, ನೂತನ ಅಲಾಯ್ ವೀಲ್ಸ್ ಹೊಂದಿದೆ. ಈ ಮೂಲಕ ಈಗಿನ ಯುವ ಗಾಹಕರನ್ನು ಸೆಳೆಯುವ ಡಿಸೈನ್ ಅನ್ನು ಈ ಕಾರು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








