ಮಿಡಲ್ ಕ್ಲಾಸ್‌ಗಾಗಿ ಲಕ್ಷುರಿ ಫೀಚರ್ಸ್‌ನ ಹೊಸ ಅದ್ಭುತ ಕಾರು: ಬೆಲೆ ಇಷ್ಟೇನಾ?

ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ನಿಸ್ಸಾನ್ (Nissan) ದೇಶೀಯ ಮಾರುಕಟ್ಟೆಯಲ್ಲಿ 2020ರಲ್ಲಿ ಮ್ಯಾಗ್ನೈಟ್ ಕಾರನ್ನು ಬಿಡುಗಡೆ ಮಾಡಿತ್ತು. ಇದು ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ಹೊಸ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ (Nissan Magnite Facelift) ಕಾಂಪ್ಯಾಕ್ಟ್ ಎಸ್‍ಯುವಿಯು ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಹೊಸ ನವೀಕರಣಗಳೊಂದಿಗೆ ಕಾಂಪ್ಯಾಕ್ಟ್ ಎಸ್‍ಯುವಿ ಕಾಂಪ್ಯಾಕ್ಟ್ ಎಸ್‍ಯುವಿಯು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸಜ್ಜಾಗಿದೆ. ಈ ಹೊಸ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಬಗ್ಗೆ ಮಾಹಿತಿ ಇಲ್ಲಿದೆ.

ಹೊಚ್ಚ ಹೊಸ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಎಸ್‌ಯುವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ಈ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.99 ಲಕ್ಷದಿಂದ ರೂ.11.50 ಲಕ್ಷವಾಗಿದೆ. ಈ ನಿಸ್ಸಾನ್ ಮ್ಯಾಗ್ನೈಟ್ ಎಸ್‍ಯುವಿಯು ವಿಸಿಯಾ, ವಿಸಿಯಾ ಪ್ಲಸ್, ಅಸೆಂಟಾ, ಎನ್-ಕನೆಕ್ಟಾ, ಟೆಕ್ನಾ ಮತ್ತು ಟೆಕ್ನಾ ಪ್ಲಸ್ ಎಂಬ 6 ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

Nissan Magnite Facelift

ವಿಸಿಯಾ: ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಮಾದರಿಯ ಸಿಯಾದ ಮೂಲ ಮಾದರಿಯು 5.99 ಲಕ್ಷ ರೂ.ಗಳ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು 1.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ ಮತ್ತು 5-ಸ್ಪೀಡ್ ಮ್ಯಾನುವಲ್ ಮತ್ತು AMT ಆಯ್ಕೆಯೊಂದಿಗೆ ಲಭ್ಯವಿದೆ. ಈ ಮಾದರಿಯಲ್ಲಿ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು, ಕ್ರೋಮ್-ಟ್ರಿಮ್ ಮಾಡಿದ ಡೋರ್ ಹ್ಯಾಂಡಲ್‌ಗಳು, ರೂಫ್ ರೈಲ್‌ಗಳು, ಇಂಟಿಗ್ರೇಟೆಡ್ ರಿಯರ್ ಸ್ಪಾಯ್ಲರ್ ಮತ್ತು 16-ಇಂಚಿನ ಸ್ಟೀಲ್ ವ್ಹೀಲ್ ಗಳನ್ನು ಹೊಂದಿವೆ.

ಈ ಮಾದರಿಯ ಒಳಭಾಗದಲ್ಲಿ ಸಂಪೂರ್ಣವಾಗಿ ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ಹಿಂಭಾಗದ ಆರ್ಮ್‌ರೆಸ್ಟ್, 60:40 ಸ್ಪ್ಲಿಟ್ ಹಿಂಬದಿ ಸೀಟ್, ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ 3.5-ಇಂಚಿನ LCD ಡಿಸ್ ಪ್ಲೇ, ಹೊಂದಾಣಿಕೆ ಮಾಡಬಹುದಾದ ಮುಂಭಾಗ ಮತ್ತು ಹಿಂಭಾಗದ ಹೆಡ್‌ರೆಸ್ಟ್‌ಗಳು, ಟಿಲ್ಟ್ ಹೊಂದಾಣಿಕೆ ಸ್ಟೀರಿಂಗ್ ವೀಲ್, PM 2.5 ಕ್ಯಾಬಿನ್ ಏರ್ ಫಿಲ್ಟರ್, 12V ಮುಂಭಾಗದ ಪವರ್ ಸಾಕೆಟ್, ಪವರ್ ವಿಂಡೋಗಳು ಮತ್ತು AMT ಗಾಗಿ ಫುಟ್‌ರೆಸ್ಟ್ ಆವೃತ್ತಿಯನ್ನು ಹೊಂದಿದೆ.

Nissan Magnite Facelift

ವಿಸಿಯಾ ಪ್ಲಸ್: ಮ್ಯಾಗ್ನೆಟ್ ವಿಸಿಯಾ ಪ್ಲಸ್ ಕಾರಿನಲ್ಲಿ 1.0 ಲೀಟರ್ NA ಪೆಟ್ರೋಲ್ ಎಂಜಿನ್ ಮ್ಯಾನುವಲ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. ವೈಶಿಷ್ಟ್ಯಗಳ ಜೊತೆಗೆ, ಇದು ಶಾರ್ಕ್‌ಫಿನ್ ಆಂಟೆನಾ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್‌ಕಾರ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಇನ್-ಬಿಲ್ಟ್ ವೈ-ಫೈ ಟೆಥರಿಂಗ್, 4-ಸ್ಪೀಕರ್ ಆಡಿಯೊ ಸಿಸ್ಟಮ್, ರಿಯರ್ ವೈಪರ್ ಮತ್ತು ವಾಷರ್, ಡಿಫಾಗರ್ ಮತ್ತು ರಿವರ್ಸ್ ಕ್ಯಾಮೆರಾವನ್ನು ಹೊಂದಿದೆ.

ಅಸೆಂಟಾ: ನಿಸ್ಸಾನ್ ಮ್ಯಾಗ್ನೈಟ್ ಅಸೆಂಟ್ ಬೆಲೆಯು 7.14 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಹೆಚ್ಚುವರಿಯಾಗಿ ಇದು ಸ್ಕಿಡ್ ಪ್ಲೇಟ್‌ಗಳು, ಡ್ಯುಯಲ್-ಟೋನ್ ವೀಲ್ ಕವರ್‌ಗಳು, ORVM ಗಳಲ್ಲಿ LED ಟರ್ನ್ ಇಂಡಿಕೇಟರ್‌ಗಳು ಮತ್ತು ಎಲೆಕ್ಟ್ರಿಕಲಿ ಫೋಲ್ಡಬಲ್ ಹೊಂದಾಣಿಕೆ ORVM ಗಳನ್ನು ಪಡೆಯುತ್ತದೆ. ಅಸೆಂಟಾವು ಪುಶ್ ಸ್ಟಾರ್ಟ್-ಸ್ಟಾಪ್ ಬಟನ್, ಸ್ಮಾರ್ಟ್ ಕೀ ಮೂಲಕ ರಿಮೋಟ್ ಎಂಜಿನ್ ಸ್ಟಾರ್ಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಆಂಟಿ-ಥೆಫ್ಟ್ ಅಲಾರ್ಮ್‌ಗಳನ್ನು ಸಹ ಹೊಂದಿದೆ.

Nissan Magnite Facelift

ಎನ್-ಕನೆಕ್ಟಾ: ನಿಸ್ಸಾನ್ ಮ್ಯಾಗ್ನೈಟ್ ಎನ್-ಕನೆಕ್ಟಾ ರೂ 7.86 ಲಕ್ಷದಿಂದ ಲಭ್ಯವಿದೆ. ಈ ಕಾರಿನಲ್ಲಿ 16-ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ ಗಳು, ಎಲ್-ಆಕಾರದ ಎಲ್ಇಡಿ ಡಿಆರ್ಎಲ್ಗಳು, ಸೈಡ್ ಬಾಡಿ ಕ್ಲಾಡಿಂಗ್ ಇತ್ಯಾದಿಗಳನ್ನು ಪಡೆಯುವುದರ ಹೊರತಾಗಿ ಲೇವರ್ ರೂಪಾಂತರಗಳ ಎಲ್ಲಾ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಇದರೊಂದಿಗೆ 7-ಇಂಚಿನ ಡಿಸ್ ಪ್ಲೇ, 6-ಸ್ಪೀಕರ್ ಆರ್ಕೇಮ್ಸ್ 3D ಸೌಂಡ್‌ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, AppleCarPlay ಮತ್ತು 8-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ.

ಟೆಕ್ನಾ: ಮ್ಯಾಗ್ನೈಟ್ ಎಸ್‍ಯುವಿಯ ಈ ವೇರಿಯಂಟ್ ಬೆಲೆಯು 8.75 ಲಕ್ಷ ರೂ. ಆಗಿದೆ. ಈ ಮಾದರಿಯಲ್ಲಿ ಎಲ್‌ಇಡಿ ಟೈಲ್‌ಲೈಟ್‌ಗಳು, ದ್ವಿ-ಪ್ರೊಜೆಕ್ಟರ್ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳು ಮತ್ತು ಎಲ್‌ಇಡಿ ಫಾಗ್ ಲ್ಯಾಂಪ್‌ಗಳನ್ನು ಬಾಹ್ಯ ಮುಖ್ಯಾಂಶಗಳು ಒಳಗೊಂಡಿವೆ. ಒಳಭಾಗದಲ್ಲಿ ಕೂಲ್ಡ್ ಗ್ಲೋವ್ ಬಾಕ್ಸ್, 360-ಡಿಗ್ರಿ ಕ್ಯಾಮೆರಾ, ಕ್ರೂಸ್ ಕಂಟ್ರೋಲ್, ಸೀಟ್‌ಗಳ ಮೇಲೆ ಲೆಥೆರೆಟ್ ಅಸ್ಸೆಂಟ್, ಲೆಥೆರೆಟ್ ಹ್ಯಾಂಡ್‌ಬ್ರೇಕ್ ಮತ್ತು ಎಲ್ಇಡಿ ಕ್ಯಾಬಿನ್ ಲ್ಯಾಂಪ್‌ಗಳನ್ನು ಹೊಂದಿವೆ.

ಟೆಕ್ನಾ ಪ್ಲಸ್: ಮ್ಯಾಗ್ನೈಟ್ ಟಾಪ್ ಎಂಡ್ ಟೆಕ್ನಾ ಪ್ಲಸ್ ಎಕ್ಸ್ ಶೋ ರೂಂ ಬೆಲೆ ರೂ 9.10 ಲಕ್ಷದಿಂದ ಪ್ರಾರಂಭವಾಗುತ್ತದೆ. ನಿಸ್ಸಾನ್ ಇದಕ್ಕೆ ಡ್ಯುಯಲ್-ಟೋನ್ ಬ್ರೌನ್ ಮತ್ತು ಆರೆಂಜ್ ಇಂಟೀರಿಯರ್ ಥೀಮ್ ಅನ್ನು ನೀಡಿದೆ. ಈ ರೂಪಾಂತರವು ಹೆಚ್ಚುವರಿಯಾಗಿ ಸ್ಪೋರ್ಟ್ಸ್ ಲೆಥೆರೆಟ್ ಸೀಟ್‌ಗಳು, ಲೆಥೆರೆಟ್ ಫ್ರಂಟ್ ಆರ್ಮ್‌ರೆಸ್ಟ್, ಸ್ಟೋರೇಜ್‌ನೊಂದಿಗೆ ಮುಂಭಾಗದ ಆರ್ಮ್‌ರೆಸ್ಟ್ ಮತ್ತು ಮೆಮೊರಿ ಫಂಕ್ಷನ್ ನೊಂದಿಗೆ ಡ್ಯುಯಲ್-ಬಣ್ಣದ ಆಂಬಿಯೆಂಟ್ ಲೈಟಿಂಗ್‌ನಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

More from DriveSpark

Article Published On: Friday, October 11, 2024, 11:32 [IST]
English summary
Nissan magnite facelift variant wise features details
Read more on nissan india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+