ನಿಸ್ಸಾನ್‌ ಭಾರತದಲ್ಲಿ ಮಾರುತ್ತಿರುವ ಒಂದೇ ಒಂದು ಕಾರಿಗೆ ಸದ್ಯದಲ್ಲೇ ಬಿಗ್‌ ಅಪ್‌ಡೇಟ್! ಏನು, ಯಾವಾಗ?

ನಿಸ್ಸಾನ್‌ ಕಂಪನಿಯ ಮ್ಯಾಗ್ನೈಟ್‌ ಕಾರು ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮಧ್ಯಮ ವರ್ಗದವರ ಕಾರು ಎಂದರೆ ತಪ್ಪಾಗಲಾರದು. ಇದಕ್ಕೆ ಈ ಕಾರಿನ ಬೆಲೆಗೆ, ಕಾರು ನಿಡುವ ಕಂಫರ್ಟ್‌ ಮತ್ತು ಇದರ ಫೀಚರ್‌ಗಳು ಕಾರಣ ಎನ್ನಬಹುದು. ಇದೀಗ ನಿಸ್ಸಾನ್‌ ಈ ಕಾರಿಗೆ ಬೃಹತ್‌ ಅಪ್‌ಡೇಟ್‌ ನೀಡುವತ್ತ ಮುಖ ಮಾಡಿದೆ.

ಸದ್ಯಕ್ಕೆ ಭಾರತೀಯ ಕಾರು ಮಾರುಕಟ್ಟೆಯಲ್ಲಿ ನಿಸ್ಸನ್‌ ಕೇವಲ ಮ್ಯಾಗ್ನೈಟ್ (Nissan Magnite) ಕಾರನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಈ ಕಾರಿಗೆ ಮತ್ತಷ್ಟು ಅಪ್‌ಡೇಟ್‌ ನೀಡಲು ಹೊರಟಿದೆ. ಭಾರತೀಯ ಸಬ್‌ ಕಾಂಪಾಕ್ಟ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಿಸ್ಸಾನ್‌ಗೆ ಭಾರೀ ಸ್ಪರ್ಧೆಯಿದೆ. ಇದನ್ನು ತೀರಾ ಸೀರಿಯಸ್‌ ಆಗಿ ತೆಗೆದುಕೊಂಡಿರುವ ಕಂಪನಿ ಕೆಲವು ಸಮಯಗಳ ಹಿಂದೆಯಷ್ಟೇ ಕುರೋ ಎಡಿಷನ್‌ನಲ್ಲಿ ಈ ಕಾರಿಗೆ AMT ಟ್ರಾನ್ಸ್‌ಮಿಷನ್‌ ನೀಡಿತ್ತು.

Nissan Magnite Will Get Big Update In India Market

ಆದರೆ ಇಷ್ಟು ಸಾಲುವುದಿಲ್ಲ ಎಂದು ತಿಳಿದುಕೊಂಡಿರುವ ಕಂಪನಿ ಈ ಕಾರಿನ ಭಾರೀ ಅಪ್‌ಡೇಟ್‌ಗೆ ಮುಂದಾಗಿದೆ. ಮಾಹಿತಿಗಳ ಪ್ರಕಾರ ಹೊಸ ನಿಸ್ಸಾನ್‌ನಲ್ಲಿ ಮರು ವಿನ್ಯಾಸಗೊಂಡ ಬಂಪರ್‌ ಮತ್ತು ಗ್ರಿಲ್‌ ಇರಲಿದೆ. ನಿಸ್ಸಾನ್‌ನ ಗ್ಲೋಬಲ್‌ ಲೈನ್‌ಅಪ್‌ನಲ್ಲಿ ಬರುವ ವಿನ್ಯಾಸ ಇದಾಗಿರಲಿದೆ ಎಂದು ತಿಳಿದು ಬಂದಿದೆ. ಲೈಟ್‌ ಮತ್ತು ಇತರ ಸಣ್ಣ ಸಣ್ಣ ವಿಷಯಗಳಲ್ಲೂ ಬದಲಾವಣೆಗಳನ್ನು ಕಾಣಲಿದೆ ಎಂದು ಮೂಲಗಳು ತಿಳಿಸಿವೆ.

ಇದು ಬಿಟ್ಟು ಎಂಜಿನ್‌ ಮತ್ತು ಇನ್ನಿತರ ವಿಷಯದಲ್ಲಿ ಯಾವುದೇ ಬದಲಾವಣೆಗಳು ಕಂಡು ಬರುವ ಲಕ್ಷಣಗಳಿಲ್ಲ. ಕೆಲವು ಸಮಯಗಳ ಹಿಂದೆ ನಿಸ್ಸಾನ್ ಕಂಪನಿಯು ತನ್ನ ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‌ಯುವಿಯ ಇಝಡ್-ಶಿಫ್ಟ್ (EZ-Shift) ರೂಪಾಂತರವನ್ನು ಎಎಂಟಿ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಸಿದ್ದಪಡಿಸಿ, ಪರಿಚಯಿಸಿತ್ತು. ಇದರ ಕುರಿತಾಗಿ ನಾವು ವರದಿಯೂ ಮಾಡಿದ್ದೆವು.

Nissan Magnite Will Get Big Update In India Market

ಎಎಂಟಿ ಗೇರ್‌ಬಾಕ್ಸ್‌ ಪಡೆದುಕೊಂಡಿರುವುದರಿಂದ ಮ್ಯಾಗ್ನೈಟ್ ಈ ರೂಪಾಂತರಕ್ಕೆ 'ಇಝಡ್-ಶಿಫ್ಟ್' ಎಂಬ ಹೆಸರು ಬಂದಿದೆ. ಹಿಂಭಾಗದಲ್ಲಿ ಇಝಡ್-ಶಿಫ್ಟ್ (EZ-Shift) ಬ್ಯಾಡ್ಜ್ ಹೊಂದಿದೆ. ಸಿವಿಟಿ (CVT) ಗೇರ್‌ಬಾಕ್ಸ್‌ ಆಯ್ಕೆಯೊಂದಿರುವ ರೂಪಾಂತರಕ್ಕೆ ಹೋಲಿಸಿದರೆ, ಸ್ವಲ್ಪ ಭಿನ್ನವಾದ ಶಿಫ್ಟರ್ ಹೊಂದಿದ್ದು, ಹೊಸ ಲಿವರ್, ಅದರ ಶೈನಿ ಕ್ರೋಮ್ ಸೆಂಟರ್ ನಲ್ಲಿ ವಿಭಿನ್ನ ಮೋಡ್‌ಗಳನ್ನು ಪಡೆದಿದೆ.

ಹೊಸ ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ರೂಪಾಂತರದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆಶ್ಚರ್ಯ ಸಂಗತಿಯೊಂದು ಇಲ್ಲಿದೆ. ಇದು, 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಜೊತೆಯಲ್ಲಿ ಎಎಂಟಿ ಗೇರ್‌ಬಾಕ್ಸ್ ಹೊಂದಿರುವ ಏಕೈಕ ಆವೃತ್ತಿಯಾಗಿದೆ. ಟರ್ಬೋಚಾರ್ಜ್ಡ್ ಎಂಜಿನ್ ನಿಸ್ಸಾನ್ ಮ್ಯಾಗ್ನೈಟ್ ಆವೃತ್ತಿಯು ಇನ್ನೂ ಸಿವಿಟಿ (CVT) ಗೇರ್‌ಬಾಕ್ಸ್ ಆಯ್ಕೆಯನ್ನು ಹಾಗೆಯೇ ಉಳಿಸಿಕೊಂಡಿದೆ.

Nissan Magnite Will Get Big Update In India Market

ಹೊಸ ಗೇರ್‌ಬಾಕ್ಸ್ ಹೊಂದಿರುವ ಈ ಕಾರಿನ 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್, 71 bhp ಗರಿಷ್ಠ ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಫ್ರಂಟ್ ವೀಲ್ ಗಳಿಗೆ ಪವರ್ ವರ್ಗಾಯಿಸುತ್ತದೆ. ಈ ಮೂಲಕ ಇದರ ಎಂಜಿನ್ ಹೆಚ್ಚು ಶಕ್ತಿಯುತವಾಗಿದೆ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, April 10, 2024, 17:57 [IST]
English summary
Nissan magnite will get big update in india market
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+