ಭಾರತದಲ್ಲಿ ಫಾರ್ಚ್ಯೂನರ್ ಎದುರಾಳಿಯ ಬುಕಿಂಗ್ ಆರಂಭ: ಬೆಲೆ ಘೋಷಣೆಯಾಗುವುದಕ್ಕೂ ಮೊದಲೇ ಬೇಡಿಕೆ!
ಭಾರತದಲ್ಲಿ ಹಲವು ದಶಕಗಳ ಬಳಿಕ ನಿಸ್ಸಾನ್ ಕಂಪನಿಯು ಭಾರತದಲ್ಲಿ ತನ್ನ ಎಕ್ಸ್ ಟ್ರೇಲ್ ಕಾರು ಮಾದರಿಯನ್ನು ಭಾರತಕ್ಕೆ ಲಾಂಚ್ ಮಾಡಿದೆ. ಸಾಕಷ್ಟು ಪೀಚರ್ ಮತ್ತು ಸೆವೆನ್ ಸೀಟಿಂಗ್ ಕಾರು ಮಾದರಿಯಾಗಿ ಮಾರುಕಟ್ಟೆಗೆ ಬಂದಿರುವ ಈ ಕಾರು ಮಾರಾಟ ಆರಂಭಿಸಿದರೆ ಭಾರತೀಯ ಹೆದ್ದಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವುದರಲ್ಲಿ ಸಂಶಯವಿಲ್ಲ. ಭಾರತಕ್ಕೆ ಎಕ್ಸ್ ಟ್ರೇಲ್ ಕಾರು ಬರುವುದಕ್ಕೂ ಮೊದಲು ಕೇವಲ ಮ್ಯಾಗ್ನೆಟ್ ಕಾರು ಮಾದರಿಯನ್ನಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿತ್ತು. ಇದೀಗ ಆ ಪಟ್ಟಿಗೆ ನಿಸ್ಸಾನ್ ತನ್ನ ಎಕ್ಸ್‌ಟ್ರೇಲ್ ಕಾರನ್ನು ಸೇರಿಸಿದೆ.
ಇದೀಗ ಬಂದ ಮಾಹಿತಿಗಳ ಪ್ರಕಾರ ಕಂಪನಿಯು ಇದೀಗ ಅಧಿಕೃತವಾಗಿ ಭಾರತದಲ್ಲಿ ಈ ಕಾರಿನ ಬುಕಿಂಗ್ ಅನ್ನು ಆರಂಭಿಸಿದೆ. ಈ ಮೂಲಕ ಗ್ರಾಹಕರು ಮೂರು ಸಾಲುಗಳ ಎಸ್‌ಯುವಿಯನ್ನು ಟೋಕನ್ ಮೊತ್ತವನ್ನು ರೂ 1 ಲಕ್ಷ ಪಾವತಿಸಿ ಬುಕ್ ಮಾಡಬಹುದು. ಈ ಕಾರನ್ನು ಒಂದೇ ರೂಪಾಂತರ ಮತ್ತು ಮೂರು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ - ಪರ್ಲ್ ವೈಟ್, ಡೈಮಂಡ್ ಬ್ಲ್ಯಾಕ್ ಮತ್ತು ಷಾಂಪೇನ್ ಸಿಲ್ವರ್ ಎಂಬ ಬಣ್ಣಗಳಲ್ಲಿ ಲಬ್ಯವಿದೆ. ಈ ಎಸ್‌ಯುವಿಯ ಬೆಲೆಯನ್ನು ಆಗಸ್ಟ್ 1, 2024 ರಂದು ಪ್ರಕಟಿಸಲಾಗುವುದು.

ಈ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯಲ್ಲಿ 1.5-ಲೀಟರ್, 3-ಸಿಲಿಂಡರ್, ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಒಟ್ಟು 163hp ಮತ್ತು 300Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ 12V ಮೈಲ್ಡ್-ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಿಯಾಗಿ ಬರುತ್ತದೆ. ಮುಂಬರುವ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿಯಲ್ಲಿ ಯಾವುದೇ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಇಲ್ಲ ಮತ್ತು ಮಾದರಿಯು ಶಿಫ್ಟ್-ಬೈ-ವೈರ್ ಸಿವಿಟಿ ಗೇರ್‌ಬಾಕ್ಸ್ ಅನ್ನು ಒಳಗೊಂಡಿದೆ.
ಭಾರತೀಯ ಮಾರುಕಟ್ಟೆಯಲ್ಲಿ ನಿಸ್ಸಾನ್ X-ಟ್ರಯಲ್ (Nissan X-Trail ) ಎಸ್‍ಯುವಿಯನ್ನು 3 ಸಾಲುಗಳ ಸೀಟುಗಳೊಂದಿಗೆ (7-ಸೀಟುಗಳು) ಬಿಡುಗಡೆ ಮಾಡುತ್ತದೆ ಈ ನಿಸ್ಸಾನ್ ಮ್ಯಾಗ್ನೈಟ್‌ಗಿಂತ ಭಿನ್ನವಾಗಿ, ಮುಂಬರುವ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿಯನ್ನು ಭಾರತದಲ್ಲಿ ತಯಾರಿಸಲಾಗುವುದಿಲ್ಲ ಆದರೆ ಇದು ಸಂಪೂರ್ಣವಾಗಿ ಆಮದು ಮಾಡಲಾದ ಮಾದರಿಯಾಗಿದೆ.

ಮುಂಬರುವ ನಿಸ್ಸಾನ್ ಎಕ್ಸ್-ಟ್ರಯಲ್ ಅದರ ನಾಲ್ಕನೇ ತಲೆಮಾರಿನ ಮಾದರಿಯಾಗಿದೆ. ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯು 4,680 ಎಂಎಂ ಉದ್ದ, 1,840 ಎಂಎಂ ಅಗಲ, 1,725 ಎಂಎಂ ಎತ್ತರ ಮತ್ತು 2,705 ಎಂಎಂ ಉದ್ದದ ವ್ಹೀಲ್ ಬೇಸ್ ಅನ್ನ್ನು ಹೊಂದಿದೆ. ಇದರ ದೊಡ್ಡ ಗಾತ್ರದ ಹೊರತಾಗಿಯೂ, ನಿಸ್ಸಾನ್ ಎಕ್ಸ್-ಟ್ರಯಲ್ 5.5 ಮೀ ಟರ್ನಿಂಗ್ ರೆಡಿಯಸ್ ಹೊಂದಿದೆ. ಈ ನಿಸ್ಸಾನ್ ಎಕ್ಸ್-ಟ್ರಯಲ್ ಮಾದರಿಯು CMF-C ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.
ಈ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯಲ್ಲಿ ಸುರಕ್ಷತೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತದೆ. ಇದರಲ್ಲಿ ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, ABS, EBD, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು 360-ಡಿಗ್ರಿ ಕ್ಯಾಮೆರಾ ಸಿಸ್ಟಮ್ ಅನ್ನು ಹೊಂದಿದೆ. ಇದರೊಂದಿಗೆ ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಆಟೋ ವೈಪರ್‌ಗಳು ಮತ್ತು ಹೆಚ್ಚಿನವುಗಳನ್ನು ಹೊಂದಿದೆ. ಸುರಕ್ಷತಾ ಎಸ್‍ಯುವಿಗಳಲ್ಲಿ ಇದು ಕೂಡ ಒಂದಾಗಿದೆ. . ಈ ಹೊಸ ನಿಸ್ಸಾನ್ X-ಟ್ರಯಲ್ (Nissan X-Trail) ಎಸ್‍ಯುವಿಯು ಆಕರ್ಷಕವಾಗಿದೆ.
ಈ ಹೊಸ ನಿಸ್ಸಾನ್ ಎಸ್‍ಯುವಿಯು ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು, ಡೋರ್-ಮೌಂಟೆಡ್ ORVM ಗಳು ಮತ್ತು ಸುತ್ತುವ ಟೈಲ್‌ಲೈಟ್‌ಗಳಂತಹ ಅಚ್ಚುಕಟ್ಟಾದ ಅಂಶಗಳನ್ನು ಹೊಂದಿವೆ. ಇದರ ಜೊತೆಗೆ, ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯಲ್ಲಿ 360-ಡಿಗ್ರಿ ಪ್ಲಾಸ್ಟಿಕ್ ಕ್ಲಾಡಿಂಗ್ ಮತ್ತು ಎತ್ತರದ 210mm ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಸ್ವಲ್ಪ ಒರಟಾಗಿ ಕಾಣುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications