ಸಣ್ಣ ಹೋಟೆಲ್‌ನಲ್ಲಿ ಅಡುಗೆ ಮಾಡುತ್ತಾ ದುಬಾರಿ ಕಾರುಗಳ ಒಡೆಯನಾದ! ಶ್ರೀಮಂತ ಬಾಣಸಿಗ

ಹೋಟೆಲ್ ವೇಯಿಟರ್ (ಬಾಣಸಿಗ) ಒಬ್ಬರು ಕೋಟೀಶ್ವರನಾಗಿ ಮಾರ್ಪಟ್ಟ ಕಥೆಯ ಬಗ್ಗೆ ಈ ಲೇಖನದಲ್ಲಿ ಹೇಳಲಿದ್ದೇವೆ. ಚೆಫ್ ಪಿಳ್ಳೈ ಎಂದು ಕರೆಯಲ್ಪಡುವ ಸುರೇಶ್ ಪಿಳ್ಳೈ ಎಂಬುವರು ಕೇರಳದ ಸಣ್ಣ ಕುಟುಂಬದಿಂದ ಬಂದವರು. ಚೆಫ್‌ನಿಂದ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಮತ್ತು ಪೋರ್ಷೆ ಕೇಯೆನ್ನೆ ಕಾರಿನ ಮಾಲೀಕರಾಗಿ ಬೆಳೆದ ಪ್ರಯಾಣವು ಸ್ಪೂರ್ತಿದಾಯಕವಾಗಿದೆ.

ಚೆಫ್ ಪಿಳ್ಳೈ ಅವರು ತಮ್ಮ 17ನೇ ವಯಸ್ಸಿನಲ್ಲಿ ಸ್ಥಳೀಯ ರೆಸ್ಟೋರೆಂಟ್ ಒಂದರಲ್ಲಿ ವೇಯಿಟರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದರು. ಅಲ್ಲಿಂದ, ಅವರು ಅಡುಗೆ ಕಲೆಗಳ ಬಗ್ಗೆ ತಮ್ಮ ಪ್ರೀತಿ, ಉತ್ಸಾಹ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿದರು. ಅಡುಗೆಯ ಮೇಲಿನ ಪ್ರೀತಿಯಿಂದ ಉತ್ತೇಜಿತರಾದ ನಂತರ, ಅಡುಗೆ ಬಡಿಸುವ ಬದಲು ಅಡುಗೆಮನೆಯಲ್ಲಿ ಕೆಲಸ ಮಾಡಲು ನಿರ್ಧರಿಸಿಬಿಟ್ಟರು. ಇನ್ನೂ ಉತ್ತಮ ಚೆಫ್ ಆಗಲು ಬಯಸಿ ಶ್ರದ್ಧೆಯಿಂದ ಕಲಿತು, ಅನುಭವಿ ಬಾಣಸಿಗರ ಮಾರ್ಗದರ್ಶನದಲ್ಲಿ ತಮ್ಮ ಕೌಶಲ್ಯಗಳನ್ನು ಮೆರುಗುಗೊಳಿಸಿಕೊಂಡರು. ತಮ್ಮ ಶ್ರದ್ಧೆ ಮತ್ತು ಕಠಿಣ ಪರಿಶ್ರಮ, ಅವರನ್ನು ಲಂಡನ್‌ಗೆ ಕರೆದೊಯ್ಯಿತು. ಅಲ್ಲಿ ಪ್ರಸಿದ್ಧ ರೆಸ್ಟೋರೆಂಟ್‌ಗಳಲ್ಲಿ 15 ವರ್ಷಗಳನ್ನು ಕಳೆದರು.

once-a-chef-today-he-owns-expensive-cars-chef-pillai-inspiring-story

ಭಾರತಕ್ಕೆ ಮರಳಿದ ನಂತರ, ಚೆಫ್ ಪಿಳ್ಳೈ ತಮ್ಮ ಪರಿಣತಿ ಮತ್ತು ಉತ್ಸಾಹವನ್ನು ಉದ್ಯಮಶೀಲತೆಗೆ ತರಲು ನಿರ್ಧರಿಸಿದರು. 2021 ರಲ್ಲಿ, ಅವರು ತಮ್ಮದೇ ಆದ ರೆಸ್ಟೋರೆಂಟ್ ಪ್ರಾರಂಭಿಸಿ ಯಶಸ್ಸನ್ನು ಕಾಣುತ್ತಾ ಇಂದು ಅವರು ಮಿಲಿಯನೇರ್ ಆಗಿದ್ದಾರೆ. ಅವರ ಪ್ರಕಾರ ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ಪರಿಶ್ರಮವಿದ್ದರೇ ಒಂದಲ್ಲ ಒಂದು ದಿನ ಯಶಸ್ಸು ಕಂಡಿತ ಸಿಗುತ್ತದೆ ಎಂದಿದ್ದಾರೆ.

ಪಿಳ್ಳೈ ಮೊದಲ ಕಾರು: ಚೆಫ್ ಪಿಳ್ಳೈ ಮೊದಲೇ ಹೇಳಿದಂತೆ ಸಣ್ಣ ಕುಟುಂಬದಿಂದ ಬಂದವರು, ಅವರು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದ ದಿನಗಳು ಕೂಡ ಇವೆ ಎಂದು ಸಂದರ್ಷನವೊಂದರಲ್ಲಿ ಹೇಳಿಕೊಂಡಿದ್ದರು. ಕೊನೆಗೂ ಯಶಸ್ಸಿನ ಉತ್ತುಂಗಕ್ಕೆ ಬಂದಾಗ ಅವರು ಮೊದಲು ಖರೀದಿಸಿದ ಕಾರು ಮರ್ಸಿಡಿಸ್ ಬೆಂಝ್ ಐಷಾರಾಮಿ ಸೆಡಾನ್, ಕಾರಿನ ಡೆಲಿವರಿ ಪಡೆದ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಮ್ಮ ಅನಿಸಿಕೆಯನ್ನು ಬರೆದುಕೊಂಡಿದ್ದಾರೆ.

once-a-chef-today-he-owns-expensive-cars-chef-pillai-inspiring-story

"ನನ್ನ 43 ವರ್ಷಗಳ ಜೀವನದಲ್ಲಿ ಒಂದು ಸೈಕಲ್ ಕೂಡ ಖರೀದಿಸಿಲ್ಲ. ನನಗೆ ಕಾರುಗಳ ಬಗ್ಗೆ ಕ್ರೇಜ್ ಇಲ್ಲ. ಲಂಡನ್‌ನಲ್ಲಿ ನನ್ನ 15 ವರ್ಷಗಳ ವೃತ್ತಿಜೀವನದಲ್ಲಿ, ಉತ್ತಮ ಐಷಾರಾಮಿ ವಾಹನವನ್ನು ಪಡೆಯಬಹುದಿತ್ತು, ಆದರೆ ನನಗೆ ಎಂದಿಗೂ ಸಿಗಲಿಲ್ಲ. "ಈ ದಿನದವರೆಗೂ ನನಗೆ ಅದರ ಅಗತ್ಯ ಇರಲಿಲ್ಲ. ಆದರೆ ಈಗ ಬಿಡುವಿಲ್ಲದ ಕೆಲಸ, ನಿರಂತರ ಪ್ರಯಾಣದೊಂದಿಗೆ ವಾಹನವಿಲ್ಲದೆ ಕಷ್ಟವಾಗುತ್ತಿದೆ! ಹಾಗಾದರೆ ಮುಂದೇನು? ಎರಡು ಬಾರಿ ಯೋಚಿಸಬೇಕಾಗಿಲ್ಲ-ಎಲ್ಲರ ನೆಚ್ಚಿನ ಮರ್ಸಿಡಿಸ್ ಬೆಂಝ್ ಶೋರೂಂಗೆ ಹೋದೆ! ತಾಳ್ಮೆ ಮತ್ತು ಕಠಿಣ ಪರಿಶ್ರಮವು ಖಂಡಿತ ನಿಮ್ಮ ಕನಸುಗಳ ಬಾಗಿಲಿಗೆ ಕರೆದೊಯ್ಯುತ್ತದೆ ಎಂದು ಬರೆದುಕೊಂಡಿದ್ದಾರೆ.

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರನ್ನು ಖರೀದಿಸುವುದರ ಹೊರತಾಗಿ, ಚೆಫ್ ಪಿಳ್ಳೈ ಕಳೆದ ವರ್ಷ ತಮ್ಮ ಎರಡನೇ ಐಷಾರಾಮಿ ಕಾರಾದ ಹೊಸ ಪೋರ್ಷೆ ಕೇಯೆನ್ ಐಷಾರಾಮಿ ಎಸ್ ಯುವಿಯನ್ನು ಸಹ ಖರೀದಿಸಿದ್ದರು. ಇದರ ಬೆಲೆ ಬರೋಬ್ಬರಿ 1.42 ಕೋಟಿ ರೂ. ಅವರು ಸ್ವತಃ ಟಾಪ್ - ಆಫ್ - ಲೈನ್ ಕೇಯೆನ್ ಕೂಪೆ ರೂಪಾಂತರವನ್ನು ಖರೀದಿಸಿದ್ದಾರೆ.

ಚೆಫ್ ಪಿಳ್ಳೈ ಅವರು ಖರೀದಿಸಿರುವ ಪೋರ್ಷೆ ಕೇಯೆನ್ ಐಷಾರಾಮಿ ಎಸ್‌ಯುವಿ ಬಹಳ ಅಪರೂಪದ ಮಾದರಿಯಾಗಿದೆ. ಕೂಪೆ ತರಹದ ಹಿಂಭಾಗದ ವಿಭಾಗವನ್ನು ಹೊಂದಿರುವ ಈ ವಿಶಿಷ್ಟ ಎಸ್‌ಯುವಿ 3.0-ಲೀಟರ್ ವಿ 6 ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 340 ಬಿಹೆಚ್‌ಪಿ ಪವರ್ ಮತ್ತು 450 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 30, 2024, 12:17 [IST]
English summary
Once a chef today he owns expensive cars chef pillai inspiring story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+