ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ಈಗ ದುಬಾರಿ ಕಾರಿನ ಒಡತಿ: ಮೈಮಾಟದ ನಟಿಯ ಗ್ಯಾರೇಜ್‌ಗೆ ಹೊಸ ಅತಿಥಿ!
ರಶ್ಮಿ ಆರ್ ನಾಯರ್ ಎಂಬ ಹೆಸರನ್ನು ಬಹುತೇಕ ಹುಡುಗರೆಲ್ಲರೂ ಕೇಳಿಯೇ ಇರುತ್ತೀರಿ. ಪಡ್ಡೆ ಹುಡುಗರ ನಿದ್ದೆ ಗೆಡಿಸುವಂತೆ ಮೈಮಾಟ ಹೊಂದಿರುವ ಈಕೆ ಕೆಲವು ಸಾಮಾಜಿಕ ಕಾರ್ಯಗಳು ಮಾಡಿದ್ದರೂ, ತನ್ನ ಮೈಮಾಟಕ್ಕೆ ಹೆಚ್ಚು ಪ್ರಸಿದ್ದಿ ಪಡೆದಿದ್ದಾಳೆ. ಸಾಮಾಜಿಕ ಜಾಲತಾಣಗಳಿಂದ ಬಂದ ಹಣದಿಂದಲೇ ಹಲವು ಲಕ್ಷುರಿ ಕಾರುಗಳನ್ನು ಹೊಂದಿರುವ ಈಕೆ ಇದೀಗ ಆ ಪಟ್ಟಿಗೆ ಹೊಸ ಕಾರನ್ನು ಸೇರಿಸಿದ್ದಾಳೆ. ಹೌದು, ರಶ್ಮಿ ಆರ್ ನಾಯರ್ ಇದೀಗ ಮಿನಿ ಕೂಪರ್ (Mini Cooper) ಕಾರೊಂದನ್ನು ಖರೀದಿಸಿದ್ದು ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾಳೆ.
'ನನ್ನ ಹುಟ್ಟುಹಬ್ಬದಂದು ನನಗೆ ಈ ಉಡುಗೊರೆಯನ್ನು ನೀಡಿದ ನನ್ನ ಪ್ರೀತಿಯ ಪತಿಗೆ ಧನ್ಯವಾದಗಳು' ಎಂಬ ಶೀರ್ಷಿಕೆಯೊಂದಿಗೆ ನಟಿ ಚಿತ್ರಗಳು ಮತ್ತು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ಸಮಯದಲ್ಲಿ, ನಟಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆಗಳ ಸುರಿಮಳೆಯಾಯಿತು. ರಶ್ಮಿ ನಾಯರ್ ವಾಹನಗಳನ್ನು ಖರೀದಿಸಿ ಮನೆಯಲ್ಲಿ ಬಿಡದೆ ಯಾವಾಗಲೂ ಪ್ರವಾಸಕ್ಕೆ ಹೋಗುವ ವ್ಯಕ್ತಿ.

ಕೆಲವು ತಿಂಗಳ ಹಿಂದೆ, ಈಕೆ ಹೊಸ BMW 3-ಸರಣಿ (G20) ಡೀಸೆಲ್ ಮಾದರಿಯನ್ನು ಖರಿದಿ ಮಾಡಿದ್ದರು. ರಶ್ಮಿ ಈ ವಾಹನಕ್ಕಾಗಿ ಮೆಲ್ಬೋರ್ನ್ ರೆಡ್ ಎಂಬ ವಿಶೇಷ ಬಣ್ಣದ ಆಯ್ಕೆಯನ್ನು ಆರಿಸಿಕೊಂಡಿದ್ದರು. ಹಿಂದಿನ BMW ಮಾದರಿಯು ಕೆಂಪು ಬಣ್ಣದಲ್ಲೂ ಲಭ್ಯವಿತ್ತು. ಇದೀಗ ಈಕೆಯ ಗ್ಯಾರೇಜ್‌ನಲ್ಲಿರುವ ಹೊಸ ಅತಿಥಿಯ ಸೇರ್ಪಡೆಯಾಗಿದ್ದು, ಈಕೆಯ ಅಭಿಮಾನಿಗಳು ಹೊಸ ಮಿನಿ ಕೂಪರ್ ನಲ್ಲಿ ವಿಡಿಯೋಗಳನ್ನು ಎದುರು ನೊಡುತ್ತಿದ್ದಾರೆ.
ಮಿನಿ ಕೂಪರ್ ಎಸ್ (Mini Cooper) ಎಂಬುದು ಮಿನಿ ಕೂಪರ್ ಶ್ರೇಣಿಯಲ್ಲಿನ ಪೆಟ್ರೋಲ್ ರೂಪಾಂತರವಾಗಿದ್ದು, ಇದು ಬ್ರಿಟಿಷ್ ರೇಸಿಂಗ್ ಗ್ರೀನ್, ಐಲ್ಯಾಂಡ್ ಬ್ಲೂ, ಚಿಲ್ಲಿ ರೆಡ್, ಮೂನ್‌ವಾಕ್ ಗ್ರೇ, ರೂಫ್‌ಟಾಪ್ ಗ್ರೇ, ವೈಟ್ ಸಿಲ್ವರ್ ಮತ್ತು ಪೆಪ್ಪರ್ ವೈಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಕಾರು 2.0 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 129 bhp ಪವರ್ ಮತ್ತು 280 Nm ಟಾರ್ಕ್ ಅನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ಎಂಜಿನ್ ಅನ್ನು 7-ಸ್ಪೀಡ್ ಡಿಸಿಟಿ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಶೂನ್ಯದಿಂದ 100 ಕಿಮೀ ವೇಗವನ್ನು ಹೆಚ್ಚಿಸಲು ಇದು ಕೇವಲ 6.7 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಇದು 16.58 kmpl ವರೆಗೆ ಮೈಲೇಜ್ ನೀಡುತ್ತದೆ. ರಶ್ಮಿ ನಾಯರ್ ಅವರು ಬಳಸಿದ ಕಾರನ್ನು ಹೊಂದಿರುವುದರಿಂದ ಬೆಲೆ ಸ್ಪಷ್ಟವಾಗಿಲ್ಲ. ಮಿನಿ ಕೂಪರ್ ಎಸ್ ಬೆಲೆ ಸುಮಾರು 53.33 ಲಕ್ಷ ರೂ.
ರಶ್ಮಿ ನಾಯರ್‌ನ ಗ್ಯಾರೇಜ್‌ನಲ್ಲಿರುವ ಇತರ ವಾಹನಗಳನ್ನು ನೋಡುವಾಗ, ನಾನು ಮೊದಲು ಹೇಳಬೇಕಾಗಿರುವುದು BMW 3-ಸರಣಿ (G20) ಡೀಸೆಲ್ಕಾರಿನ ಬಗ್ಗೆ. ಇದಲ್ಲದೆ ಈಕೆಯ ಪತಿ 16 ನೇ ವಿವಾಹ ವಾರ್ಷಿಕೋತ್ಸವದ ಉಡುಗೊರೆಯಾಗಿ ಮಹೀಂದ್ರಾ ಅವರ ಹೊಚ್ಚ ಹೊಸ ಸ್ಕಾರ್ಪಿಯೊ ಎನ್ ಎಸ್ಯುವಿಯನ್ನು ಸಹ ಉಡುಗೊರೆಯಾಗಿ ನೀಡಿದ್ದರು ಎಂಬುದನ್ನು ನಾವು ಈ ಸಂಧರ್ಭದಲ್ಲಿ ನೆನಪಿಸಿಕೊಳ್ಳಬೇಕಿದೆ.

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಕುರಿತಾಗಿ ನೊಡುವುದಾದರೆ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N) ಎಸ್‌ಯುವಿ ರೂ.13.60 ಲಕ್ಷದಿಂದ ರೂ.24.54 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಝಡ್2, ಝಡ್4, ಝಡ್6, ಝಡ್8 ರೂಪಾಂತರ ಮತ್ತು ಡೀಪ್ ಫಾರೆಸ್ಟ್, ಎವರೆಸ್ಟ್ ವೈಟ್, ನಾಪೋಲಿ ಬ್ಲ್ಯಾಕ್ ಸೇರಿದಂತೆ ಹಲವು ಆಕರ್ಷಕ ಬಣ್ಣಗಳೊಂದಿಗೆ ಲಭ್ಯವಿದೆ.
ಈ ಸ್ಕಾರ್ಪಿಯೋ ಕ್ಲಾಸಿಕ್ ಕಾರು ಕೇವಲ 2.2-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 132 ಪಿಎಸ್ ಗರಿಷ್ಠ ಪವರ್ ಮತ್ತು 300 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 6-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. ಜೊತೆಗೆ RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.


Click it and Unblock the Notifications








