ಮಾರುತಿ ಡಿಜೈರ್‌ಗೆ 5-ಸ್ಟಾರ್ ರೇಟಿಂಗ್ ಕೊಡಲು ಈ ಸೇಫ್ಟಿ ಫೀಚರ್ಸ್ ಪ್ರಮುಖ ಕಾರಣ!

New Maruti Suzuki Dzire: ಮಾರುತಿ ಸುಜುಕಿ ಕಾರುಗಳು ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದಿವೆ. ಅಗ್ಗದ ಬೆಲೆಗೆ ಉತ್ತಮ ಮೈಲೇಜ್ ನೀಡುವುದರ ಜೊತೆಗೆ ಬೆಸ್ಟ್ ಫೀಚರ್‌ಗಳನ್ನು ನೀಡುವ ಮೂಲಕ ಮಧ್ಯಮ ಹಾಗೂ ಬಡ ವರ್ಗದ ಜನರ ಕಾರು ಖರೀದಿಸುವ ಕನಸನ್ನು ನನಸು ಮಾಡಿದೆ. ಆದರೆ ಮಾರುತಿ ಕಾರುಗಳು ಸುರಕ್ಷತೆಯಲ್ಲಿ ಹಿಂದುಳಿದಿವೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇದೊಂದು ಕಾರಣದಿಂದಾಗಿ ಮಾರುತಿ ಕಾರುಗಳನ್ನು ಸುರಕ್ಷತಾ ಪರೀಕ್ಷೆಗೆ ಒಳಪಡಿಸಿದಾಗಲೆಲ್ಲಾ ಕಂಪನಿಯು ಮುಜುಗರಕ್ಕೆ ಒಳಗಾಗುತ್ತಿತ್ತು. ಆದ್ರೆ ಈಗ ಎಲ್ಲವೂ ಬದಲಾಗಿದೆ. ಹೊಸ ಡಿಜೈರ್‌ನೊಂದಿಗೆ ಮಾರುತಿ ಸುಜುಕಿ ಭಾರತದಲ್ಲಿ ಹೊಸ ಅಲೆ ಎಬ್ಬಿಸಿದೆ.

ಹೌದು, ಇತ್ತೀಚೆಗೆ ಬಿಡುಗಡೆಯಾದ ನಾಲ್ಕನೇ ತಲೆಮಾರಿನ ಹೊಸ ಮಾರುತಿ ಸುಜುಕಿ ಡಿಜೈರ್ ಅನ್ನು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ (Global New Car Assessment Programme)ಗೆ ಒಳಪಡಿಸಲಾಗಿತ್ತು. ಈ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರುಗಳ ಸುರಕ್ಷತೆ ಹಾಗೂ ನಿರ್ಮಾಣ ಗುಣಮಟ್ಟವನ್ನು ಪರಿಶೀಲಿಸಿ ಫಲಿತಾಂಶವನ್ನು ನೀಡುತ್ತದೆ.

reason-behind-new-maruti-suzuki-dzire-gets-5-star-safety-rating

ಈ ಸುರಕ್ಷತಾ ಪರೀಕ್ಷೆಯಲ್ಲಿ ಹೊಸ ಮಾರುತಿ ಡಿಜೈರ್ (Maruti Suzuki Dzire) ಎಲ್ಲರನ್ನು ಅಚ್ಚರಿಗೊಳಿಸುವಂತೆ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ. ಈ ಮೂಲಕ ಭಾರತದಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದ ಮೊದಲ ಮಾರುತಿ ಸುಜುಕಿ ಕಾರು ಎಂಬ ಹೆಗ್ಗಳಿಗೆ ಪಡೆದುಕೊಂಡಿದೆ. ಅಷ್ಟಕ್ಕೂ ಮಾರುತಿ ಡಿಜೈರ್ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಸೇಫ್ಟಿ ಫೀಚರ್‌ಗಳು ಯಾವುವು ಗೊತ್ತಾ?

ಮಾರುತಿ ಸುಜುಕಿಯ ಹಾರ್ಟೆಕ್ಟ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿರುವ ಹೊಸ ಡಿಜೈರ್‌ನಲ್ಲಿ ಸ್ಟ್ಯಾಂಡರ್ಡ್ ಆಗಿರುವ ಹಲವಾರು ಸುರಕ್ಷತಾ ಫೀಚರ್‌ಗಳನ್ನು ನೀಡಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ ಸ್ಟ್ಯಾಂಡರ್ಡ್‌ ಆಗಿ ನೀಡಲಾಗುವ ಆರು ಏರ್‌ಬ್ಯಾಗ್‌ಗಳು, ಎಬಿಎಸ್ ವಿತ್ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ಪಿ), ಹಿಲ್ ಹೋಲ್ಡ್ ಅಸಿಸ್ಟ್ (ಎಚ್ಎಚ್ಎ), ಎಂಜಿನ್ ಇ-ಮೊಬೈಲೈಸರ್‌ನಂತಹ ಫೀಚರ್ಸ್ ಒಳಗೊಂಡಿದೆ.

reason-behind-new-maruti-suzuki-dzire-gets-5-star-safety-rating

ಇವು ಮಾತ್ರವಲ್ಲದೇ ರಿಯರ್ ಡಿಫೋಗರ್, ಎಲ್ಲಾ ಪ್ರಯಾಣಿಕರಿಗೆ 3 - ಪಾಯಿಂಟ್ ಸೀಟ್ ಬೆಲ್ಟ್‌ಗಳು, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕಿಂಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್‌ಗಳು ಮತ್ತು ಹೈಸ್ಪೀಡ್ ವಾರ್ನಿಂಗ್ ಅಲರ್ಟ್, ಫೋರ್ಸ್ ಲಿಮಿಟರ್ ಮತ್ತು ಪ್ರಿ-ಟೆನ್ಷನರ್ ಹೊಂದಿರುವ ಫ್ರಂಟ್ ಸೀಟ್ ಬೆಲ್ಟ್, ಪ್ರತಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್ ಹೆಚ್ಚುವರಿ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳಾಗಿವೆ.

ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಸೆಡಾನ್‌ನ ಹೈ-ಎಂಡ್ ಕಾರುಗಳು ಮಾತ್ರ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), ಹಗಲು / ರಾತ್ರಿ ಸರಿಹೊಂದಿಸಬಹುದಾದ ರಿಯರ್ ವ್ಯೂ ಮಿರರ್, 360-ಡಿಗ್ರಿ ಎಚ್‌ಡಿ ಕ್ಯಾಮೆರಾ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಆಂಟಿ-ಥೆಫ್ಟ್ ಸೆಕ್ಯುರಿಟಿ ಸಿಸ್ಟಮ್ (ಶಾಕ್ ಸೆನ್ಸಾರ್) ಸೇರಿದಂತೆ ಹೆಚ್ಚುವರಿ ಸೌಲಭ್ಯಗಳನ್ನು ಒಳಗೊಂಡಿವೆ.

reason-behind-new-maruti-suzuki-dzire-gets-5-star-safety-rating

ಏನೇ ಆಗಲಿ ನಾಲ್ಕನೇ ತಲೆಮಾರಿನ ಡಿಜೈರ್ ಭಾರತದಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದ ನಂತರ, ಮಾರುತಿ ಸುಜುಕಿ ಕೂಡ ಅತ್ಯಂತ ಸುರಕ್ಷಿತ ಕಾರುಗಳನ್ನು ಒದಗಿಸುವ ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಕಂಪನಿಗಳ ಸಾಲಿಗೆ ಸೇರಿದೆ. ಹೊಸ ಡಿಜೈರ್‌ಗೆ ಸದ್ಯ ಬಾರೀ ಬೇಡಿಕೆ ವ್ಯಕ್ತವಾಗುವ ಜೊತೆಗೆ, ಮುಂಬರುವ ಮಾರುತಿ ಕಾರುಗಳ ಬಗ್ಗೆ ಜನರಲ್ಲಿ ಈಗಲೇ ನಿರೀಕ್ಷೆಗಳು ಹೆಚ್ಚಾಗಿವೆ.

ಮಾರುತಿ ಸುಜುಕಿಯ ನಾಲ್ಕನೇ ತಲೆಮಾರಿನ ಹೊಸ ಡಿಜೈರ್ ಸೆಡಾನ್ ಅನ್ನು ಭಾರತದಲ್ಲಿ 6.79 ಲಕ್ಷ ರೂ.ಗಳ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿದ್ದು, ಟಾಪ್‌ ಎಂಡ್ ಮಾದರಿಯ ಬೆಲೆಯು 10.14 ಲಕ್ಷ ರೂ.ಗಳ (ಎಕ್ಸ್ ಶೋರೂಂ)ವರೆಗೆ ಇದೆ. ಹೊಸ ಡಿಜೈರ್ ಹ್ಯುಂಡೈ ಔರಾ ಮತ್ತು ಹೋಂಡಾ ಅಮೇಜ್‌ನಂತಹ ಕಾರುಗಳಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲಿದೆ.

Article Published On: Thursday, November 21, 2024, 13:11 [IST]
English summary
Reason behind new maruti suzuki dzire gets 5 star safety rating
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+