Renault: ಕನ್ಫರ್ಮ್ ಆಯ್ತು ರೆನಾಲ್ಟ್ ಬಿಗ್‌ಸ್ಟರ್ SUV ಬಿಡುಗಡೆ: ವಿಶೇಷತೆಗಳೇನು?
2021 ರಲ್ಲಿ ಪರಿಕಲ್ಪನೆಯಾಗಿ ಬಹಿರಂಗಪಡಿಸಲಾಗಿದ್ದ ಹೊಸ ಬಿಗ್‌ಸ್ಟರ್ (Renault Bigster) ಮೂರು - ಸಾಲಿನ ಎಸ್‌ಯುವಿ ಮಾದರಿ ಕೆಲವು ತಿಂಗಳ ಹಿಂದೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಂಡಿತ್ತು. ಈ ಎಸ್‌ಯುವಿ ಮುಂದಿನ ವರ್ಷ ಜಾಗತಿಕವಾಗಿ ಎಂಟ್ರಿಕೊಡಲಿದ್ದು, 2025 ರ ಆರಂಭದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗಲಿದೆ ಎಂದು ವರದಿಯಾಗಿದೆ.
ಈ ರೆನಾಲ್ಟ್ ಬಿಗ್‌ಸ್ಟರ್ ನಮ್ಮೆಲ್ಲರಿಗೂ ತಿಳಿದಿರುವ ರೆನಾಲ್ಟ್ ಡಸ್ಟರ್‌ನ ಉದ್ದನೆಯ ಆವೃತ್ತಿ ಎನ್ನಲಾಗಿದೆ. ಉದಾಹರಣೆಗೆ ಭಾರತದಲ್ಲಿ ನಾವು ನೋಡಬಹುದಾದ ಹ್ಯುಂಡೈ ಕ್ರೆಟಾ ಹಾಗೂ ಹ್ಯುಂಡೈ ಅಲ್ಕಜಾರ್‌ನಂತೆಯೇ ಇದು ಇರುತ್ತದೆ. ಆದರೆ ಹೊರಾಂಗಣ ವಿನ್ಯಾಸ ಮತ್ತು ಇಂಟೀರಿಯರ್ ಡಿಸೈನ್, ಫೀಚರ್ಸ್‌ನಲ್ಲಿ ವ್ಯತ್ಯಾಸವಿರಬಹುದು. ಹಾಗೆಯೇ ಉದ್ದಳತೆಗಳ ವಿಷಯದಲ್ಲೂ ಭಾರೀ ವ್ಯತ್ಯಾಸವಿರಲಿದೆ.

ರೆನಾಲ್ಟ್ ಡಸ್ಟರ್ (Renault Duster) ಸುಮಾರು 4.34 ಮೀಟರ್ ಉದ್ದವಿದ್ದು, ಮೂಲಗಳ ಪ್ರಕಾರ ಹೊಸ ಬಿಗಸ್ಟರ್ 0.3 ಮೀಟರ್ ಹೆಚ್ಚುವರಿ ಉದ್ದದೊಂದಿಗೆ ಒಟ್ಟರೆ 4.6 ಮೀಟರ್ ಉದ್ದವಿರುತ್ತದೆ. ಡಸ್ಟರ್‌ನ ಅದೇ ಒರಟಾದ ಡಿಸೈನ್ ಹಾಗೂ ಇಂಟೀರಿಯರ್‌ನಲ್ಲಿ ಕೆಲವು ಅಂಶಗಳನ್ನು ಡಸ್ಟರ್‌ನಂತೆಯೇ ಹೊಂದಿರಲಿದೆ. ಹಾಗೆಯೇ ಹೊಸ ಬಿಗ್‌ಸ್ಟರ್ ಬೆಲೆಯೂ ಹೆಚ್ಚಿರಲಿದ್ದು, ಬೆಲೆಗೆ ತಕ್ಕಂತೆ ದುಬಾರಿ ವೈಶಿಷ್ಟ್ಯಗಳು ಹಾಗೂ ಹೆಚ್ಚುವರಿ ಸೌಕರ್ಯಗಳು ಇರಲಿವೆ.
ಪ್ರಸ್ತುತ ರೆನಾಲ್ಟ್ ಡಸ್ಟರ್ 2,657mm ವ್ಹೀಲ್‌ಬೇಸ್ ಹೊಂದಿದ್ದು, ಬಿಗ್‌ಸ್ಟರ್ ಇದಕ್ಕಿಂತ ಹೆಚ್ಚಿನ ವ್ಹೀಲ್‌ಬೇಸ್‌ನೊಂದಿಗೆ ಉತ್ತಮ ಡ್ರೈವ್ ಅನ್ನುಭವ ಒದಗಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನು ಇದರ ಪ್ಲಾಟ್‌ಫಾರ್ಮ್ ಬಗ್ಗೆ ಹೇಳುವುದಾದ್ರೆ, ಡಸ್ಟರ್‌ಗೆ ಬಳಿಸಕೊಂಡ ಅದೇ CMF-B ಮಾಡ್ಯುಲರ್ ಆರ್ಕಿಟೆಕ್ಚರ್ ಅನ್ನು ಇದಕ್ಕೂ ಬಳಸಲಿದ್ದಾರೆ. ಆದರೆ ಇದರ ಪವರ್‌ಟ್ರೇನ್ ಆಯ್ಕೆಗಳ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲವಾದರೂ, ಮೂರು ಎಂಜಿನ್ ಆಯ್ಕೆಯೊಂದಿಗೆ ಬರುವ ನಿರೀಕ್ಷೆಯಿದೆ.

ನಮ್ಮ ಪ್ರಕಾರ 1.6-ಲೀಟರ್ 4 - ಸಿಲಿಂಡರ್ ಪೆಟ್ರೋಲ್ ಹೈಬ್ರಿಡ್‌ನೊಂದಿಗೆ ಎರಡು ಮೋಟಾರ್‌ಗಳನ್ನು ಪಡೆಯುತ್ತದೆ. ಈ ಎಂಜಿನ್ ಆಟೋಮ್ಯಾಟಿಕ್ ಗೇರ್‌ಬ್ಯಾಕ್ಸ್‌ನೊಂದಿಗೆ ಬರಲಿದೆ. ಇದು ರೀಜೆನ್ ಬ್ರೇಕಿಂಗ್ ಮತ್ತು 1.2kWh ಬ್ಯಾಟರಿಯೊಂದಿಗೆ ಬರುತ್ತದೆ. ಈ ಮೂಲಕ ನಗರ ರಸ್ತೆಗಳಲ್ಲಿ ಶೇ80 ರಷ್ಟು ಸಂಪೂರ್ಣ ಎಲೆಕ್ಟ್ರಿಕ್ ಡ್ರೈವ್‌ನಲ್ಲಿ ಚಲಿಸಬಹುದು ಎಂದು ನಿರೀಕ್ಷಿಸಬಹುದು.
ಮತ್ತೊಂದು ಎಂಜಿನ್ ಆಯ್ಕೆಯು 1.2 - ಲೀಟರ್ 3 - ಸಿಲಿಂಡರ್ ಟರ್ಬೊ-ಪೆಟ್ರೋಲ್ ಜೊತೆಗೆ 48V ಸ್ಟಾರ್ಟರ್ ಮೋಟಾರ್ ಆಗಿದ್ದು, ಇದು 130hp ಪವರ್ ಉತ್ಪಾದಿಸುವ ಸಾಧ್ಯೆತೆಯಿದೆ. ಉಳಿದಂತೆ ಡೀಸಲ್ ಆಯ್ಕೆ ಇರುವುದಿಲ್ಲ. ಏಕೆಂದರೆ ಸದ್ಯಕ್ಕೆ ಡಸ್ಟರ್ ಕೆಲವು ವಿದೇಶಿ ಮಾರುಕಟ್ಟೆಗಳಲ್ಲಿ ಡೀಸಲ್ ಆಯ್ಕೆಯನ್ನು ನೀಡುತ್ತಿಲ್ಲ.

ನಿರೀಕ್ಷಿತ ಬಿಡುಗಡೆ: ಹೊಸ ರೆನಾಲ್ಟ್ ಡಸ್ಟರ್ 2025 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ. ಬಿಗ್‌ಸ್ಟರ್‌ನ ಭಾರತ ಬಿಡುಗಡೆಯು ಐದು - ಸೀಟ್ ಡಸ್ಟರ್ ಅನ್ನು ಅನುಸರಿಸುತ್ತದೆ, ಅಂದರೆ ಮೂರು- ಸಾಲು SUV ಬಿಡುಗಡೆಗೆ ಇನ್ನೂ ಸ್ವಲ್ಪ ಸಮಯವಿದೆ. ಹೆಚ್ಚುವರಿಯಾಗಿ, ಈ ಎರಡು SUV ಗಳ ಆಧಾರಿತ ನಿಸ್ಸಾನ್ ಉತ್ಪನ್ನಗಳಿಗೂ ಯೋಜನೆಗಳಿವೆ. ಭಾರತದಲ್ಲಿ ಹೊಸ ಡಸ್ಟರ್ ಬಿಡುಗಡೆಯಾದ ನಂತರ ಅವುಗಳು ಮಾರಾಟಕ್ಕೆ ಬರುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








