ಲಕ್ಷುರಿ ಫೀಚರ್‌ಗಳಿರುವ ಬಿಗ್‌ಸ್ಟರ್ ಎಸ್‌ಯುವಿ ಅನಾವರಣ.. 7-ಸೀಟರ್, ನಮ್ಮಲ್ಲಿ ರೂ.10 ಲಕ್ಷ?

ಫ್ರಾನ್ಸ್ ಮೂಲದ ರೆನಾಲ್ಟ್ (Renault) ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಭಾರತದಲ್ಲಿ ಕೈಗೆಟುಕುವ ಬೆಲೆಗೆ ಕ್ವಿಡ್, ಕಿಗರ್ ಹಾಗೂ ಟ್ರೈಬರ್ ಕಾರುಗಳನ್ನು ಮಾರಾಟ ಮಾಡುತ್ತದೆ. ಇಂದು ರೆನಾಲ್ಟ್ ಒಡೆತನದ ಡೇಸಿಯಾ (Dacia) ಕಂಪನಿ ಜಾಗತಿಕವಾಗಿ ಬಿಗ್‌ಸ್ಟರ್ (Bigster) ಹೆಸರಿನ ಹೊಚ್ಚ ಹೊಸ ಎಸ್‌ಯುವಿಯನ್ನು ಅನಾವರಣ ಮಾಡಿದೆ. ಈ ಹಿಂದೆಯೇ 2025ರಲ್ಲಿ ದೇಶೀಯ ಮಾರುಕಟ್ಟೆಗೆ ನೂತನ ಡಸ್ಟರ್ ಕಾರನ್ನು ಬಿಡುಗಡೆಗೊಳಿಸಲಾಗುವುದು ಎಂದು ರೆನಾಲ್ಟ್ ಘೋಷಣೆ ಮಾಡಿತ್ತು. ನಮ್ಮಲ್ಲಿಯೂ ಇದೇ ಬಿಗ್‌ಸ್ಟರ್ ಎಸ್‌ಯುವಿ ಡಸ್ಟರ್ ರೂಪದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ.

ನೂತನ ಡೇಸಿಯಾ ಬಿಗ್‌ಸ್ಟರ್ (Dacia Bigster) ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು (ಡಿಸೈನ್) ಹೊಂದಿದೆ. ಉತ್ತಮ ಗುಣಮಟ್ಟದ ಎಲ್ಇಡಿ ಹೆಡ್‌ಲೈಟ್‌ಗಳು, ಫಾಗ್ ಲೈಟ್‌ಗಳು, ಸಿಲ್ವರ್ ಸ್ಕಿಡ್ ಪ್ಲೇಟ್, ಸೈಡ್ ಮಿರರ್‌ಗಳಲ್ಲಿ ಟರ್ನ್-ಇಂಡಿಕೇಟರ್‌ಗಳು, ಸಿಲ್ವರ್ ರೂಫ್ ರೈಲ್‌ಗಳು, ಬ್ಲ್ಯಾಕ್ ರೂಫ್, 'ವಿ' ಆಕಾರಕ್ಕೆ ಹೋಲಿಕೆಯಾಗುವ ಎಲ್ಇಡಿ ಟೈಲ್ ಲೈಟ್‌ಗಳು ಮತ್ತು ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿದೆ.

Renault Duster Based Dacia Bigster Suv Globally Unveiled Design Engine And Features Details

ಡೇಸಿಯಾ ಬಿಗ್‌ಸ್ಟರ್ ವಿವಿಧ ಪವರ್‌ಟ್ರೇನ್ ಆಯ್ಕೆಯಲ್ಲಿ ಲಭ್ಯವಿದ್ದು, ಶಕ್ತಿಯುತವಾಗಿರುವ 'ಹೈಬ್ರಿಡ್ 155' ಹೆಸರಿನ ಸ್ಟ್ರಾಂಗ್-ಹೈಬ್ರಿಡ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. ಸದ್ಯ ಈ ಎಂಜಿನ್‌ ಸಾಮರ್ಥ್ಯವೇನು ಎಂಬುದರ ಕುರಿತಂತೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಆದರೆ, ಈ ಪವರ್‌ಟ್ರೇನ್ ಹೊಂದಿರುವ ರೂಪಾಂತರ (ವೇರಿಯೆಂಟ್), 157 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 170 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಮತ್ತೊಂದು 'ಟಿಸಿಇ 140' ಹೆಸರಿನ 1.2-ಲೀಟರ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ (48ವಿ ಮೈಲ್ಡ್-ಹೈಬ್ರಿಡ್ ಸಿಸ್ಟಮ್) ಎಂಜಿನ್, 142 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 230 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಎಫ್‌ಡಬ್ಲ್ಯೂಡಿ (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

Renault Duster Based Dacia Bigster Suv Globally Unveiled Design Engine And Features Details

ಇನ್ನೊಂದು 'ಟಿಸಿಇ 130 4x4' ಹೆಸರಿನ 1.2-ಲೀಟರ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ (48ವಿ ಮೈಲ್ಡ್-ಹೈಬ್ರಿಡ್ ಸಿಸ್ಟಮ್) ಎಂಜಿನ್, 132 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 230 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದ್ದು, 4ಡಬ್ಲ್ಯೂಡಿ (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ.

ಈ ಕಾರು ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು (ಫೀಚರ್) ಪಡೆದುಕೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.1-ಇಂಚು), ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ (10-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಚಾರ್ಜರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಪನೊರೊಮಿಕ್ ಸನ್‌ರೂಫ್‌ ಹಾಗೂ ರೇರ್ ಎಸಿ ವೆಂಟ್‌ಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.

Renault Duster Based Dacia Bigster Suv Globally Unveiled Design Engine And Features Details

ಡೇಸಿಯಾ ಬಿಗ್‌ಸ್ಟರ್ ಎಸ್‌ಯುವಿ 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು 667 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ದೇಶೀಯ ಗ್ರಾಹಕರಿಗೆ ಡಸ್ಟರ್ ಅವತಾರದಲ್ಲಿ ಬರುವ ಈ ಕಾರು, ರೂ.10 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, October 10, 2024, 17:00 [IST]
English summary
Renault duster based dacia bigster suv globally unveiled design engine and features details
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+