Renault: ರೆನಾಲ್ಟ್‌ನಿಂದ ದೊಡ್ಡ ರಿಯಾಯಿತಿ ಘೋಷಣೆ.. 4.69 ಲಕ್ಷಕ್ಕೆ ಹೊಸ ಕಾರು!
ರೆನಾಲ್ಟ್ ಇಂಡಿಯಾ (Renault India), ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ ಈ ಡಿಸೆಂಬರ್‌ನಲ್ಲಿ ಕಂಪನಿಯ ಕಾರುಗಳು ಭಾರೀ ಹಣಕಾಸಿನ ಪ್ರಯೋಜನಗಳನ್ನು ಪಡೆದಿದ್ದು, ಅತಿ ಕಡಿಮೆ ಬೆಲೆಗೆ ಹೊಸದೊಂದು ಕಾರನ್ನು ಸುಲಭವಾಗಿ ಖರೀದಿ ಮಾಡಬಹುದು. ಬನ್ನಿ.. ಯಾವ ಕಾರು ಎಷ್ಟು ರಿಯಾಯಿತಿ ಹೊಂದಿದೆ ಎಂಬುದನ್ನು ತಿಳಿಯೋಣ.
ಮೊದಲಿಗೆ ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿರುವ ರೆನಾಲ್ಟ್ ಕ್ವಿಡ್ (Renault KWID) ಪಡೆದುಕೊಂಡಿರುವ ರಿಯಾಯಿತಿ ಬಗ್ಗೆ ಮಾತನಾಡೋಣ. ಈ ಕಾರು ಒಟ್ಟು ರೂ.45,000 ಹಣಕಾಸಿನ ಪ್ರಯೋಜನವನ್ನು ಹೊಂದಿದೆ. ಅದರಲ್ಲಿ ರೂ. 20,000 ನಗದು ರಿಯಾಯಿತಿ (Cash Discount), ರೂ.15,000 ವಿನಿಮಯ ಪ್ರಯೋಜನ (Exchange Benefit) ಮತ್ತು ರೂ.10,000 ಲಾಯಲ್ಟಿ ನಗದು ಪ್ರಯೋಜನಗಳು (Loyalty Cash Benefit) ಸಹ ಸೇರಿವೆ.

ದೇಶೀಯ ಗ್ರಾಹಕರ ಖರೀದಿಗೆ ಲಭ್ಯವಿರುವ ಹೊಚ್ಚ ಹೊಸ ರೆನಾಲ್ಟ್ ಕ್ವಿಡ್ ಕಾರು, ಕನಿಷ್ಠ ರೂ.4.69 ಲಕ್ಷ ಹಾಗೂ ಗರಿಷ್ಠ ರೂ.6.45 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ. 21.46 ರಿಂದ 22.3 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಈ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್‌ನಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (8-ಇಂಚು), ಕೀಲೆಸ್ ಎಂಟ್ರಿ, 4-ಪವರ್ ವಿಂಡೋಗಳು ಮತ್ತು ಮ್ಯಾನುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರೇರ್ ಪಾರ್ಕಿಂಗ್ ಸೇನಾರ್ಸ್ ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ.

ಪ್ರಖ್ಯಾತ ಎಸ್‌ಯುವಿ ರೆನಾಲ್ಟ್ ಕಿಗರ್ (Renault Kiger) ಕೂಡ ಭಾರಿ ಹಣಕಾಸಿನ ಪ್ರಯೋಜನವನ್ನು ಹೊಂದಿದೆ. ಈ ಕಾರಿಗೆ ಒಟ್ಟಾರೆ ರೂ.75,000 ರಿಯಾಯಿತಿ ನೀಡಲಾಗಿದೆ. ಅದರೊಳಗೆ ರೂ.40,000 ನಗದು ರಿಯಾಯಿತಿ, ರೂ.15,000 ವಿನಿಮಯ ಪ್ರಯೋಜನ ಮತ್ತು ರೂ.20,000 ಲಾಯಲ್ಟಿ ನಗದು ಪ್ರಯೋಜನಗಳು ಸಹ ಸೇರ್ಪಡೆಯಾಗಿವೆ.
ನೂತನ ರೆನಾಲ್ಟ್ ಕಿಗರ್ ಕಾರು, ರೂ.5.99 ಲಕ್ಷದಿಂದ ರೂ.9.29 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 18.24 ರಿಂದ 20.5 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿಯೂ 5 ಜನರು ಓಡಾಟ ನಡೆಸಬಹುದು. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ರೆನಾಲ್ಟ್ ಟ್ರೈಬರ್ (Renault Triber) ಪ್ರಮುಖ ಎಂಪಿವಿಯಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಖರೀದಿದಾರರನ್ನು ಸೆಳೆದಿದೆ. ಇದು ಒಟ್ಟು ರೂ.60,000 ರಿಯಾಯಿತಿ ಹೊಂದಿದೆ. ಇದರಲ್ಲಿ ರೂ.25,000 ನಗದು ರಿಯಾಯಿತಿ, ರೂ.15,000 ವಿನಿಮಯ ಪ್ರಯೋಜನ ಹಾಗೂ ರೂ.20,000 ಲಾಯಲ್ಟಿ ನಗದು ಪ್ರಯೋಜನಗಳು ಕೂಡ ಸೇರಿವೆ.
ಹೊಸ ರೆನಾಲ್ಟ್ ಟ್ರೈಬರ್ ಕಾರು ಕನಿಷ್ಠ ರೂ.5.99 ಲಕ್ಷ ಮತ್ತು ಗರಿಷ್ಠ ರೂ.8.12 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1-ಲೀಟರ್ ಸಾಮರ್ಥ್ಯ ಪೆಟ್ರೋಲ್ ಎಂಜಿನ್ ಮತ್ತು 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ. 8.2 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಈ ಕಾರಿನಲ್ಲಿ 7 ಮಂದಿ ಓಡಾಟ ನಡೆಸಬಹುದು.
ಒಟ್ಟಾರೆಯಾಗಿ ಕ್ವಿಡ್, ಕಿಗರ್ ಹಾಗೂ ಟ್ರೈಬರ್ ಕಾರುಗಳು ದೊಡ್ಡಮಟ್ಟದ ರಿಯಾಯಿತಿ ಪ್ರಯೋಜನ ಹೊಂದಿರುವುದು ಖರೀದಿದಾರರಿಗೆ ಹೆಚ್ಚಿನ ಖುಷಿ ನೀಡಿದೆ. ಅದರಲ್ಲೂ ಈ ಡಿಸೆಂಬರ್‌ನಲ್ಲಿ ಹೊಸ ಕಾರನ್ನು ಮನೆಗೆ ತರಬೇಕು ಅಂದುಕೊಂಡಿರುವವರಿಗೂ ಭಾರೀ ಅನುಕೂಲವಾಗಲಿದೆ. ಜೊತೆಗೆ ಕಂಪನಿಗೂ ಉತ್ತಮ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟಗೊಳಿಸಲು ಸಾಧ್ಯವಾಗಲಿದೆ.


Click it and Unblock the Notifications








