Renault: ಹಬ್ಬಕ್ಕೆ ಗುಡ್‌ನ್ಯೂಸ್.. ಭಾರಿ ರಿಯಾಯಿತಿ, 4.69 ಲಕ್ಷಕ್ಕೆ ನೂತನ ಕಾರು.. ತಿಂಗಳ EMI 6,999ರಿಂದ ಆರಂಭ!
ರೆನಾಲ್ಟ್ ಇಂಡಿಯಾ (Renault India), ಕೈಗೆಟುಕುವ ಬೆಲೆಯ ಕಾರುಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ. ಈ ಅಕ್ಟೋಬರ್ ತಿಂಗಳು ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಜನಪ್ರಿಯ ಕ್ವಿಡ್ (KWID), ಕಿಗರ್ (Kiger) ಹಾಗೂ ಟ್ರೈಬರ್ (Triber) ಕಾರುಗಳ ಮೇಲೆ ದೊಡ್ಡಮಟ್ಟದ ರಿಯಾಯಿತಿ (Discount) ಪ್ರಯೋಜವನ್ನು ಘೋಷಣೆ ಮಾಡಿದೆ. ಈ ಕುರಿತಂತೆ ಅಧಿಕೃತ ವೆಬ್‌ಸೈಟ್‌ನಲ್ಲಿ ಕೂಡ ಸವಿಸ್ತಾರವಾದ ಮಾಹಿತಿಯನ್ನು ಪ್ರಕಟಿಸಿದೆ.
ಮೊದಲಿಗೆ ರೆನಾಲ್ಟ್ ಕ್ವಿಡ್ (Renault KWID) ಹ್ಯಾಚ್‌ಬ್ಯಾಕ್ ಪಡೆದುಕೊಂಡಿರುವ ಹಣಕಾಸಿನ ಪ್ರಯೋಜನದ ಬಗ್ಗೆ ಮಾತನಾಡೋಣ. ಈ ಕಾರು, ಒಟ್ಟು 40,000ವರೆಗೆ ರಿಯಾಯಿತಿ ಹೊಂದಿದೆ. ಅದರಲ್ಲಿ ರೂ.15,000ವರೆಗೆ ನಗದು ಪ್ರಯೋಜನ (Cash Benefit), ರೂ.15,000ವರೆಗೆ ವಿನಿಮಯ ಪ್ರಯೋಜನ (Exchange Benefit) ಹಾಗೂ ರೂ.10,000ವರೆಗೆ ಲಾಯಲ್ಟಿ ನಗದು ಪ್ರಯೋಜನ (Loyalty Cash Benefit) ಸೇರಿದೆ. ಜೊತೆಗೆ ರೂ.6,999ರಿಂದ ಇಎಂಐ ಆಯ್ಕೆ ಶುರುವಾಗುತ್ತದೆ.

ಸದ್ಯ, ದೇಶೀಯವಾಗಿ ಖರೀದಿಗೆ ದೊರೆಯುವ ನೂತನ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ರೂ.4.69 ಲಕ್ಷದಿಂದ ರೂ.6.45 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1-ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 21.46 ರಿಂದ 22.3 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.
ರೆನಾಲ್ಟ್ ಕಿಗರ್ (Renault Kiger) ಜನಪ್ರಿಯ ಎಸ್‌ಯುವಿಯಾಗಿದೆ. ಈ ಕಾರು ಬರೋಬ್ಬರಿ ರೂ.60,000ವರೆಗೆ ಹಣಕಾಸಿನ ಪ್ರಯೋಜನವನ್ನು ಪಡೆದಿದೆ. ಈ ರಿಯಾಯಿತಿಯಲ್ಲಿ ರೂ.25,000ವರೆಗೆ ನಗದು ಪ್ರಯೋಜನ, ರೂ.15,000ವರೆಗೆ ವಿನಿಮಯ ಪ್ರಯೋಜನ ಮತ್ತು ರೂ.20,000 ಲಾಯಲ್ಟಿ ನಗದು ಪ್ರಯೋಜನಗಳನ್ನು ಹೊಂದಿದೆ. ಕಿಗರ್ ಕಾರಿನ ಇಎಂಐ ರೂ.8,999ರಿಂದ ಆರಂಭವಾಗುತ್ತದೆ.

ಹೊಸ ರೆನಾಲ್ಟ್ ಕಿಗರ್ ಎಸ್‌ಯುವಿ, ರೂ.5.99 ಲಕ್ಷದಿಂದ ರೂ.11.23 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. ಈ ಕಾರಿನಲ್ಲಿಯೂ 5 ಜನರು ಓಡಾಟ ನಡೆಸಬಹುದು. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ರೆನಾಲ್ಟ್ ಟ್ರೈಬರ್ (Renault Triber) ಪ್ರಮುಖ ಎಂಪಿವಿಯಾಗಿದೆ. ಒಟ್ಟು ರೂ.50,000ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಇದರಲ್ಲಿ 15,000 ವರೆಗೆ ನಗದು ಪ್ರಯೋಜನ, ರೂ.15,000ವರೆಗೆ ವಿನಿಮಯ ಪ್ರಯೋಜನ ಹಾಗೂ ರೂ.20,000 ಲಾಯಲ್ಟಿ ನಗದು ಪ್ರಯೋಜನವನ್ನು ಒಳಗೊಂಡಿದೆ. ಈ ಕಾರಿನ ಇಎಂಐ ರೂ.8,999ರಿಂದ ಪ್ರಾರಂಭವಾಗುತ್ತದೆ.

ಈ ರೆನಾಲ್ಟ್ ಟ್ರೈಬರ್ ಎಂಪಿವಿ ರೂ.5.99 ಲಕ್ಷದಿಂದ ರೂ.8.97 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದ್ದು, 18.2 ರಿಂದ 20 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ನಿಮ್ಮ ಗಮನಕ್ಕೆ.. ಈ ರಿಯಾಯಿತಿ ಪ್ರಯೋಜನಗಳು ಅಕ್ಟೋಬರ್ 31ರವರೆಗೆ ಮಾತ್ರ ಮಾನ್ಯವಾಗಿರಲಿದೆ. ಹೆಚ್ಚಿನ ಮಾಹಿತಿ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








