ರೆನಾಲ್ಟ್ ಕ್ವಿಡ್, ಕೈಗರ್, ಟ್ರೈಬರ್‌ನ ನೈಟ್ & ಡೇ ಲಿಮಿಟೆಡ್ ಎಡಿಷನ್ ಕಾರುಗಳ ವಿಡಿಯೋ
ರೆನಾಲ್ಟ್ ತನ್ನ ಮೂರು ಕಾರು ಮಾದರಿಗಳಾದ ಕ್ವಿಡ್, ಕೈಗರ್ ಮತ್ತು ಟ್ರೈಬರ್‌ನ ಲಿಮಿಟೆಡ್ ರನ್ ಎಡಿಷನ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದನ್ನು "ನೈಟ್ & ಡೇ ಎಡಿಷನ್" ಎಂದು ಕರೆಯಲಾಗುತ್ತದೆ. ಈ ಆವೃತ್ತಿಯು ಬ್ಲಾಕ್ ರೂಫ್‌ನೊಂದಿಗೆ ಪರ್ಲ್ ವೈಟ್ ಬಣ್ಣದ ಜೊತೆಗೆ ಹೊರಭಾಗದಲ್ಲಿ ಬ್ಲಾಕ್ ಹೈಲೈಟ್‌ಗಳನ್ನು ಹೊಂದಿದೆ. ಎಲ್ಲಾ ಮೂರು ಮಾದರಿಗಳಲ್ಲಿ ನೈಟ್ & ಡೇ ಎಡಿಷನ್‌ನ 1,600 ಯುನಿಟ್ ಕಾರುಗಳು ಮಾತ್ರ ಖರೀದಿಗೆ ಲಭ್ಯವಿರುತ್ತವೆ. ಈ ಕಾರುಗಳ ಕುರಿತು ವಿವರವಾದ ಮಾಹಿತಿ ನೀಡಲು ನಮ್ಮ ಡ್ರೈವ್‌ಸ್ಪಾರ್ಕ್ ತಂಡ ವಿಡಿಯೋವನ್ನು ನಿಮಗಾಗಿ ತಂದಿದೆ.
ರೆನಾಲ್ಟ್ ಕ್ವಿಡ್‌ನ ನೈಟ್ & ಡೇ ಆವೃತ್ತಿಯು ಮಿಡ್-ಸ್ಪೆಕ್ RXL(0) ವೇರಿಯೆಂಟ್ ಅನ್ನು ಆಧರಿಸಿದ್ದರೇ, ಕೈಗರ್ ಮತ್ತು ಟ್ರೈಬರ್‌ನ ಆವೃತ್ತಿಯು ಅವುಗಳ ಮೂಲ RXL ವೇರಿಯೆಂಟ್ ಅನ್ನು ಆಧರಿಸಿವೆ. ಪರ್ಲ್ ವೈಟ್ ಮತ್ತು ಬ್ಲಾಕ್ ಡ್ಯುಯಲ್-ಟೋನ್ ಬಾಹ್ಯ ಬಣ್ಣವನ್ನು ಹೊರತುಪಡಿಸಿ, ರೆನಾಲ್ಟ್ ಕಾರುಗಳ ಈ ಆವೃತ್ತಿಯು ಪಿಯಾನೋ ಬ್ಲ್ಯಾಕ್ ಗ್ರಿಲ್, ವ್ಹೀಲ್ ಕವರ್ ಮತ್ತು ನೇಮ್‌ಪ್ಲೇಟ್ ಹೊಂದಿದೆ.
ಕೈಗರ್ ಮತ್ತು ಟ್ರೈಬರ್ ಸಹ ಪಿಯಾನೋ ಬ್ಲಾಕ್ ಒಆರ್‌ವಿಎಂಗಳನ್ನು ಸಹ ಪಡೆದಿದೆ, ಮೊದಲನೆಯದು ಬ್ಲಾಕ್ ಟೈಲ್ ಗೇಟ್ ಅಲಂಕಾರದೊಂದಿಗೆ ಬರುತ್ತದೆ. ರೆನಾಲ್ಟ್ ಕೈಗರ್ ಮತ್ತು ಟ್ರೈಬರ್‌ನ ಸೀಮಿತ ರನ್ ಆವೃತ್ತಿಯು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಹೊಂದಿರುವ 9 ಇಂಚಿನ ಟಚ್ ಸ್ಕ್ರೀನ್ ಮತ್ತು ರಿಯರ್ ವ್ಯೂ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಕ್ವಿಡ್‌ನ ನೈಟ್ & ಡೇ ಆವೃತ್ತಿಯಲ್ಲಿರುವ ಇನ್‌ಸ್ಟ್ರೂಮೆಂಟ್ ಲಿಸ್ಟ್ ಅದರ ಸಾಮಾನ್ಯ ರೂಪಾಂತರದಂತೆಯೇ ಇದೆ. ಇದು 8 ಇಂಚಿನ ಟಚ್ ಸ್ಕ್ರೀನ್, ಫ್ರಂಟ್ ಪವರ್ ವಿಂಡೋಗಳು ಮತ್ತು ಮ್ಯಾನುವಲ್ ಎಸಿಯನ್ನು ಒಳಗೊಂಡಿದೆ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ.

ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








