ಜನಪ್ರಿಯ ರೆನಾಲ್ಟ್ ಕಾರುಗಳ ನೈಟ್ & ಡೇ ಲಿಮಿಟೆಡ್ ಎಡಿಷನ್ ಬಿಡುಗಡೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ (Renault) ತನ್ನ ಕಿಗರ್, ಟ್ರೈಬರ್ ಮತ್ತು ಕ್ವಿಡ್ ಮಾದರಿಗಳಿಗಾಗಿ ನೈಟ್ ಮತ್ತು ಡೇ ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಲಿಮಿಟೆಡ್ ಮತ್ತು ಎಡಿಷನ್ ಮಾದರಿಗಳು ಡ್ಯುಯಲ್-ಟೋನ್ ಬಾಹ್ಯ ಮತ್ತು ಹೊಸ ವೈಶಿಷ್ಟ್ಯಗಳನ್ನು ಹೊಂದಿವೆ. ಈ ಹೊಸ ಸ್ಪೆಷಲ್ ಎಡಿಷನ್ ಮಾದರಿಗಳು ಸೊಗಸಾದ ವಿನ್ಯಾಸದ ಜೊತೆ ಆಧುನಿಕ ವೈಶಿಷ್ಟ್ಯಗಳೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ರೆಡಿಯಾಗಿದೆ. ಹಬ್ಬದ ಸೀಸನ್ ನಲ್ಲಿ ನೈಟ್ ಮತ್ತು ಡೇ (Night & Day) ಎಡಿಷನ್ ಮಾದರಿಗಳು ಮಾರಾಟದಲ್ಲಿ ಹೆಚ್ಚಿನ ಕೊಡುಗೆ ನೀಡಲು ಸಹಕಾರವಾಗುತ್ತದೆ.
ರೆನಾಲ್ಟ್ ಕ್ವಿಡ್ ನೈಟ್ ಮತ್ತು ಡೇ ಆವೃತ್ತಿಯು ರೂ.4.99 ಲಕ್ಷ ಬೆಲೆಗೆ (ಎಕ್ಸ್ ಶೋರೂಂ) ಲಭ್ಯವಿದೆ. ಇದು ಕ್ವಿಡ್ ಆರ್‌ಎಕ್ಸ್‌ಎಲ್ (ಒ) ಮ್ಯಾನುಯಲ್ ಆವೃತ್ತಿಯ ಬೆಲೆಯನ್ನು ಆಧರಿಸಿದೆ. ನೈಟ್ ಮತ್ತು ಡೇ ಕಿಗರ್ ಆವೃತ್ತಿಯ ಮ್ಯಾನುಯಲ್ ಆವೃತ್ತಿ ಬೆಲೆಯು ರೂ.6.75 ಲಕ್ಷವಾದರೆ, ಆಟೋಮ್ಯಾಟಿಕ್ ಆವೃತ್ತಿಯ ಬೆಲೆಯು ರೂ. 7.25 ಲಕ್ಷವಾಗಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಇದು RXL ರೂಪಾಂತರಗಳಿಗಿಂತ 15,000 ಹೆಚ್ಚು ದುಬಾರಿಯಾಗಿದೆ.

ಇನ್ನು ರೆನಾಲ್ಟ್ ಟ್ರೈಬರ್ ನೈಟ್ ಮತ್ತು ಡೇ ಆವೃತ್ತಿಯು RXL ಆವೃತ್ತಿಯನ್ನು ಆಧರಿಸಿದೆ. ಈ ನೈಟ್ ಮತ್ತು ಡೇ ಆವೃತ್ತಿಯ ಇದರ ರೂ.7 ಲಕ್ಷವಾಗಿದೆ. ಇದು RXL ಆವೃತ್ತಿಗಿಂತ 20,000 ಹೆಚ್ಚು ದುಬಾರಿಯಾಗಿದೆ. ಈ ಎಲ್ಲಾ ಕಾರುಗಳು ಮಿಸ್ಟರಿ ಬ್ಲ್ಯಾಕ್ ರೂಫ್ ಜೊತೆಗೆ ಡ್ಯುಯಲ್ ಟೋನ್ ಮಾಡುವ ವಿಶೇಷವಾದ ಪರ್ಲ್ ವೈಟ್ ಬಾಡಿ ಬಣ್ಣದಲ್ಲಿ ಲಭ್ಯವಿವೆ.
ಇತರ ಕಾಸ್ಮೆಟಿಕ್ ಬದಲಾವಣೆಗಳಲ್ಲಿ ಪಿಯಾನೋ ಬ್ಲ್ಯಾಕ್ ಗ್ರಿಲ್, ವ್ಹೀಲ್ ಕವರ್‌ಗಳು, ನೇಮ್ ಪ್ಲೇಟ್ ಗಳು ಮತ್ತು ORVM ಗಳು ಸೇರಿವೆ. ಕಿಗರ್‌ನಲ್ಲಿನ ಟೈಲ್‌ಗೇಟ್ ಅಲಂಕರಣವನ್ನು ಸಹ ಪಿಯಾನೋ ಬ್ಲ್ಯಾಕ್ ಬಣ್ಣದಲ್ಲಿ ಪೂರ್ಣಗೊಳಿಸಲಾಗಿದೆ. ಒಟ್ಟಾರೆಯಾಗಿ ಈ ಸ್ಪೆಷಲ್ ಎಡಿಷನ್ ಮಾದರಿಗಳು ಆಕರ್ಷಕ ವಿನ್ಯಾಸವನ್ನು ಹೊಂದಿದೆ.
ಕಿಗರ್ ಮತ್ತು ಟ್ರೈಬರ್‌ನಲ್ಲಿನ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ಇವುಗಳಲ್ಲಿ ವೈರ್‌ಲೆಸ್ ಸ್ಮಾರ್ಟ್‌ಫೋನ್ ರೆಪ್ಲಿಕೇಶನ್‌ನೊಂದಿಗೆ ಒಂಬತ್ತು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ರಿಯರ್-ವ್ಯೂ ಕ್ಯಾಮೆರಾ ಇದೆ. ಇನ್ನು ರೆನಾಲ್ಟ್ ಟ್ರೈಬರ್ ನೈಟ್ ಮತ್ತು ಡೇ ಆವೃತ್ತಿಯು ಹೆಚ್ಚುವರಿಯಾಗಿ ಹಿಂಭಾಗದಲ್ಲಿ ಪವರ್ ವಿಂಡೋಗಳನ್ನು ಪಡೆಯುತ್ತದೆ.
ರೆನಾಲ್ಟ್ ಕಿಗರ್, ಟ್ರೈಬರ್ ಮತ್ತು ಕ್ವಿಡ್ ನೈಟ್ & ಡೇ ಆವೃತ್ತಿಗಳ ಖರೀದಿಗಾಗಿ ಬುಕ್ಕಿಂಗ್ ಅನ್ನು ಸೆಪ್ಟೆಂಬರ್ 17 (ನಾಳೆ) ಭರತದ ಎಲ್ಲಾ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಪ್ರಾರಂಭವಾಗುತ್ತದೆ. ಅದರ ಸೀಮಿತ ಲಭ್ಯತೆಯಿಂದಾಗಿ, ಆಸಕ್ತ ಖರೀದಿದಾರರು ತಮ್ಮ ವಾಹನವನ್ನು ನಾಳೆಯೇ ಬುಕ್ ಮಾಡುವುದು ಉತ್ತಮ. ಲಿಮಿಟೆಡ್ ಎಡಿಷನ್ ಎಲ್ಲಾ ಮಾದರಿಗಳ ಒಟ್ಟು 1,600 ಯುನಿಟ್ ಗಳನ್ನು ಮಾತ್ರ ನೀಡಲಾಗುತ್ತದೆ.
ರೆನಾಲ್ಟ್ ಇಂಡಿಯಾದ ಕಂಟ್ರಿ ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ವೆಂಕಟರಾಮ್ ಅವರು ಮಾತನಾಡಿ, ಇದು ನಮ್ಮ ಹೊಸ-ಯುಗದ ಗ್ರಾಹಕರಿಗೆ ಮಾತ್ರವಲ್ಲದೆ ನಮ್ಮ ವಿತರಕರು ಮತ್ತು ಉದ್ಯೋಗಿಗಳಿಗೆ ರೋಮಾಂಚನಕಾರಿ ಪ್ರಕಟಣೆಯಾಗಿದೆ. ಇನ್ನು ಈ ಹೊಸ ಸೀಮಿತ ಆವೃತ್ತಿಯು ನಮ್ಮ ಬೆಳೆಯುತ್ತಿರುವ ರೆನಾಲ್ಟ್ ಕುಟುಂಬಕ್ಕೆ ಹೆಚ್ಚಿನ ಗ್ರಾಹಕರನ್ನು ಸ್ವಾಗತಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








