ಕಾರು ಖರೀದಿಸುವ ಕನಸಿದೆಯೇ? ಕೇವಲ 4.70 ಲಕ್ಷಕ್ಕೆ ಹೊಸ ಕಾರು, 22 ಕಿ.ಮೀ ಮೈಲೇಜ್!

ಭಾರತದಲ್ಲಿ ಸಣ್ಣ ಕಾರುಗಳಿಗೆ ಭಾರೀ ಬೇಡಿಕೆ ಇದೆ, ಪ್ರತಿಯೊಬ್ಬರಿಗು ಕಾರು ಖರೀದಿಸುವ ಕನಸಿರುವುದರಿಂದ ಅವರೆಲ್ಲರ ಆಸೆಗಳನ್ನು ಈ ಮೈಕ್ರೋ ಎಸ್‌ಯುವಿಗಳು ನನಸಾಗಿಸುತ್ತವೆ. ಮಾರುತಿ ಸುಜುಕಿ ಆಲ್ಟೊ ಕೆ10, ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಹಾಗೂ ಟಾಟಾ ಟಿಯಾಗೊನಂತಹ ಕಾರುಗಳು ಅಗ್ಗದ ಬೆಲೆಯಲ್ಲಿ ಲಭ್ಯವಿರುವುದರಿಂದ ಭಾರತದಲ್ಲಿ ಇವು ಉತ್ತಮ ಮಾರಾಟ ಕಾಣುತ್ತವೆ. ಇದೇ ಸಾಲಿನಲ್ಲಿ ಬರುವ ಮತ್ತೊಂದು ಸ್ಟೈಲಿಷ್ ಹಾಗೂ ಪುಟ್ಟ ಫ್ಯಾಮಿಲಿ ಕಾರಾದ ರೆನಾಲ್ಟ್ ಕ್ವಿಡ್ ಮೈಕ್ರೋ ಎಸ್‌ಯುವಿ ಸದ್ಯ ಭಾರೀ ಸದ್ದು ಮಾಡುತ್ತಿದೆ. ಈ ಕಾರಿನ ಬೆಲೆ, ವೈ‍ಶಿಷ್ಟ್ಯಗಳು, ಎಂಜಿನ್‌ ವಿವರಗಳನ್ನು ಇಲ್ಲಿ ನೋಡೋಣ.

ಬೆಲೆ: ಭಾರತದಲ್ಲಿ ಹೊಸ ರೆನಾಲ್ಟ್ ಕ್ವಿಡ್ ಬೆಲಯು ರೂ.4.70 ಲಕ್ಷದಿಂದ ಆರಂಭವಾಗಿ ರೂ.6.45 ಲಕ್ಷ (ಎಕ್ಸ್ ಶೋರೂಂ)ಗಳವೆರೆಗೆ ಇದೆ. ಬೆಂಗಳೂರಿನಲ್ಲಿ ಇದರ ಆನ್‌ರೋಡ್‌ ಬೆಲೆಯ ವಿಷಯಕ್ಕೆ ಬಂದರೆ ಬೇಸ್ ಮಾಡೆಲ್ ರೂ.5.63 ಲಕ್ಷದಿಂದ ಆರಂಭವಾಗುತ್ತದೆ. ಟಾಪ್ ಎಂಡ್ ಮಾದರಿಯಾದ ಕ್ಲೈಂಬರ್ ಡಿಟಿ ಎಎಂಟಿ ಮಾದರಿಯು ರೂ.7.77 ಲಕ್ಷ ಆನ್‌ರೋಡ್ ಬೆಲೆಯಿದೆ.

renault-kwid-price-features-variants-engine-details

ವೇರಿಯೆಂಟ್ ಹಾಗೂ ಬಣ್ಣಗಳು: ರೆನಾಲ್ಟ್ ಕ್ವಿಡ್ ಕಾರು ಆರ್ಎಕ್ಸ್ಇ, ಆರ್ಎಕ್ಸ್ಎಲ್ (ಒ), ಆರ್ಎಕ್ಸ್‌ಟಿ ಮತ್ತು ಕ್ಲೈಂಬರ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಗ್ರಾಹಕರು ರೆನಾಲ್ಟ್ ಕ್ವಿಡ್ ಅನ್ನು ಐದು ಮೊನೊಟೋನ್ ಮತ್ತು ಐದು ಡ್ಯುಯಲ್ - ಟೋನ್ ಬಣ್ಣಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು.

ಎಂಜಿನ್: ರೆನಾಲ್ಟ್ ಕ್ವಿಡ್ 1 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 68 ಪಿಎಸ್ ಪವರ್ ಹಾಗೂ 91 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ 5-ಸ್ಪೀಡ್ ಎಎಂಟಿಯೊಂದಿಗೆ ಲಭ್ಯವಿದೆ. ರೂಪಾಂತರಗಳಿಗೆ ಅನುಗುಣವಾಗಿ 21.46 ರಿಂದ 22.3 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

renault-kwid-price-features-variants-engine-details

ವೈಶಿಷ್ಟ್ಯಗಳು & ಸುರಕ್ಷತೆ: ಪ್ರಮುಖ ವೈಶಿಷ್ಟ್ಯಗಳಲ್ಲಿ 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಕೀಲೆಸ್ ಎಂಟ್ರಿ ಮತ್ತು ಮ್ಯಾನುವಲ್ ಎಸಿ ಸೇರಿವೆ. ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ(ಇಎಸ್‌ಪಿ), ಹಿಲ್ ಸ್ಟಾರ್ಟ್ ಅಸಿಸ್ಟ್, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್(ಟಿಪಿಎಂಎಸ್), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್(ಟಿಸಿಎಸ್) ಅನ್ನು ಹೊಂದಿದೆ.

ಪ್ರತಿಸ್ಪರ್ಧಿಗಳು: ಸಣ್ಣ ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ರೆನಾಲ್ಟ್ ಕ್ವಿಡ್ ಕ್ಲೈಂಬರ್ ವೇರಿಯೆಂಟ್ ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್ಟರ್ ಮೈಕ್ರೋ ಎಸ್‌ಯುವಿಗಳ ಕಡಿಮೆ-ಸ್ಪೆಕ್ ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಹಾಗೆಯೇ ಮಾರುತಿ ಆಲ್ಟೋ ಕೆ 10 ಮತ್ತು ಮಾರುತಿ ಸುಜುಕಿ ಎಸ್-ಪ್ರೆಸ್ಸೊಗೆ ನೇರ ಪೈಪೋಟಿ ನೀಡುತ್ತದೆ.

renault-kwid-price-features-variants-engine-details

ಕಾರು ಖರೀದಿಸಬೇಕೆಂಬ ಮಧ್ಯಮ ವರ್ಗದ ಕುಟುಂಬಗಳಿಗೆ ಕಡಿಮೆ ದರದ ಡೌನ್‌ಪೇಮೆಂಟ್ ಹಾಗೂ ಇಎಂಐ ಆಯ್ಕೆ ಕೂಡ ಲಭ್ಯವಿದೆ. ನೀವು ಈ ಕಾರನ್ನು ರೂ.56,000 ಡೌನ್ ಪೇಮೆಂಟ್ ಪಾವತಿಸಿ ಶೇಕಡ 9.8% ಬಡ್ಡಿ ದರದಲ್ಲಿ ತಿಂಗಳಿಗೆ ರೂ.10,735 ಇಎಂಐ (EMI) ಕಟ್ಟಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೆನಾಲ್ಟ್ ಡೀಲರ್‌ಗಳನ್ನು ಸಂಪರ್ಕಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, September 12, 2024, 10:33 [IST]
English summary
Renault kwid price features variants engine details
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+