Renault triber: 6 ಲಕ್ಷಕ್ಕೆ ಬೆಸ್ಟ್‌ 7-ಸೀಟರ್ ಕಾರು: ಗರಿಷ್ಟ ಸುರಕ್ಷತೆ, ಅತ್ಯುತ್ತಮ ಮೈಲೇಜ್!

ರೆನಾಲ್ಟ್ ಕಂಪನಿ ನೀಡುವ ಅತ್ಯುತ್ತಮ ಬಜೆಟ್ ಬೆಲೆಯ ಕಾರುಗಳುಗಳಲ್ಲಿ ಟ್ರೈಬರ್ (Renault triber) ಕೂಡ ಒಂದು. ಕೇವಲ 6 ಲಕ್ಷ ರೂ. ಬೆಲೆಗೆ 7 ಸೀಟರ್ ಕಾರು ಸಿಗುತ್ತದೆ ಎಂದರೆ ಅದು ಟ್ರೈಬರ್ ಮಾತ್ರ. ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುತ್ತದೆ. ಈ ಕಾರು ನಾಲ್ಕು ವೇರಿಯೆಂಟ್‌ಗಳನ್ನು ಹೊಂದಿದ್ದು, ಇದರ ಬೇಸ್ ವೆರಿಯೆಂಟ್ ಪೆಟ್ರೋಲ್ ಮ್ಯಾನ್ಯುವಲ್‌ ಬೆಲೆಯು ರೂ.6 ಲಕ್ಷದಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗುತ್ತದೆ. ಟಾಪ್-ಸ್ಪೆಕ್ ಎಎಮ್‌ಟಿ ವೇರಿಯೆಂಟ್ ಬೆಲೆಯು ರೂ.8.98 ಲಕ್ಷ (ಎಕ್ಸ್ ಶೋ ರೂಂ) ಇದೆ.

ರೆನಾಲ್ಟ್ ಟ್ರೈಬರ್ ಸಾಮಾನ್ಯ ಕಾರುಗಳಲ್ಲಿ ಕಂಡುಬರುವ ಉತ್ತಮ ವೈಶಿಷ್ಟ್ಯಗಳಿಂದ ತುಂಬಿದೆ. ವೈಶಿಷ್ಟ್ಯಗಳಲ್ಲಿ ರಾಜಿ ಮಾಡಿಕೊಳ್ಳದೆ ನಿಮಗೆ ವಿಶಾಲವಾದ ಮತ್ತು ಮಿತವ್ಯಯದ 7-ಸೀಟರ್ ಕಾರು ಬೇಕಾದರೆ, ರೆನಾಲ್ಟ್ ಟ್ರೈಬರ್ ಪರಿಪೂರ್ಣ ಆಯ್ಕೆಯಾಗಿದೆ. ಈ ಕಾಂಪ್ಯಾಕ್ಟ್ ಎಂಪಿವಿ ಬಹುಮುಖತೆ, ಶೈಲಿ ಮತ್ತು ಮೌಲ್ಯದೊಂದಿಗೆ ರೆಡಿಮೇಡ್ ಪ್ಯಾಕೇಜ್ ಆಗಿ ಬರುತ್ತದೆ.

renault-triber-7-seater-mpv-price-features-engine-details

ಇದರಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜೊತೆಗೆ ಆಕರ್ಷಕ 17-ಇಂಚಿನ ಅಲಾಯ್ ವೀಲ್‌ಗಳು, 8-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸ್ಮಾರ್ಟ್ ಫೋನ್ ಸಂಪರ್ಕ ಮತ್ತು ಸ್ಮಾರ್ಟ್ ಕಂಟ್ರೋಲ್‌ಗಳನ್ನು ಪಡೆದುಕೊಂಡಿದೆ.

ರೆನಾಲ್ಟ್ ಟ್ರೈಬರ್ ಅನ್ನು 1-ಲೀಟರ್ NA 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಈ ಎಂಜಿನ್ 72 PS ಪವರ್ ಮತ್ತು 96 Nm ಟಾರ್ಕ್ ಹೊರಹಾಕುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಗೆ ಜೋಡಿಸಲ್ಪಟ್ಟಿರುತ್ತದೆ. ಮೈಲೇಜ್ ವಿಷಯಕ್ಕೆ ಬಂದರೆ ಮ್ಯಾನುವಲ್‌ನಲ್ಲಿ 17.65 kmpl ಮತ್ತು ಆಟೋಮ್ಯಾಟಿಕ್‌ನಲ್ಲಿ 14.83 kmpl ಮೈಲೇಜ್ ನೀಡುತ್ತದೆ.

renault-triber-7-seater-mpv-price-features-engine-details

ಇದರ 1.0-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್, ಅದ್ಭುತ ಪರ್ಫಾಮೆನ್ಸ್ ಜೊತೆಗೆ ಸುಗಮ ಮತ್ತು ಪರಿಣಾಮಕಾರಿ ಚಾಲನೆಯನ್ನು ನೀಡುತ್ತದೆ. ಇದರ ಮಾಡ್ಯುಲರ್ ಸೀಟಿಂಗ್ ವ್ಯವಸ್ಥೆ, ನಿಮ್ಮ ಅಗತ್ಯಗಳಿಗೆ ತಕ್ಕಂತೆ ಒಳಾಂಗಣವನ್ನು ಯಾವುದೇ ಮೋಡ್‌ನಲ್ಲಿ ಕಾನ್ಫಿಗರ್ ಮಾಡಲು ಅನುವು ಮಾಡಿಕೊಡುತ್ತದೆ, ಇದು ನಿಮ್ಮ ದೊಡ್ಡ ಕುಟುಂಬವನ್ನು ಸಾಗಿಸಲು ಸೂಕ್ತವಾದ ಕಾರಾಗಿದೆ.

ಹಣಕ್ಕೆ ತಕ್ಕ ವೆರಿಯೆಂಟ್ ಯಾವುದು?: ರೆನಾಲ್ಟ್ ಟ್ರೈಬರ್‌ನ RXT ಅತ್ಯುತ್ತಮ ವೆರಿಯೆಂಟ್ ಎಂದು ಪರಿಗಣಿಸಬಹುದು. ಇದು 8-ಇಂಚಿನ ಟಚ್‌ಸ್ಕ್ರೀನ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್ಸ್ ಮತ್ತು ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳಂತಹ ಎಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.

renault-triber-7-seater-mpv-price-features-engine-details

ಒಟ್ಟಾರೆ 7 ಸೀಟರ್ ಕಾರುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬೇಕು, ಹೆಚ್ಚುವರಿ ಸಾಮಾನುಗಳನ್ನು ಇಡಲು ಕಾರಿನಲ್ಲಿ ಸ್ಥಳಾವಕಾಶ ಬೇಕು, ಚಾಲಕನಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಪೂರೈಸುವ ಒಂದು ಕಾರು ಬೇಕೆಂದು ನೋಡುವವರಿಗೆ ರೆನಾಲ್ಟ್ ಟ್ರೈಬರ್ ಪರಿಪೂರ್ಣ ಆಯ್ಕೆಯಾಗಿದೆ. ಹಾಗೆಯೇ ದೂರದ ಪ್ರಯಾಣ ಬಯಸುವ ಹೊಸ ಗ್ರಾಹಕರ ಅಗತ್ಯತೆಗಳನ್ನು ಕೂಡ ಇದು ಪೂರೈಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, November 20, 2024, 18:29 [IST]
English summary
Renault triber 7 seater mpv price features engine details
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+