ಕೇವಲ ರೂ.6 ಲಕ್ಷ ಬೆಲೆಯಲ್ಲಿ ಬೆಸ್ಟ್ 7-ಸೀಟರ್ ಕಾರು: ಅತ್ಯುತ್ತಮ ಮೈಲೇಜ್, ಗರಿಷ್ಟ ಸುರಕ್ಷತೆ!
ಭಾರತದಲ್ಲಿ 7-ಸೀಟರ್ ಕಾರುಗಳಿಗೆ ಭಾರೀ ಬೇಡಿಕೆ ಇದೆ. ಮಾರುತಿ ಎರ್ಟಿಗಾ ಸದ್ಯ ಬಜೆಟ್ ಬೆಲೆಯ 7-ಸೀಟರ್ ಕಾರು ವಿಭಾಗದಲ್ಲಿ ಉತ್ತಮ ಮಾರಾಟ ಕಾಣುತ್ತಿರುವ ಕಾರಾಗಿದೆ. ಆದ್ರೆ ಇದಕ್ಕೆ ಪೈಪೋಟಿ ನೀಡುವ ಮತ್ತೊಂದು 7-ಸೀಟರ್ ಕಾರಿನ ಬಗ್ಗೆ ಹಲವರಿಗೆ ತಿಳಿದಿಲ್ಲ. ಅದೇ ರೆನಾಲ್ಟ್ ಟ್ರೈಬರ್ (Renault triber) ಇದು 7-ಆಸನಗಳೊಂದಿಗೆ ಆರಾಮದಾಯಕ ಪ್ರಯಾಣ ಅನುಭವ ನೀಡುವಲ್ಲಿ ಮೆಚ್ಚುಗೆ ಪಡೆದಿದೆ. ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಹೊಂದಿರುವುದರಿಂದ ಇತ್ತಿಚಿನ ದಿನಗಳಲ್ಲಿ ಎರ್ಟಿಗಾಗೆ ಭಾರೀ ಪೈಪೋಟಿ ನೀಡುತ್ತಿದೆ. ಈ ಕಾರಿನ ಬೆಲೆ ಹಾಗೂ ವಿಶೇಷತೆಗಳ ಬಗ್ಗೆ ಇಲ್ಲಿ ತಿಳಿಯೋಣ.
ವೇರಿಯೆಂಟ್ ಮತ್ತು ಬೆಲೆ: ರೆನಾಲ್ಟ್ ಟ್ರೈಬರ್ RXE, RXL, RXT ಮತ್ತು RXZ ಎಂಬ ನಾಲ್ಕು ವೇರಿಯೆಂಟ್‌ಗಳನ್ನು ಹೊಂದಿದೆ. ಇದರ ಬೇಸ್ ವೆರಿಯೆಂಟ್ ಪೆಟ್ರೋಲ್ ಮ್ಯಾನ್ಯುವಲ್ ಬೆಲೆಯು ರೂ.6 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಟಾಪ್-ಸ್ಪೆಕ್ ಎಎಮ್‌ಟಿ ವೇರಿಯೆಂಟ್ ಬೆಲೆಯು ರೂ.8.98 ಲಕ್ಷ (ಎಕ್ಸ್ ಶೋ ರೂಂ) ಇದೆ.

ಎಂಜಿನ್: ರೆನಾಲ್ಟ್ ಟ್ರೈಬರ್ ಅನ್ನು 1-ಲೀಟರ್ NA 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಈ ಎಂಜಿನ್ 72 PS ಪವರ್ ಮತ್ತು 96 Nm ಟಾರ್ಕ್ ಹೊರಹಾಕುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಗೆ ಜೋಡಿಸಲ್ಪಟ್ಟಿರುತ್ತದೆ. ಮೈಲೇಜ್ ವಿಷಯಕ್ಕೆ ಬಂದರೆ ಮ್ಯಾನುವಲ್‌ನಲ್ಲಿ 17.65 kmpl ಮತ್ತು ಆಟೋಮ್ಯಾಟಿಕ್‌ನಲ್ಲಿ 14.83 kmpl ಮೈಲೇಜ್ ನೀಡುತ್ತದೆ.
ಸುರಕ್ಷತೆ: ಸುರಕ್ಷತೆಯ ವಿಷಯದಲ್ಲಿ, ಟ್ರೈಬರ್ ನಾಲ್ಕು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಸ್ಟಾರ್ಟ್ ಅಸಿಸ್ಟ್ (HSA), ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್‌ವ್ಯೂ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆದಿದೆ.

ಹಣಕ್ಕೆ ತಕ್ಕ ವೆರಿಯೆಂಟ್ ಯಾವುದು?: ರೆನಾಲ್ಟ್ ಟ್ರೈಬರ್‌ನ RXT ಅತ್ಯುತ್ತಮ ವೆರಿಯೆಂಟ್ ಎಂದು ಪರಿಗಣಿಸಬಹುದು. ಇದು 8-ಇಂಚಿನ ಟಚ್‌ಸ್ಕ್ರೀನ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್ಸ್ ಮತ್ತು ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳಂತಹ ಎಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.
ಹಾಗೆಯೇ ಇದರಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇವೆಲ್ಲವೂ ಮ್ಯಾನುವಲ್‌ನಲ್ಲಿ ರೂ. 7.61 ಲಕ್ಷ (ಎಕ್ಸ್ ಶೋ ರೂಂ) ಮತ್ತು AMT ನಲ್ಲಾದರೆ ರೂ. 8.12 ಲಕ್ಷ (ಎಕ್ಸ್ ಶೋ ರೂಂ) ನಲ್ಲಿ ಬರುತ್ತವೆ.

ಖರೀದಿಸಬಹುದೇ?: ನಿಮಗೆ ಕಡಿಮೆ ಬಜೆಟ್‌ನಲ್ಲಿ 7-ಆಸನಗಳ ಕಾರು ಅಗತ್ಯವಿದ್ದರೆ, ರೆನಾಲ್ಟ್ ಟ್ರೈಬರ್ ಖಂಡಿತವಾಗಿಯೂ ಪರಿಗಣಿಸಲು ಯೋಗ್ಯವಾಗಿದೆ. ಇತರ 5-ಆಸನಗಳ ಹ್ಯಾಚ್‌ಬ್ಯಾಕ್‌ಗಳು ಒದಗಿಸುವುದಕ್ಕಿಂತ ಹೆಚ್ಚಿನ ಬೂಟ್ ಸ್ಥಳವವನ್ನು ಈ ಕಾರು ನೀಡುತ್ತದೆ. ಪರ್ಫಾಮೆನ್ಸ್ ಹೇಳಿಕೊಳ್ಳುವ ಮಟ್ಟಕ್ಕೆ ಇಲ್ಲವಾದ್ದರಿಂದ ಫುಲ್ ಲೋಡಿಂಗ್‌ನಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ಕಾರಿನ ಎಂಜಿನ್ ಮೇಲೆ ಪ್ರಭಾವ ಬೀರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








