ಇದಕ್ಕಿಂತ ಕಡಿಮೆ ಬೆಲೆಗೆ 7-ಸೀಟರ್ ಕಾರು ಯಾರೂ ಮಾರಲು ಸಾಧ್ಯವಿಲ್ಲ: ಬೈಕ್ ಬೆಲೆಯಲ್ಲಿ ಖರೀದಿಸಬಹುದು!

ಎಂಪಿವಿಗಳು ಯಾವಾಗಲೂ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ. ಏಕೆಂದರೆ ಹೆಚ್ಚು ಜನರು ಪ್ರಯಾಣಿಸಬಹುದು. ಎಂಪಿವಿ ವಿಭಾಗಕ್ಕೆ ಸಂಬಂಧಿಸಿದಂತೆ, ಮಾರುತಿ ಸುಜುಕಿ ಎರ್ಟಿಗಾ ಮತ್ತು ರೆನಾಲ್ಟ್ ಟ್ರೈಬರ್ (Renault Triber) ಭಾರತೀಯ ಗ್ರಾಹಕರಲ್ಲಿ ಬಹಳ ಜನಪ್ರಿಯವಾಗಿವೆ. ಸದ್ಯ ಮಾರುತಿ ಎರ್ಟಿಗಾ ಸದ್ಯ ಬಜೆಟ್ ಬೆಲೆಯ 7-ಸೀಟರ್ ಕಾರು ವಿಭಾಗದಲ್ಲಿ ಉತ್ತಮ ಮಾರಾಟ ಕಾಣುತ್ತಿರುವ ಕಾರ್ ಆಗಿದೆ. ಇದಕ್ಕೆ ರೆನಾಲ್ಟ್ ಟ್ರೈಬರ್ ಭರ್ಜರಿ ಪೈಪೋಟಿ ನೀಡುತ್ತದೆ. ಇತ್ತಿಚಿನ ದಿನಗಳಲ್ಲಿ ಎರ್ಟಿಗಾಗೆ ಭಾರೀ ಪೈಪೋಟಿ ನೀಡುತ್ತಿದೆ. 2024ರ ಆಗಸ್ಟ್ ತಿಂಗಳ ರೆನಾಲ್ಟ್ ಟ್ರೈಬರ್ ಕಾರಿನ ಮಾರಾಟ ವರದಿ ಬಹಿರಂಗವಾಗಿದ.

2024ರ ಆಗಸ್ಟ್ ತಿಂಗಳಿನಲ್ಲಿ ರೆನಾಲ್ಟ್ ಕಂಪನಿಯು 1,514 ಟ್ರೈಬಾರ್ ಕಾರುಗಳನ್ನು ಮಾರಾಟ ಮಾಡಿದೆ. ಆದರೆ 2023ರ ಆಗಸ್ಟ್ ತಿಂಗಳಿನಲ್ಲಿ 1,821 ಟ್ರೈಬಾರ್ ಕಾರುಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.17ರಷ್ಟು ಕುಸಿತ ಕಂಡಿದೆ. ರೆನಾಲ್ಟ್ ಟ್ರೈಬರ್ RXE, RXL, RXT ಮತ್ತು RXZ ಎಂಬ ನಾಲ್ಕು ವೇರಿಯೆಂಟ್‌ಗಳನ್ನು ಹೊಂದಿದೆ.

Renault Triber

ರೆನಾಲ್ಟ್ ಟ್ರೈಬರ್ ಬೇಸ್ ವೆರಿಯೆಂಟ್ ಪೆಟ್ರೋಲ್ ಮ್ಯಾನ್ಯುವಲ್‌ ಬೆಲೆಯು ರೂ.6 ಲಕ್ಷದಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗುತ್ತದೆ. ಟಾಪ್-ಸ್ಪೆಕ್ ಎಎಮ್‌ಟಿ ವೇರಿಯೆಂಟ್ ಬೆಲೆಯು ರೂ.8.98 ಲಕ್ಷ (ಎಕ್ಸ್ ಶೋ ರೂಂ) ಇದೆ. ರೆನಾಲ್ಟ್ ಟ್ರೈಬರ್‌ನ RXT ಅತ್ಯುತ್ತಮ ವೆರಿಯೆಂಟ್ ಎಂದು ಪರಿಗಣಿಸಬಹುದು. ಇದು 8-ಇಂಚಿನ ಟಚ್‌ಸ್ಕ್ರೀನ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್ಸ್ ಮತ್ತು ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳಂತಹ ಎಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.

ಹಾಗೆಯೇ ಇದರಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇವೆಲ್ಲವೂ ಮ್ಯಾನುವಲ್‌ನಲ್ಲಿ ರೂ. 7.61 ಲಕ್ಷ (ಎಕ್ಸ್ ಶೋ ರೂಂ) ಮತ್ತು AMT ಆದರೆ ರೂ. 8.12 ಲಕ್ಷ (ಎಕ್ಸ್ ಶೋ ರೂಂ) ನಲ್ಲಿ ಬರುತ್ತವೆ.

Renault Triber

ರೆನಾಲ್ಟ್ ಟ್ರೈಬರ್ ಕಾರಿನಲ್ಲಿ 1-ಲೀಟರ್ NA 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಈ ಎಂಜಿನ್ 72 PS ಪವರ್ ಮತ್ತು 96 Nm ಟಾರ್ಕ್ ಹೊರಹಾಕುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಗೆ ಜೋಡಿಸಲ್ಪಟ್ಟಿರುತ್ತದೆ. ಮೈಲೇಜ್ ವಿಷಯಕ್ಕೆ ಬಂದರೆ ಮ್ಯಾನುವಲ್‌ನಲ್ಲಿ 17.65 kmpl ಮತ್ತು ಆಟೋಮ್ಯಾಟಿಕ್‌ನಲ್ಲಿ 14.83 kmpl ಮೈಲೇಜ್ ನೀಡುತ್ತದೆ.

ಸುರಕ್ಷತೆಯ ವಿಷಯದಲ್ಲಿ, ರೆನಾಲ್ಟ್ ಟ್ರೈಬರ್ ಕಾರಿನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಸ್ಟಾರ್ಟ್ ಅಸಿಸ್ಟ್ (HSA), ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್‌ವ್ಯೂ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆದಿದೆ.

Renault Triber

ನಿಮಗೆ ಕಡಿಮೆ ಬಜೆಟ್‌ನಲ್ಲಿ 7-ಆಸನಗಳ ಕಾರು ಅಗತ್ಯವಿದ್ದರೆ, ರೆನಾಲ್ಟ್ ಟ್ರೈಬರ್ ಖಂಡಿತವಾಗಿಯೂ ಪರಿಗಣಿಸಲು ಯೋಗ್ಯವಾದ ಮಾದರಿಯಾಗಿದೆ. ಇತರ 5-ಸೀಟುಗಳ ಹ್ಯಾಚ್‌ಬ್ಯಾಕ್‌ಗಳು ಒದಗಿಸುವುದಕ್ಕಿಂತ ಹೆಚ್ಚಿನ ಬೂಟ್ ಸ್ಥಳವವನ್ನು ಈ ಕಾರು ನೀಡುತ್ತದೆ. ಪರ್ಫಾಮೆನ್ಸ್ ಹೇಳಿಕೊಳ್ಳುವ ಮಟ್ಟಕ್ಕೆ ಇಲ್ಲವಾದ್ದರಿಂದ ಫುಲ್‌ ಲೋಡಿಂಗ್‌ನಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ಕಾರಿನ ಎಂಜಿನ್‌ ಮೇಲೆ ಪ್ರಭಾವ ಬೀರಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, September 18, 2024, 16:42 [IST]
English summary
Renault triber sales report august 2024 details
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+