ಒಂದು ಕಾಲದಲ್ಲಿ ಅಗ್ಗದ ಕಾರು ಓಡಿಸುತ್ತಿದ್ದ ರೋಹಿತ್ ಶರ್ಮಾ.. ಇಂದು ಕೋಟಿ - ಕೋಟಿ ಬೆಲೆಯ ಕಾರುಗಳ ದೊರೆ!
ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ, ಭಾರತ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ನಾಯಕ ರೋಹಿತ್ ಶರ್ಮಾ (Rohit Sharma) ನೇತೃತ್ವದಲ್ಲಿ ಟ್ರೋಫಿಯನ್ನು ಜಯಿಸಲಾಗಿದ್ದು, ಅವರು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ಗೂ ವಿದಾಯ ಘೋಷಿಸಿದ್ದಾರೆ. ರೋಹಿತ್‌ರ ಬಳಿ ಸುಮಾರು ರೂ.200 ಕೋಟಿ ಮೌಲ್ಯದ ಆಸ್ತಿಯಿದ್ದು, ಮುಂಬೈನ ವರ್ಲಿಯಲ್ಲಿ ರೂ.30 ಕೋಟಿಯ ಫ್ಲಾಟ್ ಕೂಡ ಹೊಂದಿದ್ದಾರೆ. ಅವರಿಗೆ ಕ್ರಿಕೆಟ್ ಆಟದಂತೆ ಮೈದಾನದ ಹೊರಗೆ ಕಾರುಗಳ ಮೇಲೆ ವಿಶೇಷ ಪ್ರೀತಿಯಿದ್ದು, ಹಲವು ಐಷಾರಾಮಿ ಕಾರುಗಳ ಮಾಲೀಕರೂ ಆಗಿದ್ದಾರೆ.
ಸದ್ಯ, ರೋಹಿತ್ ಶರ್ಮಾ ಅವರ ಗ್ಯಾರೇಜ್‌ನಲ್ಲಿರುವ ಐಷಾರಾಮಿ ಕಾರುಗಳಲ್ಲಿ ಲಂಬೋರ್ಗಿನಿ ಉರುಸ್ (Lamborghini Urus) ದುಬಾರಿ ಬೆಲೆಯನ್ನು ಹೊಂದಿದೆ. ಈ ಕಾರು ರೂ.4.18 ಕೋಟಿಯಿಂದ ರೂ.4.22 ಕೋಟಿ ಎಕ್ಸ್ ಶೋರೂಂ ದರವನ್ನು ಪಡೆದಿದೆ. 4-ಲೀಟರ್ ಟ್ವಿನ್ ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 666 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 850 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಈ ಲಂಬೋರ್ಗಿನಿ ಉರುಸ್ 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. ಕೇವಲ 3.3 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ಗರಿಷ್ಠ ವೇಗವನ್ನು ಪಡೆಯಲಿದೆ. ಡುಯಲ್ ಟಚ್‌ಸ್ಕ್ರೀನ್ ಡಿಸ್ಪ್ಲೇ, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 8 ಏರ್‌ಬ್ಯಾಗ್, ECS (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಬಿಎಂಡಬ್ಲ್ಯೂ ಎಂ5 (BMW M5) ಕಾರಿಗೂ ರೋಹಿತ್ ಶರ್ಮಾ ಮಾಲೀಕರಾಗಿದ್ದಾರೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಈ ಸೆಡಾನ್ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಕೆಲ ವರ್ಷಗಳ ಹಿಂದೆ ಖರೀದಿಗೆ ದೊರೆಯುತ್ತಿದ್ದಾಗ ರೂ.1.74 ಕೋಟಿ ಬೆಲೆಯನ್ನು ಪಡೆದಿತ್ತು. ಶಕ್ತಿಯುತ 4395 ಸಿಸಿ ಸಾಮರ್ಥ್ಯ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿತ್ತು.

ರೋಹಿತ್ ಶರ್ಮಾ ಅವರ ಮನೆಯಲ್ಲಿ ಬಿಎಂಡಬ್ಲ್ಯೂ ಎಕ್ಸ್3 (BMW X3) ಎಸ್‌ಯುವಿಯೂ ಇದೆ. ಈ ಕಾರು ರೂ.68.50 ಲಕ್ಷದಿಂದ ರೂ.87.70 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಎಂಜಿನ್ ಪಡೆದಿದ್ದು, 231 ಕೆಎಂಪಿಹೆಚ್ ಟಾಪ್ ಸ್ಪೀಡ್ ಒಳಗೊಂಡಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಟೊಯೊಟಾ ಫಾರ್ಚುನರ್ (Toyota Fortuner) ರೋಹಿತ್ ಅವರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಇದು ಫುಲ್-ಸೈಜ್ ಎಸ್‌ಯುವಿಯಾಗಿದ್ದು, ರೂ.33.44 ಲಕ್ಷದಿಂದ ರೂ.51.44 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಸಿಗುವ ಈ ಕಾರು, 10 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಕ್ರಿಕೆಟಿಗ ರೋಹಿತ್ ಶರ್ಮಾ ಮರ್ಸಿಡಿಸ್ ಜಿಎಲ್ಎಸ್ 350 (Mercedes GLS 350d) ಎಸ್‌ಯುವಿಯನ್ನು ಹೊಂದಿದ್ದಾರೆ. ಆದಾಗ್ಯೂ ಈ ಕಾರಿನ ಮಾರಾಟವನ್ನು ನಿಲ್ಲಿಸಲಾಗಿದೆ. ಆಗ ರೂ.1.63 ರಿಂದ ರೂ.1.69 ಕೋಟಿ ಬೆಲೆಯನ್ನು ಪಡೆದಿತ್ತು. ರೋಹಿತ್‌ರ ಮೊದಲ ಖರೀದಿಸಿದ ಕಾರು ಸ್ಕೋಡಾ ಲಾರಾ (Skoda Laura) ಎನ್ನಲಾಗಿದೆ. ಇದು ರೂ.12.92 ಲಕ್ಷ ಬೆಲೆಯನ್ನು ಹೊಂದಿತ್ತು. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications