ಭಾರತದಲ್ಲಿ ಶ್ರೀಮಂತರ ಎಲೆಕ್ಟ್ರಿಕ್ ಕಾರು ಬಿಡುಗಡೆ: ಇದರ ಬೆಲೆಗೆ ಐಷಾರಾಮಿ ಮನೆ ಕಟ್ಟಬಹುದು!
ರೋಲ್ಸ್ ರಾಯ್ಸ್ ತನ್ನ ಮೊದಲ ಎಲೆಕ್ಟ್ರಿಕ್ ಐಷಾರಾಮಿ ಕಾರು' ಸ್ಪೆಕ್ಟರ್ ಅನ್ನು ಜನವರಿ 19 ರಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದನ್ನು ಅಕ್ಟೋಬರ್ 2022 ರಲ್ಲಿ ಜಾಗತಿಕವಾಗಿ ಅನಾವರಣಗೊಳಿಸಲಾಯಿತು. ಇದೀಗ ಭಾರತದಲ್ಲಿ ರೋಲ್ಸ್ ರಾಯ್ಸ್ ತಮ್ಮ ಮೊದಲ ಇವಿಯನ್ನು ಬಿಡುಗಡೆ ಮಾಡಿದ್ದಾರೆ.
ಇದರ ಬೆಲೆಯು ಬರೋಬ್ಬರಿ ರೂ. 7.5 (ಎಕ್ಸ್ ಶೋರೂಂ)ಕೋಟಿಯಿದೆ. ಇದು ಎಲ್ಲಾ ಎಲೆಕ್ಟ್ರಿಕ್ ಕಾರುಗಳಿಗೆ ಬಾಸ್ ಎಂದು ಹೇಳಬಹುದು, ಏಕೆಂದರೆ ಕಂಪನಿಯು ರೋಲ್ಸ್ ರಾಯ್ಸ್ ಸ್ಪೆಕ್ಟರ್ EV ಯಲ್ಲಿ ಶಕ್ತಿಯುತ 102 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಬಳಸುತ್ತಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್ 430 kW (577 hp) ಪವರ್ ಮತ್ತು 900 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಪೆಕ್ಟರ್ EV ರೋಲ್ಸ್ ರಾಯ್ಸ್ ಬಿಡುಗಡೆ ಮಾಡಿದ ಮೊದಲ ಎಲೆಕ್ಟ್ರಿಕ್ ಕಾರ್ ಆಗಿದೆ. ಸ್ಪೆಕ್ಟರ್ ಇವಿ ಎರಡು-ಬಾಗಿಲಿನ ಕೂಪ್ ಆಗಿದ್ದು, ಕಂಪನಿಯ ಪ್ರಕಾರ, ಹೊಸ ಕಾರು ಅದರ ಪ್ರಸ್ತುತ-ಪೀಳಿಗೆಯ ಫ್ಯಾಂಟಮ್ ಮತ್ತು ಕುಲ್ಲಿನಾನ್‌ಗಳಂತೆಯೇ ಅದೇ 'Architecture of luxury' ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಕೇವಲ 4.4 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ ವೇಗವನ್ನು ತಲುಪಬಲ್ಲದು. ಸಂಪೂರ್ಣ ಚಾರ್ಜ್‌ನಲ್ಲಿ 530 ಕಿ.ಮೀ ರೇಂಜ್ ನೀಡುತ್ತದೆ.
ವಿಶೇಷತೆಗಳೇನು: ರೋಲ್ಸ್ ರಾಯ್ಸ್‌ನ ಇತ್ತೀಚಿನ 'ಸ್ಪಿರಿಟ್' ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಸ್ಪೆಕ್ಟರ್ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯೊಂದಿಗೆ ನಿರ್ಮಿಸಲಾಗಿದೆ. ಕಾರು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪ್ರಯಾಣಿಕರಿಗೆ ಪ್ರತ್ಯೇಕ ಡಿಸ್ಪ್ಲೇ ಪರದೆಯನ್ನು ನೀಡಲಾಗಿದೆ. ಇದರ ಡಿಜಿಟಲ್ ಡಿಸ್ಪ್ಲೇ ಪ್ರಯಾಣಿಕರು ಹತ್ತುವಾಗ ಅವರನ್ನು ಸ್ವಾಗತಿಸುತ್ತದೆ.

ಡಿಜಿಟೈಸ್ ಮಾಡಿದ ಕಲೆಯನ್ನು ಪ್ರದರ್ಶಿಸಲು ಅಥವಾ ಮಾಲೀಕರಿಂದ ಆಯ್ಕೆಮಾಡಿದ ವೈಯಕ್ತಿಕ ಸ್ವಾಗತದ ಅನಿಮೇಷನ್ ಅನ್ನು ಇದು ಪ್ರದರ್ಶಿಸುತ್ತದೆ. ಹಾಗೆಯೇ ಇದು ಐಷಾರಾಮಿ ರೋಲ್ಸ್ ರಾಯ್ಸ್ ಆಗಿರುವುದರಿಂದ, ನಿಮ್ಮ ನೆಚ್ಚಿನ ಬಣ್ಣದ ಥೀಮ್ ಅನ್ನು ಆಯ್ಕೆ ಮಾಡುವ ಮೂಲಕ ಕಾರಿನ ಪ್ರತಿಯೊಂದು ಬಿಟ್ ಅನ್ನು ಕಸ್ಟಮೈಸ್ ಮಾಡಬಹುದು. ಉದಾಹರಣೆಗೆ ನಿಮ್ಮ ಹೆಸರನ್ನು ಆಸನಗಳ ಮೇಲೆ ಕಸೂತಿ (Embroidery) ಮಾಡಬಹುದು.
ರೋಲ್ಸ್ ರಾಯ್ಸ್ ಸ್ಪೆಕ್ಟರ್ ಸ್ಟ್ಯಾಂಡರ್ಡ್ ಮಾದರಿಯಲ್ಲಿನ ಅನೇಕ ವಿನ್ಯಾಸ ಅಂಶಗಳು ಸ್ಪೆಕ್ಟರ್ ಇವಿಯಲ್ಲೂ ಕಂಡುಬರುತ್ತವೆ. ಕಂಪನಿಯು ದೊಡ್ಡ ಮುಂಭಾಗದ ಗಿಲ್ ಅನ್ನು ನೀಡಿದ್ದು, ಇದು ಇತರ ಯಾವುದೇ ರೋಲ್ಸ್ ರಾಯ್ಸ್ ಕಾರುಗಳಿಗಿಂತ ದೊಡ್ಡದಾಗಿ ಕಾಣುತ್ತದೆ. ಈ ಗ್ರಿಲ್ ಎಲ್ಇಡಿ ಇಲ್ಯುಮಿನೇಷನ್ ವೈಶಿಷ್ಟ್ಯದೊಂದಿಗೆ ಬರುತ್ತದೆ. ಇದರ ಸ್ಪಿರಿಟ್ ಆಫ್ ಎಕ್ಸ್ಟಸಿ ಲೋಗೋವನ್ನು ಏರೋಡೈನಮಿಕ್ ಆಗಿ ವಿನ್ಯಾಸಗೊಳಿಸಲಾಗಿದೆ.

ಇದರ 23-ಇಂಚಿನ ಅಲಾಯ್ ವ್ಹೀಲ್‌ಗಳು ಹಾಗೂ ಅಚ್ಚುಕಟ್ಟಾಗಿ ಕಾಣುವ ಲಂಬವಾದ ಟೈಲ್‌ಲೈಟ್ ಅಂಶಗಳು ಎಂಥವರನ್ನು ಆಕರ್ಷಿಸುತ್ತವೆ. ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸ, ಎಲ್‌ಇಡಿ ಲೈಟಿಂಗ್‌ನೊಂದಿಗೆ ಸಿಗ್ನೇಚರ್ ಪ್ಯಾಂಥಿಯಾನ್ ಗ್ರಿಲ್, ಇಳಿಜಾರಿನ ರೂಫ್, ಲಂಬವಾದ ಎಲ್ಇಡಿ ಟೈಲ್ ಲೈಟ್‌ಗಳನ್ನು ಹೊಂದಿದೆ. ಹಾಗೆಯೇ ಸ್ಪೆಕ್ಟರ್ ಇವಿ ಒಳಭಾಗವು ಬೆಸ್ಪೋಕ್ ವಿನ್ಯಾಸದ ಹಲವಾರು ಅಂಶಗಳನ್ನು ಕೂಡ ಒಳಗೊಂಡಿದೆ.
ಇಂಟೀರಿಯರ್‌ನಲ್ಲಿ ಇದು 4,796 ನಕ್ಷತ್ರಗಳೊಂದಿಗೆ ಡೋರ್ ಪ್ಯಾಡ್‌ಗಳ ಮೇಲೆ ಸ್ಟಾರ್‌ಲೈಟ್ ಲೈನರ್ ಅನ್ನು ಹೊಂದಿದೆ. ಪ್ರಯಾಣಿಕರ ಬದಿಯ ಡ್ಯಾಶ್‌ಬೋರ್ಡ್ ಪ್ಯಾನೆಲ್ ಪ್ರಕಾಶಿತ 'ಸ್ಪೆಕ್ಟರ್' ಹೆಸರಿನ ಪ್ಯಾನಲ್ ಹೊಂದಿದ್ದು, ಇದು ಕಾರು ಬಳಕೆಯಲ್ಲಿಲ್ಲದಿದ್ದಾಗ ಕಣ್ಮರೆಯಾಗುತ್ತದೆ. ಇಂತಹ ಇನ್ನೂ ಹತ್ತು ಹಲವು ಅಂಶಗಳನ್ನು ಕಾರಿನಲ್ಲಿ ನೋಡಬಹುದಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








