Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್‌ಪೇಮೆಂಟ್, EMI ಮಾಹಿತಿಗಳು!
ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ಗೆ ತನ್ನದೇ ಆದ ಸ್ಥಾನಮಾನ ಇದೆ. ಆಫ್‌ರೋಡ್ ಪ್ರೀಯರ ನೆಚ್ಚಿನ ಬೈಕ್‌ನಲ್ಲಿ ಇದೂ ಸಹ ಒಂದು. ಇಂದಿನ ಲೇಖನದಲ್ಲಿ ಈ ಬೈಕ್‌ನ ಆನ್‌ರೋಡ್ ಬೆಲೆ, ಲೋನ್ ಮಾಹಿತಿ ಮತ್ತು ಇಎಂಐಗಳ ಕುರಿತಾಗಿ ನೋಡೋಣ ಬನ್ನಿ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ (Royal Enfield Himalayan) ಬೈಕ್‌ನ ಬೆಂಗಳೂರಿನ ಆನ್‌ರೋಡ್ ಬೆಲೆಯನ್ನು ನೋಡುವುದಾದರೆ, ಸುಮಾರು 3,67,543 ರೂಗಳು. ಈ ಬೈಕ್‌ನ ಎಕ್ಸ್ ಶೋ ರೂಮ್ ಬೆಲೆ 2,85,000 ರೂಗಳು. ಇದಕ್ಕೆ ಸುಮಾರು 58,143 ರೂಗಳು ಆರ್‌ಟಿಒ ಟ್ಯಾಕ್ಸ್ ಆಗಿಯೂ ಮತ್ತು 24,400 ರೂಗಳು ಇನ್ಸುರೆನ್ಸ್ ರೂಪದಲ್ಲಿ ಸೇರಿಕೊಳ್ಳುತ್ತದೆ.

ಇನ್ನು ಈ ಬೈಕ್‌ನ ಡೌನ್‌ಪೇಮೆಂಟ್ ಮತ್ತು ಇಎಂಐ ಕುರಿತಾಗಿ ನೋಡುವುದಾದರೆ, ನೀವು ಈ ಬೈಕ್ ಅನ್ನು ಸಾಮಾನ್ಯವಾಗಿ 9.30% ಬಡ್ಡಿದರದಲ್ಲಿ ಲೋನ್ ಪಡೆದುಕೊಳ್ಳಬಹುದಾಗಿದೆ. ಈ ಬೈಕ್ಗೆ ಕಡಿಮೆ ಎಂದರೂ ಸುಮಾರು 74000 ರೂ ಡೌನ್‌ಪೇಮೆಂಟ್ ಕಟ್ಟಿದರೆ ೫ ವರ್ಷಕ್ಕೆ ನೀವು 6,136 ರೂಪಾಯಿಗಳನ್ನು ಇಎಂಐ ರೂಪದಲ್ಲಿ ಪಾವತಿಸಬಹುದಾಗಿದೆ. ಲೋನ್ ಮುಗಿಯುವಾಗ ಸುಮಾರು 74,617 ರೂಗಳನ್ನು ಹೆಚ್ಚುವರಿಯಾಗಿ ಪಾವತಿಸುತ್ತೀರಿ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಬಗ್ಗೆ ನೋಡುವುದಾದರೆ, ಭಾರತದಲ್ಲಿ ಅಡ್ವೆಂಚರ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಕೈಗೆಟುಕುವ ಬೆಲೆ ಹಾಗೂ ಉತ್ತಮ ಪರ್ಫಾಮೆನ್ಸ್ ನೀಡುವ ಬೈಕ್ ಆಗಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಸಾಕಷ್ಟು ಜನಪ್ರಿಯತೆ ಪಡೆದಿದೆ. ಕೆಲವು ತಿಂಗಳ ಹಿಂದೆಯಷ್ಟೇ ಇದರ ನವೀಕೃತ ಮಾದರಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 (Royal Enfield Himalayan 450) ಬೈಕ್ ಬಿಡುಗಡೆಗೊಂಡಿತ್ತು.

ಈ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಹೊಸ 452 ಸಿಸಿ ಲಿಕ್ವಿಡ್ ಕೂಲ್ಡ್ DOHC ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ ಬಂದಿದೆ. ಈ ಎಂಜಿನ್ 40 bhp ಪವರ್ ಮತ್ತು 40 Nm ಟಾರ್ಕ್ ಉತ್ಪಾದಿಸಲು ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ. ಈ ಎಂಜಿನ್ ಅನ್ನು 6 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಹೊಸ ಹಿಮಾಲಯನ್ 450 ನವೀಕೃತ ವಿಶೇಷತೆಗಳನ್ನು ನೋಡುವುದಾದರೆ, ಸ್ಲಿಪ್ಪರ್ ಕ್ಲಚ್ ಮತ್ತು ಅಸಿಸ್ಟ್ ಕ್ಲಚ್ ಸಹ ಸ್ಟ್ಯಾಂಡರ್ಡ್ ಆಗಿ ಬರಲಿದೆ. ಅದೇ ಸಮಯದಲ್ಲಿ ಈ ಬೈಕಿನ ತೂಕವು 196 ಕೆ.ಜಿ ಇರಲಿದೆ. ಇದಲ್ಲದೆ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್‌ಗೆ ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಒದಗಿಸಲಾಗುವುದು.

ಈ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್, ಯೆಜ್ಡಿ ಅಡ್ವೆಂಚರ್ (Yezdi Adventure), ಬಿಎಂಡಬ್ಲ್ಯು ಜಿ 310 ಜಿಎಸ್ (BMW G 310 GS), ಮತ್ತು ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್ (Triumph Scrambler 400 X) ಗಳಿಗೆ ಪೈಪೋಟಿ ನೀಡಲಿದೆ. ಇವೆಲ್ಲವು ಸದ್ಯ ಅಡ್ವೆಂಚರ್ ವಿಭಾಗದಲ್ಲಿ ಬೇಡಿಕೆಯಿರುವ ಮೋಟಾರ್‌ಸೈಕಲ್‌ಗಳಾಗಿವೆ.
ಗಮನಾರ್ಹ ಫೀಚರ್‌ಗಳ ವಿಷಯಕ್ಕೆ ಬಂದರೆ ಫುಲ್ LED ಲೈಟಿಂಗ್, ರೈಡ್ ಬೈ ವೈರ್, ಸ್ವಿಚ್ ಮಾಡಬಹುದಾದ ABS, ನ್ಯಾವಿಗೇಷನ್ ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ ದೊಡ್ಡ ಮತ್ತು ವೃತ್ತಾಕಾರದ TFT ಸ್ಕ್ರೀನ್ ಅನ್ನು ಒಳಗೊಂಡಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಭಾರತೀಯ ಮಾರುಕಟ್ಟೆಯಲ್ಲಿ KTM 390 ಅಡ್ವೆಂಚರ್‌ನೊಂದಿಗೆ ಸ್ಪರ್ಧಿಸಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








