ಟಾಟಾ, ಮಹೀಂದ್ರಾಗೆ ನಿದ್ದೆಗೆಡಿಸಿದೆ ಸ್ಕೋಡಾ ಹೊಸ ಕಾರು: ಕೇವಲ 8 ಲಕ್ಷಕ್ಕೆ ಪ್ರೀಮಿಯಂ SUV

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಹೇಗೆ ಮುಂದುವರಿಯಬೇಕು ಹಾಗೂ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಹೇಗೆ ಸೆಳೆಯಬೇಕು ಎಂಬುದನ್ನು ಪ್ರೀಮಿಯಂ ಕಾರು ತಯಾರಕ ಕಂಪನಿಯಾದ ಸ್ಕೋಡಾ ಕೊನೆಗೂ ಕಂಡುಕೊಂಡಿದೆ. ಎಲ್ಲರನ್ನು ಅಚ್ಚರಿಗೊಳಿಸುವಂತೆ 8 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ತನ್ನ ಹೊಸ ಎಸ್‌ಯುವಿ ಸ್ಕೋಡಾ ಕೈಲಾಕ್ (Skoda Kylaq) ಅನ್ನು ಪರಿಚಯಿಸಿದೆ. ನವೆಂಬರ್ 6 ರಂದು ಈ ಹೊಸ ಎಸ್‌ಯುವಿಯ ಬೇಸ್‌ ವೇರಿಯೆಂಟ್ ಬೆಲೆಯನ್ನು ಮಾತ್ರ ಪರಿಚಯಿಸಿ ಅನಾವರಣಗೊಳಿಸಲಾಗಿತ್ತು. ಜನವರಿ 2025 ರಲ್ಲಿ ಎಲ್ಲಾ ವೇರಿಯೆಂಟ್‌ಗಳ ಬೆಲೆಗಳನ್ನು ಘೋಷಿಸಿ ಬಿಡುಗಡೆ ಮಾಡಲಾಗುವುದು.

ಸ್ಕೋಡಾ ಆಟೋ ಇಂಡಿಯಾ ಡಿಸೆಂಬರ್ 2 ರಂದು ಕೈಲಾಕ್ ಕಾರಿನ ಬುಕಿಂಗ್ ಅನ್ನು ತೆರೆಯಲಿದೆ. ಸದ್ಯಕ್ಕೆ ಬೇಸ್‌ ವೇರಿಯೆಂಟ್ ಬೆಲೆಯು 7,89,000 ರೂ. (ಎಕ್ಸ್ ಶೋರೂಂ) ಇದೆ. ಬಿಡುಗಡೆ ವೇಳೆಗೆ ಸಂಪೂರ್ಣ ವೇರಿಯೆಂಟ್‌ಗಳ ಬೆಲೆಗಳನ್ನು ಹೊರತರಲಾಗುವುದು, ಡೆಲಿವರಿಗಳನ್ನು ಮುಂದಿನ ವರ್ಷ ನೀಡಲು ಯೋಜಿಸಲಾಗಿದೆ. ಸದ್ಯ ಬೇಡಿಕೆಯನ್ನು ಆಧರಿಸಿ ಕಾರನ್ನು ಡೀಲರ್‌ಗಳಿಗೆ ತಲುಪಿಸಲು ಕಂಪನಿ ಪ್ಲಾನ್ ಮಾಡಿದೆ.

skoda-kylaq-rivals-tata-nexon-and-mahindra-xuv3x0-key-highlights

ಸದ್ಯಕ್ಕೆ ಒಂದಷ್ಟು ಕಾರುಗಳ ಭವಿಷ್ಯವನ್ನು ಹೊಸ ಸ್ಕೋಡಾ ಕೈಲಾಕ್ ನಿರ್ಧರಿಸಲಿದೆ. ಪ್ರಮುಖವಾಗಿ ಇದು ಭಾರತದ ಪ್ರಮುಖ ಕಾರುಗಳಾದ ಟಾಟಾ ನೆಕ್ಸಾನ್ (Tata Nexon)ಮತ್ತು ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ (Mahindra XUV3X0)ಕಾರುಗಳಿಗೆ ನಿದ್ದೆಗೆಡಿಸಿದೆ. ಏಕೆಂದರೆ ಎಲ್ಲರಿಗೂ ತಿಳಿದಂತೆ ಸ್ಕೋಡಾ ಪ್ರೀಮಿಯಂ ಬ್ರಾಂಡ್ ಆಗಿದ್ದು, ಪರ್ಫಾಮೆನ್ಸ್ ಹಾಗೂ ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಈಗ ಕಡಿಮೆ ಬೆಲೆಗೆ ಸ್ಕೋಡಾ ಕಾರು ಸಿಗುತ್ತದೆ ಎಂದಾದರೆ ಗ್ರಾಹಕರು ಖರೀದಿಸಲು ಮುಗಿಬೀಳುತ್ತಾರೆ.

ಈ ಸ್ಕೋಡಾ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬರುವುದರಿಂದ ಇದೆ ವಿಭಾಗದ ಪ್ರತಿಸ್ಪರ್ಧಿ ಕಾರುಗಳಿಗೆ ನಡುಕ ಹುಟ್ಟಿಸಿದೆ. ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಬೆಲೆಯು ರೂ.7,79,000 ಗಳಾದರೆ, ಟಾಟಾ ನೆಕ್ಸಾನ್ ಕಾರಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.7,99,990ಗಳಾಗಿದೆ. ಎರಡೂ ಎಸ್‌ಯುವಿಗಳಲ್ಲಿ, ಎಂಟ್ರಿ ಲೆವೆಲ್‌ಗೆ 8,00,000 ರೂ.ಗಿಂತ ಕಡಿಮೆ (ಎಕ್ಸ್ ಶೋರೂಂ) ಬೆಲೆ ಇದೆ. ಇವುಗಳ ಜೊತೆಗೆ ಖರೀದಿದಾರರಿಗೆ ಈಗ ಮೂರನೇ ಆಯ್ಕೆಯಾಗಿ ಸ್ಕೋಡಾ ಕೈಲಾಕ್ ಕೂಡ ಸಿಗಲಿದೆ.

skoda-kylaq-rivals-tata-nexon-and-mahindra-xuv3x0-key-highlights

ಸ್ಕೋಡಾ ಕೈಲಾಕ್ ವಿಶೇಷತೆಗಳು: ಸ್ಕೋಡಾ ಕಂಪನಿಯು ಈ ಕಾರಿನಲ್ಲಿ ಸಿಂಗಲ್-ಪ್ಯಾನ್ ಸನ್ ರೂಫ್ ಮತ್ತು 6-ವೇ ಫ್ರಂಟ್ ಫಂಕ್ಷನಲ್ ಸೀಟ್‌ಗಳನ್ನು ಹೊಂದಿದೆ. ಆರು ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಮಲ್ಟಿ-ಕೊಲಿಷನ್ ಬ್ರೇಕಿಂಗ್, 10.1 ಇಂಚಿನ ಟಚ್ ಸ್ಕ್ರೀನ್, 8 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ವೈರ್ ಲೆಸ್ ಫೋನ್ ಚಾರ್ಜರ್‌ನಂತಹ ಫೀಚರ್ಸ್ ನೀಡಿದೆ.

ಎಂಜಿನ್: ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾದಂತಹ ಕಾರುಗಳಲ್ಲಿ ಕಾಣುವ ಅದೇ 1 - ಲೀಟರ್ ಟರ್ಬೊ -ಪೆಟ್ರೋಲ್ ಎಂಜಿನ್ ಕೈಲಾಕ್‌ನಲ್ಲಿ ನೀಡಲಾಗಿದೆ. ಇದು 115 ಪಿಎಸ್ ಪವರ್ ಹಾಗೂ 178 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

skoda-kylaq-rivals-tata-nexon-and-mahindra-xuv3x0-key-highlights

ಇಂಟೀರಿಯರ್ ಹೇಗಿದೆ?: ಸ್ಕೋಡಾ ಕೈಲಾಕ್‌ನಲ್ಲಿ 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಸೆಮಿ-ಲೆದರ್ ಸೀಟ್ ಅಪ್ ಹೋಲ್ಸ್ಟರಿಯನ್ನು ನೀಡಲಾಗಿದೆ. ಕ್ಯಾಬಿನ್ ಸುತ್ತಲೂ ಸಿಲ್ವರ್ ಮತ್ತು ಕ್ರೋಮ್ ಅಕ್ಸೆಂಟ್‌ಗಳೊಂದಿಗೆ ಬ್ಲಾಕ್ ಮತ್ತು ಗ್ರೇ ಬಣ್ಣದ ಕ್ಯಾಬಿನ್ ಥೀಮ್ ಹೊಂದಿದೆ. ಸೆಂಟರ್ ಎಸಿ ವೆಂಟ್‌ಗಳ ಕೆಳಗೆ, ನೀವು ಕ್ಲೈಮೆಟ್ ಕಂಟ್ರೋಲ್‌ಗಳ ಪ್ಯಾನಲ್ ಕಾಣಬಹುದು, ಇದು ಸ್ಕೋಡಾ ಕುಶಾಕ್‌ನಲ್ಲಿ ಕಾಣುವಂತೆಯೇ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 25, 2024, 12:01 [IST]
English summary
Skoda kylaq rivals tata nexon and mahindra xuv3x0 key highlights
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+