ಈ ಕಂಪನಿಯ ಕಾರುಗಳಲ್ಲಿ ಉಚಿತವಾಗಿ 6 ಏರ್‌ಬ್ಯಾಗ್‌ಗಳು: ಸುರಕ್ಷತೆಯಲ್ಲಿ ನೋ ಕಾಂಪ್ರಮೈಸ್!
ಭಾರತದ ಎಷ್ಟೇ ಎಸ್‌ಯುವಿ ಪ್ರೀಯ ರಾಷ್ಟ್ರವಾಗಿದ್ದರೂ, ಸಾಧರಣವಾಗಿ ಎಲ್ಲರಿಗೂ ಒಂದು ಸೆಡಾನ್ ಅನ್ನು ಕೊಳ್ಳಬೇಕು ಎಂಬ ಆಸೆ ಇರುತ್ತದೆ. ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಅಮೇಜ್‌ನಂತಹ ಸೆಡಾನ್‌ಗಳಿದ್ದರೂ ಅವುಗಳು ಸ್ಕೋಡಾ ಕಾರುಗಳಷ್ಟು ಪ್ರೀಮಿಯಂ ಆಗಿಲ್ಲ. ಇದೀಗ ಸ್ಕೋಡಾದ ಪ್ರಮುಖ ಎರಡು ಮಾದರಿಗಳಿಗೆ ಬಹುದೊಡ್ಡ ಅಪ್‌ಡೇಟ್ ಒಂದು ಸಿಕ್ಕಿದೆ.
ಮಾಹಿತಿಗಳ ಪ್ರಕಾರ ಭಾರತದಲ್ಲಿ ಸ್ಕೋಡಾ ಕಂಪನಿ ಮಾರಾಟ ಮಾಡುತ್ತಿರುವ ಎರಡು ಕಾರು ಮಾದರಿಗಳಗೆ ಆರು ಏರ್ ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತಿದೆ. ಈ ಮೂಲಕ ಸ್ಕೋಡಾ ಕಂಪನಿ ತಮ್ಮ ಸ್ಕೋಡಾ ಸ್ಲಾವಿಯಾ ಮತ್ತು ಸ್ಕೋಡಾ ಕುಶಾಕ್ ಪ್ರಮುಖವಾದುದು. ಈ ಕಾರುಗಳಿಗೆ ಇದೀಗ ಆರು ಏರ್ ಬ್ಯಾಗ್‌ಗಳು ಸ್ಟಾಂಡರ್ಡ್ ಆಗಿ ಸಿಗುತ್ತಿದೆ.

ಇದಕ್ಕಿಂತ ಹಿಂದೆ ಕೇವಲ ಟಾಪ್ ಮಾದರಿಗಳಲ್ಲಿ ಮಾತ್ರ ಈ ಅಯ್ಕೆ ಲಭ್ಯವಾಗೊತ್ತು. ಇದಕ್ಕಿಂತ ಕೆಳಗಿದ್ದ ವೇರಿಯಂಟ್‌ಗಳಲ್ಲಿ ಕೇವಲ ಎರಡು ಏರ್‌ಬ್ಯಾಗ್‌ಗಳು ಮಾತ್ರ ಲಭ್ಯವಾಗಿತ್ತು. ಆದರೆ ಇದೀಗ ಎಲ್ಲಾ ವೇರಿಯಂಟ್‌ಗಳಲ್ಲೂ ಆರು ಏರ್‌ಬ್ಯಾಗ್‌ಗಳು ಸಿಗುತ್ತಿರುವುದರಿಂದ ಈ ಕಾರಿನ ಸುರಕ್ಷತೆಯ ಗುಣಮಟ್ಟ ಮುಂದಿನ ಹಂತಕ್ಕೆ ಹೋಗಿದೆ ಎನ್ನಬಹುದು.
ಭಾರತೀಯ ಮಾರುಕಟ್ಟೆಯಲ್ಲಿರುವ ಸ್ಕೋಡಾ ಸ್ಲಾವಿಯಾ (Skoda Slavia) ಬಗ್ಗೆ ನೋಡುವುದಾದರೆ, ಸ್ಕೋಡಾ ಸ್ಲಾವಿಯಾ ಸ್ಟೈಲ್ ಎಡಿಷನ್ ಕ್ಯಾಂಡಿ ವೈಟ್, ಬ್ರಿಲಿಯಂಟ್ ಸಿಲ್ವರ್ ಮತ್ತು ಟೊರ್ನಾಡೋ ರೆಡ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಸೆಡಾನ್ ಡ್ಯುಯಲ್ ಡ್ಯಾಶ್ ಕ್ಯಾಮೆರಾ, ಸ್ಲಾವಿಯಾ ಸ್ಕಫ್ ಪ್ಲೇಟ್, ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಇತರವುಗಳನ್ನು ಒಳಗೊಂಡಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಸ್ಕೋಡಾ ಸ್ಲಾವಿಯಾ (Skoda Slavia) ಸ್ಟೈಲ್ ಎಡಿಷನ್ ಮಾದರಿಯಲ್ಲಿ 1.5-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 150 PS ಪವರ್ ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಫೀಡ್ DSG ಮತ್ತು ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ ಮುಂಭಾಗದ ವ್ಹೀಲ್ ಗಳಿಗೆ ಪವರ್ ರವಾನಿಸುತ್ತದೆ.
ಸ್ಕೋಡಾ ಸ್ಲಾವಿಯಾ ಮತ್ತು ಕುಷಾಕ್ ಕಾರುಗಳಲ್ಲಿ ಎರಡು ಎಂಜಿನ್ ಆಯ್ಕೆಗಳು ಇದೆ. 1.0 ಲೀಟರ್ ಟಿಎಸ್‌ಐ ಮತ್ತು 1.5 ಲೀಟರ್ ಟರ್ಬೋ ಟಿಎಸ್‌ಐ ಪೆಟ್ರೋಲ್ ಎಂಜಿನ್‌ಗಳು ಸಿಗುತ್ತವೆ. ಸ್ಲಾವಿಯಾ ಕಾರಿನಲ್ಲಿರುವ ಅದೇ ಎಂಜಿನ್ ಅನ್ನು ಸ್ಕೋಡಾ ಕಂಪನಿ ಕುಶಾಕ್‌ಗೂ ಅಳವಡಿಸಲಾಗಿದೆ ಎನ್ನುವುದನ್ನು ನೀವು ಗಮನಿಸಬೇಕು.

ಈ ಕಾರುಗಳಲ್ಲಿರುವ ಇತರ ಫೀಚರ್‌ಗಳೆಂದರೆ, Apple CarPlay ಮತ್ತು Android Auto ಜೊತೆಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ISOFIX ಚೈಲ್ಡ್ ಆಂಕರೇಜ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವು ಫೀಚರ್ಸ್ ಗಳನ್ನು ಹೊಂದಿವೆ. ಸ್ಲಾವಿಯಾ 5-ಸ್ಟಾರ್ ಗ್ಲೋಬಲ್ NCAP ರೇಟಿಂಗ್ ಅನ್ನು ಪಡೆದುಕೊಂಡಿದೆ.
ಇನ್ನು ಈ ಕಾರುಗಳ ಬೆಲೆಯನ್ನು ನೋಡುವುದಾದರೆ ಎರಡು ಮಾದರಿಗಳಿಗೂ ಕೊಂಚ ವ್ಯತ್ಯಾಸಗಳಿದೆ. ಅದರಲ್ಲಿ ಸ್ಲಾವಿಯಾ ಕಾರು ಮಾದರಿಯು ರೂ 11.63 ಲಕ್ಷದಿಂದ18.83 ಲಕ್ಷದವರೆಗೆ ಬೆಲೆ ಬಾಳಿದರೆ, ಕುಶಾಕ್ ಮಾದರಿಯು ರೂ 11.99 ಲಕ್ಷದಿಂದ19.79 ಲಕ್ಷದವರೆಗೆ ಬೆಲೆ ಬಾಳುತ್ತದೆ. ಕುಶಾಕ್ ಮಾದರಿಯು ಸ್ಲಾವಿಯಾಗಿಂತ ಕೊಂಚ ದುಬಾರಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








