ಸ್ಟೈಲಿಶ್ ಟಾಟಾ ಕರ್ವ್‌ನ ಒಳಭಾಗ ಬಹಿರಂಗ: ಟಾಟಾ ನೆಕ್ಸಾನ್ ರೀತಿಯಿದೆ ಎನ್ನಲು ಕಾರಣವೇನು?
ಎಲ್ಲರಿಗೂ ತಿಳಿದಿರುವಂತೆ ಟಾಟಾ ಮೋಟಾರ್ಸ್ ಈಗಾಗಲೇ ಟಾಟಾ ಕರ್ವ್ ಎಂಬ ಕಾರನ್ನು ಅಭಿವೃದ್ದಿ ಪಡಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದಕ್ಕೆ ಪ್ರಮುಖ ಕಾರಣ ಟಾಟಾ ಕಳೆದ ಆಟೋ ಎಕ್ಸ್‌ಪೋ ದಲ್ಲಿ ಈ ಟಾಟಾ ಕರ್ವ್‌ನ ಕಾನ್ಸೆಪ್ಟ್ ಅನ್ನು ಟಾಟಾ ಜನರ ಮುಂದೆ ಇಟ್ಟಿತ್ತು.
ಮೊದಲ ನೋಟದಲ್ಲಿಯೇ ಜನರನ್ನು ಆಕರ್ಷಿಸುವ ಡಿಸೈನ್ ಹೊಂದಿರುವ ಈ ಕಾರು ಉತ್ತಮ ಪೀಚರ್‌ಗಳನ್ನು ಸಹ ಹೊಂದಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರಿನ ಸಾಕಷ್ಟುಫೋಟೋಗಳು ವೈರಲ್ ಆಗಿದ್ದು ಜನರಿಂದ ಈ ಕಾರಿಗೆ ಭಾರೀ ಪ್ರತಿಕ್ರಿಯೆಗಳು ದೊರಕ್ಕುತ್ತಿದ್ದು, ಇದು ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂದು ಕಾಯುತ್ತಲೇ ಇದ್ದಾರೆ.

ಇದೀಗ ಟಾಟಾ ಕರ್ವ್‌ನ ಇಂಟೀರಿಯರ್ ಚಿತ್ರ ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸೊರಿಕೆಯಾಗಿದ್ದು, ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮಾಹಿತಿಗಳ ಪ್ರಕಾರ ಖಂಡಿತವಾಗಿಯೂ ಟಾಟಾ ಮೋಟಾರ್ಸ್ ಸದ್ಯದಲ್ಲೇ ಈ ಕಾರನ್ನು ಅದ್ದೂರಿಯಾಗಿ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ. ಇನ್ನು ಈ ಕಾರನ್ನು ಇತ್ತೋಚೆಗೆ ನಡೆದ ಭಾರತ್ ಮೊಬಿಲಿಟಿ ಶೋ ನಲ್ಲಿ ಪ್ರದರ್ಶನಕ್ಕೂ ಇಡಲಾಗಿತ್ತು.
ಈ ಸಂಧರ್ಭದಲ್ಲಿ ಕರ್ವ್ ಕಾರಿನ ಒಳಭಾಗದ ಚಿತ್ರ ತೆಗೆದಿದ್ದು, ಕರ್ವ್‌ನ ಒಳಭಾಗ ಬಹುತೇಕ ಟಾಟಾ ನೆಕ್ಸಾನ್ ಅನ್ನೇ ಹೋಲುತ್ತದೆ. ತ್ರೀ ಟೋನ್ ಇಂಟೀರಿಯರ್ ಡಿಸೈನ್ ಇದರಲ್ಲಿ ದೊರಕುತ್ತಿದ್ದು, ನೆಕ್ಸಾನ್‌ನ ಒಳಭಾಗವನ್ನೇ ನೋಡುವಂತಿದೆ. ಈ ಕಾರಿನ ಒಳಭಾಗದಲ್ಲಿರುವ ಇನ್ಪೋಟೈನ್‌ಮೆಂಟ್ ಸಿಸ್ಟಂ ಸಹ ೧೦.೨೫ ಇಂಚ್ ಇದ್ದು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಅದೇ ರೀತಿ ಇದೆ ಎಂಬುದನ್ನು ನಾವು ಕಾಣಬಹುದಾಗಿದೆ.

ಮಾಹಿತಿಗಳ ಪ್ರಕಾರ ಈಗಿರುವ ಟಾಟಾ ನೆಕ್ಸಾನ್‌ನ ಡೀಸೆಲ್ ಎಂಜಿನ್ ಅನ್ನೇ ಈ ಕಾರಿಗು ಅಳವಡಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಹೌದು ನೆಕ್ಸಾನ್‌ನಲ್ಲಿರುವ, ೧.೫ ಲೀಟರ್‌ನ ಡೀಸೆಲ್ ಎಂಜಿನ್ ಸಹಾಯದಿಂದ ಈಗ ನೆಕ್ಸಾನ್ ಕಾರ್‌ನಲ್ಲಿ ಉತ್ಪತ್ತಿಯಾಗುವ ಅದೇ ಪವರ್ ಮತ್ತು ಪರ್ಫಾಮೆನ್ಸ್ ಅನ್ನು ನಾವು ಮುಂಬರಲಿರುವ ಈ ಹೊಸ ಟಾಟಾ ಕರ್ವ್ ಡೀಸೆಲ್ ಆವೃತ್ತಿಯಲ್ಲಿ ಎದುರು ನೊಡಬಹುದಾಗಿದೆ.
ಈ ಹೊಸ ಟಾಟಾ Curvv ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ ಎಸ್‍ಯುವಿಗೆ ನೇರವಾಗಿ ಪೈಪೋಟಿ ನೀಡುತ್ತದೆ. 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಟಾಟಾ Curvv ಕಳೆದ ವರ್ಷ ಎಲೆಕ್ಟ್ರಿಕ್ ವಾಹನ ಕಾನ್ಸೆಪ್ಟ್ ರೂಪದಲ್ಲಿ ತೋರಿಸಿದ್ದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಈ ಬಾರೀ ಅನಾವರಣಗೊಳಿಸಿದ ಟಾಟಾ Curvv ಕಾನ್ಸೆಪ್ಟ್ ಸ್ಪ್ಲಿಟ್ ಹೆಡ್‌ಲೈಟ್ ವಿನ್ಯಾಸದ ನವೀಕರಿಸಿದ ಆವೃತ್ತಿಯನ್ನು ಹೊಂದಿದೆ.
ಇದರ ಡಿಸೈನ್ ಮತ್ತು ಇತರ ವಿಷಯಗಳನ್ನು ನೋಡುವುದಾದರೆ, ಈ ಕಾರಿನ ಹೆಡ್‌ಲ್ಯಾಂಪ್‌ಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಉತ್ಪಾದನೆಗೆ ಸಿದ್ಧವಾಗಿದೆ. ಟಾಟಾ ಮೋಟಾರ್ಸ್‌ನ Curvv ಕಾನ್ಸೆಪ್ಟ್ ಪೂರ್ಣ-ಅಗಲ LED DRL ಗಳನ್ನು ಉಳಿಸಿಕೊಂಡಿದೆ. ಈ ಟಾಟಾ Curvv ಕಾನ್ಸೆಪ್ಟ್ ವಿಶಿಷ್ಟ ಲುಕ್ ಅನ್ನು ಹೊಂದಿದೆ. ಈ ಕಾರು ವಿನ್ಯಾಸದ ಹೈಲೈಟ್ ಅದನ್ನು ಉತ್ಪಾದನೆಗೆ ಮಾಡಿದರೆ, ಎಸ್‍ಯುವಿಗಳು ಬಿ-ವಿಭಾಗದಲ್ಲಿ Curvv ಒಂದು ವಿಶಿಷ್ಟ ಕೊಡುಗೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications