ಮಧ್ಯಮ ವರ್ಗದ ಮಾರುತಿ ಸೆಲೆರಿಯೋ ಸ್ಪೆಷಲ್ ಎಡಿಷನ್ ತಂದ ಕಂಪನಿ: ಆಕಾಶಕ್ಕಿನ್ನು ಮೂರೇ ಗೇಣು!
ಮಾರುತಿ ಸುಜುಕಿ ಸೆಲೆರಿಯೋ ಕಾರು ಭಾರತದಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿರುವ ಕಾರು. ಇದಕ್ಕೆ ಪ್ರಮುಖ ಕಾರಣ ಎಂತಹ ಕುಟುಂಬಕ್ಕೂ ಕಾರು ಬೇಕೆಂದು ತೀರ್ಮಾನ ಮಾಡಿದರೆ ಮೊದಲು ಕಾಣುವ ಆಯ್ಕೆಯೇ ಈ ಮಾರುತಿ ಸುಜುಕಿ ಸೆಲೆರಿಯೋ. ಇದಕ್ಕೆ ಪ್ರಮುಖ ಕಾರಣ ಈ ಕಾರಿನ ಬೆಲೆ.
ಇದೀಗ ಬ್ಯಾಂಕಾಕ್ ಇಂಟರ್‌ನ್ಯಾಷನಲ್ ಮೋಟೋರ್ ಶೋ ನಲ್ಲಿ ಸುಜುಕಿ ಕಂಪನಿಯು ಈ ಸೆಲೆರಿಯೋ ಕಾರಿನ ಸ್ಪೆಷಲ್ ಎಡಿಷನ್ ಅನ್ನು ಪ್ರದರ್ಶನಕ್ಕೆ ಇಟ್ಟಿದ್ದು, ಎಲ್ಲರ ಗಮನ ಸೆಳೆದಿದೆ. ಹೌದು, BIMS 2024 ನಲ್ಲಿ ಸುಜುಕಿ ಕಂಪನಿಯು ತನ್ನ ಬಹುತೇಕ ಎಲ್ಲಾ ಕಾರು ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು, ಇದರಲ್ಲಿ ಹಲವು ಕಾರುಗಳ ಸ್ಪೆಷಲ್ ಎಡಿಷನ್‌ಗಳು ಸಹ ಇವೆ. ಇದರಲ್ಲಿ ಮೇಲೆ ತಿಳಿಸಿದಂತೆ ಸೆಲೆರಿಯೋ ಎಲ್ಲರ ಗಮನ ಸೆಳೆದಿದೆ.

ಸುಜುಕಿ ಸೆಲೆರಿಯೋ ಸ್ಪೆಷಲ್ ಎಡಿಷನ್ (Suzuki Celerio Special Editon) ಬಗ್ಗೆ ನೋಡುವುದಾದರೆ, ಈ ಕಾರು ಸಾಧಾರಣ ಸೆಲೆರಿಯೋಗಿಂತ ಕೊಂಚ ಅಧಿಕ ಮಸ್ಕುಲರ್ ಎಸ್‌ಯುವಿ ಲುಕ್‌ನಲ್ಲಿ ಕಂಡ ಭಾಸವಾಗುತ್ತದೆ. ಸಾಧಾರಣ ಸೆಲೆರಿಯೋಗಿಂತ ಹೆಚ್ಚಿನ ಫೀಚರ್ ಮತ್ತು ಇತರ ವಿಷಯಗಳು ಈ ಕಾರಿನಲ್ಲಿ ಇರುವುದು ಮೊದಲ ನೋಟದಲ್ಲಿಯೇ ತಿಳಿಯುತ್ತದೆ.
ಈ ಕಾರಿನ ಬದಿಗಳಿಂದ ನೋಡಿದಾಗ ಕಾರಿನ ಬಣ್ಣ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ನೀಲಿ ಮತ್ತು ಬಿಳಿ ಬಣ್ಣದಿಂದ ಕಂಗೊಳಿಸುತ್ತಿರುವ ಈ ಕಾರಿನ ಮೇಲ್ಬಾಗದಲ್ಲಿ ಕ್ಯಾರಿಯರ್ ಒಂದನ್ನು ಅಳವಡಿಸಲಾಗಿದ್ದು, ಇದು ಹೆಚ್ಚಿನ ಲಗೇಜ್‌ಗಳನ್ನು ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತದೆ. ಈ ಕಾರಿನ ಒಳಭಾಗದಲ್ಲಿಯೂ ಹೊರಭಾಗದ ನೀಲಿ ಬಣ್ಣವನ್ನು ಅಲ್ಲಲ್ಲಿ ನೀಡಲಾಗಿದೆ. ಇದು ಕಾರಿನ ಒಳಭಾಗದ ಫೀಲ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇನ್ನು ಭಾರತದಲ್ಲಿ ಇರುವ ಮಾರುತಿ ಸೆಲೆರಿಯೋ ಬಗ್ಗೆ ನೋಡುವುದಾದರೆ, ಮಾರುತಿ ತನ್ನ ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಕಾರಿನ ಮೇಲೆ ಎಎಮ್‌ಟಿ ಆವೃತ್ತಿಯ ಬೆಲೆಯು ರೂ.61,000 ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು, ಆದರೆ ಮ್ಯಾನುಯಲ್ ಮತ್ತು ಸಿಎನ್‌ಜಿ ಆವೃತ್ತಿಗಳಿಗೆ ಕ್ರಮವಾಗಿ, ರೂ 56,000 ಮತ್ತು ರೂ 39,000 ವರೆಗೆ ರಿಯಾಯಿತಿಗಳನ್ನು ಪಡೆಯುತ್ತವೆ. ಪ್ರಸ್ತುತ ಸೆಲೆರಿಯೊ ಬೆಲೆಯು 5.37 ಲಕ್ಷ-7.10 ಲಕ್ಷ ರೂ. ಆಗಿದೆ.
ಮಾರುತಿ ಸೆಲೆರಿಯೊ ಸ್ಲೀಕರ್ ವಿನ್ಯಾಸ, ಹೆಚ್ಚು ಪರಿಣಾಮಕಾರಿ ಎಂಜಿನ್ ಆಯ್ಕೆಗಳು, ಉತ್ತಮ ಕ್ಯಾಬಿನ್ ಸ್ಥಳ ಮತ್ತು ಅದರ ಹಿಂದಿನದಕ್ಕಿಂತ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ. ಮಾರುತಿ ಸೆಲೆರಿಯೊದಲ್ಲಿ 1.0 ಲೀಟರ್ ಕೆ 10ಸಿ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ 66 ಬಿಹೆಚ್‌ಪಿ ಪವರ್ ಹಾಗೂ 89 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಹೊಸ ಸೆಲೆರಿಯೊ ಐದು ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್‌ನೊಂದಿಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಸಹ ಪಡೆಯುತ್ತದೆ. ಈ ಮಾರುತಿ ಸೆಲೆರಿಯೊ ಕಾರು ಸಿಎನ್‌ಜಿ ಆಯ್ಕೆಯಲ್ಲಿಯು ಸಹ ಲಭ್ಯವಿದೆ. ಇದು 56.7 ಬಿಹೆಚ್‍ಪಿ ಪವರ್ ಮತ್ತು 82.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಮ್ಯಾನ್ಯುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಮಾತ್ರ ಬರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications